ಪ್ರಜಾವಾಣಿ’ ಕೋಮುವಾದಿ ಅಲ್ಲ; ಆಂಧ್ರದ ತಪ್ಪೊಪ್ಪಿಗೆ

7

ಪ್ರಜಾವಾಣಿ’ ಕೋಮುವಾದಿ ಅಲ್ಲ; ಆಂಧ್ರದ ತಪ್ಪೊಪ್ಪಿಗೆ

Published:
Updated:
Deccan Herald

‘ಪ್ರಜಾವಾಣಿ’ ಕೋಮುವಾದಿ ಅಲ್ಲ; ಆಂಧ್ರದ ತಪ್ಪೊಪ್ಪಿಗೆ

ಹೈದರಾಬಾದ್, ಆ. 10– ಆಂಧ್ರ ಸರ್ಕಾರವು ತಯಾರಿಸಿದ್ದ ‘ಕೋಮುವಾದಿ’ ಪತ್ರಿಕೆಗಳ ಪಟ್ಟಿಯಿಂದ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯ ಹೆಸರನ್ನು ತೆಗೆದು ಹಾಕಲಾಗಿದೆ.

‘ಪ್ರಜಾವಾಣಿ’ಯು ಸೇರಿ ರಾಷ್ಟ್ರದ ಇಪ್ಪತ್ತು ಪ್ರಮುಖ ದಿನಪತ್ರಿಕೆಗಳನ್ನು ‘ಕೋಮುವಾದಿ’ ಎಂದು ಅಂಧ್ರ ಸರ್ಕಾರ ಪಟ್ಟಿ ಮಾಡಿ ಇವುಗಳಿಗೆ ಸರ್ಕಾರಿ ಜಾಹೀರಾತು ನೀಡಬಾರದೆಂದು ಸುತ್ತೋಲೆ ಹೊರಡಿಸಿತ್ತು. ಆದರೆ ಸರ್ಕಾರದ ಈ ಕ್ರಮವನ್ನು ಇತ್ತೀಚೆಗೆ ಎಲ್ಲ ಕಡೆಯಿಂದಲೂ ಟೀಕಿಸಲಾಗಿತ್ತು.

‘ಕೋಮುವಾದಿ ಪತ್ರಿಕೆಗಳ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಇತರ ‍ಪತ್ರಿಕೆಗಳು: ದೆಹಲಿಯ ಇಂಗ್ಲಿಷ್ ದಿನಪತ್ರಿಕೆ ‘ಪೇಟ್ರಿಯಟ್’ ಮತ್ತು ‘ಲಿಂಕ್’, ವಿಜಯವಾಡದಿಂದ ಪ್ರಕಟವಾಗುವ ‘ಆಂಧ್ರ ಜ್ಯೋತಿ’.

‘ತೀನ್‌ಮೂರ್ತಿ’ ಬಳಕೆ ಕುರಿತ ನಿರ್ಧಾರ ಸಂಪುಟದ್ದು; ಶಾಸ್ತ್ರಿ ಹೆಸರು ಪ್ರಸ್ತಾಪಕ್ಕೆ ಆಕ್ಷೇಪ

ನವದೆಹಲಿ, ಆ. 10– ‘ತೀನ್‌ಮೂರ್ತಿ’ ಭವನವನ್ನು ಪ್ರಧಾನಿಯ ಕಾಯಂ ನಿವಾಸ ಮಾಡುವ ಪ್ರಶ್ನೆಯಲ್ಲಿ ದಿವಂಗತ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ಮಧುಲಿಮಯೆ ಅವರು ‘ಎಳೆದಿರುವುದಕ್ಕೆ’ ಪ್ರಧಾನಿ ಇಂದಿರಾಗಾಂಧಿಯವರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !