‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಚಾಲನೆ

7

‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಚಾಲನೆ

Published:
Updated:
Prajavani

ಪೀಣ್ಯದಾಸರಹಳ್ಳಿ: ಶೆಟ್ಟಿಹಳ್ಳಿಯ ತಮ್ಮ ನಿವಾಸದಲ್ಲಿ ನಗರಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಪಕ್ಷದ ಧ್ವಜ ಕಟ್ಟುವ ಮೂಲಕ 'ನಮ್ಮ ಮನೆ ಬಿಜೆಪಿ ಮನೆ' ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ತಂದು ಭಾರತದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ನಮ್ಮೆಲ್ಲ ಕಾರ್ಯಕರ್ತರು ಮನೆಗಳ ಮೇಲೆ ಧ್ವಜಾರೋಹಣ ಮಾಡಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪವನ್ನು ಮಾಡೋಣ' ಎಂದರು.

ಬಿಜೆಪಿ ಮುಖಂಡರಾದ ಬಿ.ಎಲ್.ಎನ್.ಸಿಂಹ, ಬಿ.ಎಂ.ನಾರಾಯಣ್, ಕೃಷ್ಣಮೂರ್ತಿ, ಮ್ಯಾದರಹಳ್ಳಿ ಸೋಮಶೇಖರ್, ಅಬ್ಬಿಗೆರೆ ಲೋಕೇಶ್, ವಿನೋದ್‌ಗೌಡ, ಮಹಿಳಾ ಮುಖಂಡರಾದ ಸುಜಾತಾ, ರಾಜೇಶ್ವರಿ, ಸುಜಾತಾ ಎಸ್.ಮುನಿರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !