ಬುಧವಾರ, ಫೆಬ್ರವರಿ 26, 2020
19 °C

ದೇಶದ ಸುರಕ್ಷತೆಯಲ್ಲಿ ರಾಹುಲ್‌ ರಾಜಕೀಯ: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸುಳ್ಳಿನ ಅಭಿಯಾನ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸುರಕ್ಷತೆ ವಿಷಯದಲ್ಲಿ ಚೆಲ್ಲಾಟ ಆಡಿರುವ ರಾಹುಲ್‌ ಮುಖಕ್ಕೆ ಸುಪ್ರೀಂ ಕೋರ್ಟ್‌ ಮಂಗಳಾರತಿ ಮಾಡಿದೆ ಎಂದು ಛೇಡಿಸಿದರು.

ಎರಡು ರಾಷ್ಟ್ರಗಳ ಮಧ್ಯೆ ನಡೆದ ಪಾರದರ್ಶಕ ವ್ಯಾಪಾರ ಒಪ್ಪಂದವನ್ನು ಅನುಮಾನದಿಂದ ನೋಡಿದ ಕಾಂಗ್ರೆಸ್‌ ಪಕ್ಷ ದೇಶದ ರಕ್ಷಣಾ ಹಿತಾಸಕ್ತಿಯನ್ನು ಮೂಲೆ ಗುಂಪು ಮಾಡಿತ್ತು. ಯುಪಿಎ ಅಧಿಕಾರ ಅವಧಿಯಲ್ಲಿ ಯುದ್ಧ ವಿಮಾನ ಖರೀದಿ ಏಕೆ ಮಾಡಲಿಲ್ಲ. ಇದಕ್ಕೆ ಕಾರಣ ತಿಳಿಸಬೇಕು ಎಂದು ಒತ್ತಾಯಿಸಿದರು.

ಸಂಸತ್ತಿನಲ್ಲಿ ರಫೇಲ್‌ ಕುರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸುವ ಕಾಂಗ್ರೆಸ್‌, ಈ ಕುರಿತು ಚರ್ಚೆ ನಡೆಯುವುದನ್ನು ಏಕೆ ವಿರೋಧಿಸುತ್ತಿದೆ. ಸದನದಲ್ಲಿ ಈ ವಿಷಯದ ಚರ್ಚೆ ನಡೆಯದಂತೆ ಮಾಡುವ ಹುನ್ನಾರಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಅಧ್ಯಕ್ಷರು ದೇಶದ ಸುರಕ್ಷತೆ ವಿಚಾರದಲ್ಲಿ ರಾಜಕೀಯ ಲಾಭಗಳಿಸಲು ಪ್ರಯತ್ನಿಸಿದ್ದೂ ಅಲ್ಲದೆ ಗಡಿಗಳಲ್ಲಿ ದೇಶ ಕಾಯುವ ಸೈನಿಕರಿಗೂ ಅವಮಾನ ಮಾಡಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು