ವಯಸ್ಸು ಬಹಿರಂಗಪಡಿಸಿದ ಆಫ್ರಿದಿ

ಶುಕ್ರವಾರ, ಮೇ 24, 2019
23 °C

ವಯಸ್ಸು ಬಹಿರಂಗಪಡಿಸಿದ ಆಫ್ರಿದಿ

Published:
Updated:
Prajavani

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ಶಾಹೀದ್ ಆಫ್ರಿದಿ ಅವರು ತಮ್ಮ ನಿಜವಾದ ವಯಸ್ಸನ್ನು ಬಹಿರಂಗಪಡಿಸಿದ್ದಾರೆ.

‘ನಾನು 1975ರಲ್ಲಿ ಜನಿಸಿದ್ದೇನೆ. ನೈರೋಬಿಯಲ್ಲಿ 1996ರಲ್ಲಿ ಶ್ರೀಲಂಕಾ ಎದುರಿನ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿದ್ದೆ. ಆಗ ನನಗೆ 16 ವರ್ಷವಾಗಿರಲಿಲ್ಲ. 19 ವರ್ಷವಾಗಿತ್ತು. ಆದರೆ, ಅಧಿಕೃತ ದಾಖಲೆಗಳಲ್ಲಿ ನಾನು ಜನಿಸಿದ ವರ್ಷವನ್ನು 1980 ಎಂದು ತಪ್ಪಾಗಿ ನಮೂದಿಸಿದ್ದಾರೆ’ ಎಂದು ಆಫ್ರಿದಿ  ಹೇಳಿದ್ದಾರೆ.

2016ರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ನಂತರ  ಆಫ್ರಿದಿ ನಿವೃತ್ತರಾಗಿದ್ದರು. 27 ಟೆಸ್ಟ್, 398 ಏಕದಿನ ಮತ್ತು 99 ಟ್ವೆಂಟಿ–20 ಪಂದ್ಯಗಳನ್ನು ಅವರು ಆಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !