ಮಂಗಳವಾರ, ಮೇ 11, 2021
25 °C

ಹಿಂದುಳಿದ ವರ್ಗಗಳ ಪರ ನಿರಂತರ ಹೋರಾಟ :ಸಚಿವ ವರ್ತೂರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ 22 ತಿಂಗಳ ಅವಧಿಗೆ ಸಚಿವ ಸ್ಥಾನ ಲಭಿಸಿರುವುದರಿಂದ ಹಿಂದುಳಿದ ವರ್ಗಗಳ ಜನರ ಏಳ್ಗೆಗೆ ಶ್ರಮಿಸುತ್ತೇನೆ. ಅಹಿಂದ ಜನರಿಗೆ ಅನ್ಯಾಯವಾದಾಗ ಅದನ್ನು ಸಹಿಸದೇ ನಿರಂತರ ಹೋರಾಟ ನಡೆಸುವುದಾಗಿ ಜವಳಿ ಸಚಿವ ವರ್ತೂರ ಪ್ರಕಾಶ ಭರವಸೆ ನೀಡಿದರು.ಅವರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 96ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಖಾಲಿಯಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ನೇಮಕ ಕುರಿತು ತಾವು ಮುಖ್ಯಮಂತ್ರಿ ಸದಾನಂದಗೌಡರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ದಿ.ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಸಂಘಟಿತ ಹೋರಾಟದಿಂದ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯವೆಂದು ಸಚಿವ ವರ್ತೂರ ಪ್ರಕಾಶ ಪ್ರತಿಪಾದಿಸಿದರು.ಮುಖ್ಯ ಅತಿಥಿಗಳಾಗಿ ಮೋರಟಗಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಕಮ್ಮ ಮಾಗಣಗೇರಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಮರತೂರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮಲ್ಲಿಕಾರ್ಜುನ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಾಯಮ್ಮ ತಳವಾರ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪುಂಡಲೀಕ ಗಾಯಕವಾಡ, ಜೆಡಿಎಸ್ ಮುಖಂಡ ಶಂಕರ ಕಟ್ಟಿಸಂಗಾವಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಮಾನಪ್ಪ ಪೂಜಾರಿ, ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪ ಹೊನ್ನಾಳ, ಬಿಎಸ್‌ಪಿ ಮುಖಂಡ ಶಿವಲಿಂಗಪ್ಪ ಕಿನ್ನೂರ ಹಾಗೂ ವಿವಿಧ ಸಮಾಜಗಳ ಅಧ್ಯಕ್ಷರುಗಳು ಆಗಮಿಸಿದ್ದರು. ತಾಲ್ಲೂಕು ಅಹಿಂದ ಮುಖಂಡ ಬೈಲಪ್ಪ ನೆಲೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಉಪನ್ಯಾಸಕ ರಾಜಪ್ಪ ದಳವಾಯಿ ದಿ.ದೇವರಾಜ ಅರಸು ಅವರ ಜೀವನ,ಸಾಧನೆ ಕುರಿತು ಉಪನ್ಯಾಸ ನೀಡಿದರು. ನೆಲೋಗಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಬಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವರ್ತೂರ ಪ್ರಕಾಶ ಯುವಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನೆಲೋಗಿ, ನಾಗಣ್ಣ ಗಡ್ಡದ ನರಿಬೋಳ, ಬಹದ್ದೂರ ರಾಠೋಡ, ವಕೀಲ ನಾಯಕ, ಅಣ್ಣಾರಾಯ ನರಿಬೋಳ, ಗುಂಡಪ್ಪಗೌಡ ಹಾಲಘತ್ತರಗಾ, ಮಲ್ಲಿಕಾರ್ಜುನ ದಿನ್ನಿ, ದಾದಾಪಟೇಲ ಭೋಸಗಾ (ಬಿ), ದಲಿತ ಪ್ಯಾಂಥರ ಜಿಲ್ಲಾಧ್ಯಕ್ಷ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಸಂಗೋಳ್ಳಿ ರಾಯಣ್ಣ ಸಂಘದ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ಕನಕ, ಸಿದ್ರಾಮ ಕಟ್ಟಿ, ಸುಭಾಷ ಕಾಂಬಳೆ, ಶಿವಶರಣಪ್ಪ ಜಂಬೇರಾಳ, ಶಿವಪುತ್ರಪ್ಪ ಕೋಣಿನ್, ಅಮೃತ ಮಾಳಾಮನಿ, ಎಮ್.ಎಸ್.ಪಾಟೀಲ, ಭೂತಾಳಿ ದಾವಜಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಹಿಂದ ಮುಖಂಡರು, ಹಿಂದುಳಿದ ವರ್ಗಗಳ ಜನರು, ಮಹಿಳೆಯರು ಪಾಲ್ಗೊಂಡಿದ್ದರು.ಮಲ್ಲಿಕಾರ್ಜುನ ನೆಲೋಗಿ ಸ್ವಾಗತಿಸಿದರು, ಎಸ್.ಎಸ್.ಮಾಲಿಬಿರಾದಾರ ನಿರೂಪಿಸಿದರು, ರಾಜಶೇಖರ ಮುತ್ತಕೋಡ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.