ಮಂಗಳವಾರ, ಮೇ 24, 2022
21 °C

ದುಃಖದ ಮಡುವಿನಲ್ಲಿ ಬಿದನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಯಾದಗಿರಿಯಲ್ಲಿ ಮೃತಪಟ್ಟ ಸಂಬಂಧಿಕರ ಶವಸಂಸ್ಕಾರ ಕಾರ್ಯ ಮುಗಿಸಿಕೊಂಡು ಮರಳಿ ಬರುವಾಗ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಅವರಾದ-ಕೆಲ್ಲೂರ ರಸ್ತೆಯಲ್ಲಿ ನಿಂತಿದ್ದ ಕ್ರೂಜರ್‌ಗೆ ಲಾರಿ ಡಿಕ್ಕಿ ಹೊಡೆದು ಎಂಟು ಜನ ಮೃತಪಟ್ಟಿದ್ದು ಶವವನ್ನು ಅಫಜಲಪುರ ತಾಲ್ಲೂಕಿನ ಸ್ವ-ಗ್ರಾಮ ಬಿದನೂರಗೆ ತರಲಾಯಿತು. ಅಲ್ಲಿ ಮೃತರ ಕುಟುಂಬದ ಸಂಬಂಧಿಕರು ಶವಗಳ ಮುಂದೆ ರೋದಿಸುವುದು ಶನಿವಾರ ಕಂಡುಬಂತು.ಸತ್ತವರಲ್ಲಿ ಒಂದೇ ಕುಟುಂಬವಾಗಿದ್ದರೂ ಒಂದೇ ಕುಟುಂಬದ ಅಣ್ಣ ತಮ್ಮಂದಿರು, ಚಿಕ್ಕಪ್ಪ ಇದರಲ್ಲಿ ಸೇರಿದ್ದಾರೆ. ಸುಭದ್ರಾಬಾಯಿ, ಸಾಬವ್ವ, ಮರೆಮ್ಮ, ಮರೆಮ್ಮ ಮರೆಪ್ಪ ಹಳ್ಳಿಕೇರಿ, ರತ್ನಾಬಾಯಿ, ಶರಣಮ್ಮ, ಹಣಮಂತ ಬಸಪ್ಪ ಹಳ್ಳಿಕೇರಿ ಮೃತಪಟ್ಟಿದ್ದು ಶವಗಳ ಎದುರು ರೋದನ ಮುಗಿಲು ಮುಟ್ಟಿತ್ತು.ಬಿದನೂರ ಗ್ರಾಮದಲ್ಲಿ ರಾತ್ರಿಯಿಂದಲೆ ಮೃತಪಟ್ಟ ಕುಟುಂಬ ಸಂಬಂಧಿಕರು ರೋದಿಸಲು ಆರಂಭಿಸಿದ್ದರು. ಗ್ರಾಮಕ್ಕೆ ಶವಗಳು ಬಂದ ನಂತರ ಸಂಬಂಧಿಕರ ದುಃಖ ಮತ್ತಷ್ಟು ಹೆಚ್ಚಾಯಿತು. 8 ಶವಗಳನ್ನು ಬಿದನೂರ ಗ್ರಾಮದ ಹೊರಗಡೆ ಶಾಮಿಯಾನ ಹಾಕಿ ಒಂದೇ  ಕಡೆ ಹಾಕಲಾಗಿತ್ತು. ಶವಗಳ ಮುಂದೆ ಸಂಬಂಧಟಪ್ಟ ಕುಟುಂಬದವರು ದುಃಖಿಸುತ್ತಿರುವುದು ಕಂಡುಬಂತು.ಅದರಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳು, ಮಗಳು ಕಳೆದುಕೊಂಡ ತಾಯಿ ಶವಗಳ ಮುಂದೆ ರೋದಿಸುತ್ತಿರುವುದು ಸಾಮಾನ್ಯವಾಗಿತ್ತು. ಸುತ್ತಲಿನ ಗ್ರಾಮಸ್ಥರು ಮತ್ತು ಸಂಬಂಧಿಕರು ತಂಡೋಪತಂಡವಾಗಿ ಬಿದನೂರ ಗ್ರಾಮಕ್ಕೆ ಬರುತ್ತಿದ್ದರು. `ಇಂತಹ ಘಟನೆ ನಾವು ಕಂಡಿರಲಿಲ್ಲ ಇದು ನಮ್ಮೂರಿಗೆ ಬರಬೇಕೆ~ ಎಂದು ಸಂಬಂಧಿಕರು ನೋವಿನಿಂದ ಹೇಳಿಕೊಳ್ಳುತ್ತಿದ್ದರು.ಇಡಿ ಗ್ರಾಮವೆ ದುಃಖದ ಮಡುವಿನಲ್ಲಿದೆ. ಗ್ರಾಮಸ್ಥರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳುತ್ತ ಅವರ ದುಃಖದಲ್ಲಿ ಪಾಲುದಾರರಾಗಿ ಶವಸಂಸ್ಕಾರ ಕಾರ್ಯಕ್ಕೆ ಸಹಕರಿಸಿದರು. ಮಧ್ಯಾಹ್ನ ಗ್ರಾಮದ ಹೊರಗಡೆ ಸಾಮೂಹಿಕವಾಗಿ ಶವಸಂಸ್ಕಾರ ಮಾಡಲಾಯಿತು.

-

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.