ಭಾನುವಾರ, ಸೆಪ್ಟೆಂಬರ್ 19, 2021
30 °C
ಮಕ್ಕಳ ಬಾಯಲ್ಲೂ ನಿಖಿಲ್‌, ಸುಮಲತಾ!

‘ಚುನಾವಣಾ ಆಟ’ದ ಚಿಣ್ಣರ ಬಾಯಲ್ಲೂ ‘ಈ ಬಾರಿ ನಿಖಿಲ್‌ ಬಂದಾನೋ, ಸುಮಲತಾ ಬಂದಾಳೋ’...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಮಳೆ ನಿಂತರೂ ಮರದ ಹನಿ ನಿಂತಿಲ್ಲ’ ಎಂಬ ಮಾತಿನಂತೆ ಮತದಾನ ಮುಗಿದಿದ್ದರೂ ಜಿಲ್ಲೆಯಲ್ಲಿ ಸೋಲು–ಗೆಲುವುಗಳ ಚರ್ಚೆ ಕಡಿಮೆಯಾಗಿಲ್ಲ. ದೊಡ್ಡವರ ಚರ್ಚೆ ಹಾಗಿರಲಿ, ಮಕ್ಕಳ ಬಾಯಲ್ಲೂ ಕೆ.ನಿಖಿಲ್‌, ಎ.ಸುಮಲತಾ ಅವರ ಚರ್ಚೆಗಳೇ ನಡೆಯುತ್ತಿವೆ.

ತಾಲ್ಲೂಕಿನ ಲೋಕಸರ ಗ್ರಾಮದ ಚಿಣ್ಣರು ರಂಗದಬೀದಿಯಲ್ಲಿ ಆಡಿರುವ ‘ಚುನಾವಣಾ ಆಟ’ ಎಲ್ಲರ ಗಮನ ಸೆಳೆದಿದೆ. ಆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಬ್ಬಬ್ಬಬ್ಬಾ ಏನ್ ನಮ್ಮ ಮಂಡ್ಯ ಹೈಕ್ಳು ಗುರು ಪ್ರಳಯಾಂತಕರು.....😂😂😂😂 ಎಂಬ ಉಲ್ಲೇಖದೊಂದಿಗೆ ವಿಜಯ್‌ ಗೌಡ ಎಂಬುವರ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೊ ಇದೆ.

ವಿಡಿಯೊ ನೋಡಿ...

ಹುಡುಗನೊಬ್ಬ ಮೈಮೇಲೆ ದೇವರು ಬಂದಂತೆ ಕುಣಿಯುತ್ತಾ ಬರುತ್ತಾನೆ. ಮಕ್ಕಳೆಲ್ಲರೂ ಕೋಲಾಟ ಆಡುತ್ತಾ ದೇವರನ್ನು ಮೆರೆಸುತ್ತಾರೆ. ಒಬ್ಬ ಬಾಲಕ ದೇವರನ್ನು ತಬ್ಬಿ ಹಿಡಿದುಕೊಂಡರೆ ಮತ್ತೊಬ್ಬ ಬಾಲಕ ಪ್ರಶ್ನೆ ಕೇಳುತ್ತಾನೆ. ‘ಈ ಬಾರಿ ನಿಖಿಲ್‌ ಬಂದಾನೋ, ಸುಮಲತಾ ಬಂದಾಳೋ’ ಎಂದು ದೇವರಿಗೆ ಪ್ರಶ್ನೆ ಕೇಳುತ್ತಾನೆ. ಆಗ ದೇವರು ‘ಸುಮಲತಾ...’ ಎಂದು ಕೂಗುತ್ತದೆ. ನಂತರ ದೇವರ ಉತ್ಸವ ಮುಂದುವರಿಯುತ್ತದೆ.

ದೇವರು ಬಂದಂತೆ ಕುಣಿಯುವ ಬಾಲಕನ ಸೊಗಸಾದ ಅಭಿನಯ ನೋಡುಗರ ಕಣ್ಣುಗಳನ್ನು ಅರಳಿಸುತ್ತದೆ. 25 ಸೆಕೆಂಡ್‌ಗಳ ವಿಡಿಯೊ ಮಂಡ್ಯ ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು