ರೈತ ಮುಖಂಡರೊಂದಿಗೆ ಸಿ.ಎಂ ಮತ್ತೆ ಚರ್ಚೆ

7

ರೈತ ಮುಖಂಡರೊಂದಿಗೆ ಸಿ.ಎಂ ಮತ್ತೆ ಚರ್ಚೆ

Published:
Updated:

ಬೆಳಗಾವಿ: ನಾಡಿನ ಅನ್ನದಾತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ದವಾಗಿದ್ದು, ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮನವಿ ಮಾಡಿಕೊಂಡರು.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತರ ನಿಯೋಗದೊಂದಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಚರ್ಚೆ ನಡೆಸಿದ ಅವರು, ‘ಕಬ್ಬು ಬೆಳೆಗಾರದ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಕೊಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ನಾಡಿನ ಅನ್ನದಾತರು ಯಾವುದೇ ಕಾರಣಕ್ಕೂ ಹತಾಶರಾಗಬಾರದು. ನಿಮ್ಮ ರಕ್ಷಣೆಗೆ ಸರ್ಕಾರ ಸದಾ ಬದ್ಧ’ ಎಂದರು.

ರೈತರ ಉತ್ಪನ್ನಗಳನ್ನು ನಿರ್ವಾತ ಚೀಲ (ವ್ಯಾಕುಮ್ ಪ್ಯಾಕ್) ಮೂಲಕ ಮಾರಾಟ ಮಾಡಿದರೆ, ದೀರ್ಘ ಕಾಲ ಉತ್ಪನ್ನಗಳನ್ನು ಕಾಯ್ದಿರಿಸಬಹುದು. ಇದರಿಂದಾಗಿ ರೈತರು, ಬೆಲೆ ಕುಸಿತದಿಂದ ಕಂಗಾಲಾಗಬೇಕಿಲ್ಲ ಎಂದು ಆತ್ಮವಿಶ್ವಾಸ ತುಂಬಿದರು.

ಇದೇ ವೇಳೆ ರೈತರ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ ನಿರ್ವಾತ ಚೀಲದ ಧಾನ್ಯಗಳನ್ನು ವೀಕ್ಷಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !