ಬುಧವಾರ, ಫೆಬ್ರವರಿ 19, 2020
18 °C
25 ವರ್ಷಗಳ ಹಿಂದೆ

ಸೋಮವಾರ, 27–12–1993

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕರಾನಂದ, ಠಾಕೂರ್ ರಾಜೀನಾಮೆ– ರಾವ್ ನಿರೀಕ್ಷೆ

ನವದೆಹಲಿ, ಡಿ. 26 (ಯುಎನ್‌ಐ, ಪಿಟಿಐ)– ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಆರೋಗ್ಯ ಸಚಿವ ಬಿ. ಶಂಕರಾನಂದ ಹಾಗೂ ಗ್ರಾಮೀಣ ಅಭಿವೃದ್ಧಿ ರಾಜ್ಯ ಸಚಿವ ರಾಮೇಶ್ವರ್ ಠಾಕೂರ್ ಅವರ ರಾಜೀನಾಮೆಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿರುವುದಾಗಿ ವಾರ್ತಾ ಸಂಸ್ಥೆಗಳು ವರದಿ ಮಾಡಿದ್ದು ರಾವ್ ಅವರು ಇಂದು ರಾಷ್ಟ್ರಪತಿ ಶಂಕರ ದಯಾಳ್ ಶರ್ಮ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಜೆಪಿಸಿ ವರದಿಯು ಶಂಕರಾನಂದ ಹಾಗೂ ರಾಮೇಶ್ವರ ಠಾಕೂರ್ಅವರನ್ನು ನಿರ್ದಿಷ್ಟವಾಗಿ ಹೆಸರಿಸಿ ಟೀಕಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕು ಎಂದುಪ್ರತಿಪಕ್ಷಗಳು ತೀವ್ರವಾಗಿ ಒತ್ತಾಯ ಮಾಡುತ್ತಿವೆ.

ಜಡಭರತ ಇನ್ನಿಲ್ಲ

ಹುಬ್ಬಳ್ಳಿ, ಡಿ. 26– ಖ್ಯಾತ ನಾಟಕಕಾರ ಹಾಗೂ ಮನೋಹರ ಗ್ರಂಥಮಾಲೆಯ ಸ್ಥಾಪಕರಾದ ಜಡಭರತರೆಂದೇ ಖ್ಯಾತಿ ಪ‍ಡೆದಿದ್ದ ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿ (89) ಅವರು ಇಂದು ರಾತ್ರಿ ಇಲ್ಲಿ ನಿಧನರಾದರು.

ಬಿಕ್ಕಟ್ಟು ಇತ್ಯರ್ಥಕ್ಕೆ ಜನವರಿ ಮೊದಲ ವಾರ ಪ್ರಧಾನಿ ಬೆಂಗಳೂರಿಗೆ

ಬೆಂಗಳೂರು, ಡಿ. 26– ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟನ್ನು ಬಗೆಹರಿಸುವ ಸಂಬಂಧದಲ್ಲಿ ಎಐಸಿಸಿ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ತಾವೇ ಖುದ್ದಾಗಿ ಜನವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)