ಅತ್ಯಾಚಾರ: ಕ್ರಿಕೆಟಿಗನಿಗೆ ಐದು ವರ್ಷ ಜೈಲು

ಶನಿವಾರ, ಮೇ 25, 2019
22 °C

ಅತ್ಯಾಚಾರ: ಕ್ರಿಕೆಟಿಗನಿಗೆ ಐದು ವರ್ಷ ಜೈಲು

Published:
Updated:

ಲಂಡನ್: ಕ್ರಿಕೆಟ್ ಟೂರ್ನಿಯೊಂದರಲ್ಲಿ ಆಡಲು ಇಂಗ್ಲೆಂಡ್‌ಗೆ ಬಂದಿದ್ದ ಆಸ್ಟ್ರೇಲಿಯಾದ ಯುವ ಆಟಗಾರ ಅಲೆಕ್ಸ್‌ ಹೆಪ್ಟರ್ನ್ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಆಟಗಾರನಿಗೆ ಇಂಗ್ಲೆಂಡ್ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಲಂಡನ್‌ನ ಕ್ಲಬ್‌ವೊಂದನ್ನು ಪ್ರತಿನಿಧಿಸುತ್ತಿದ್ದ 23 ವರ್ಷದ ಅಲೆಕ್ಸ್‌, ತಮ್ಮ ಸಹ ಆಟಗಾರನ ಕೋಣೆಗೆ ಮಹಿಳೆಯೊಬ್ಬರನ್ನು ಕರೆತಂದು ಅತ್ಯಾಚಾರವೆಸಗಿದ್ದ. ಮೊಬೈಲ್ ಫೋನ್‌ನಲ್ಲಿರುವ ಲೈಂಗಿಕ ಗೇಮ್‌ವೊಂದರಿಂದ ಪ್ರೇರಿತನಾಗಿ ಈ ದುಷ್ಕೃತ್ಯ ಎಸಗಿದ್ದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.  ಸ್ವತಃ ಅಲೆಕ್ಸ್ ಕೂಡ ತಪ್ಪೊಪ್ಪಿಗೆ ನೀಡಿದ್ದಾನೆಂದು ಮೂಲಗಳು ತಿಳಿಸಿರುವುದಾಗಿ ಬಿಬಿಸಿ ನ್ಯೂಸ್ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !