ಮಂಗಳವಾರ, ಸೆಪ್ಟೆಂಬರ್ 17, 2019
25 °C

ಪಿಯುಸಿ ಟಾಪರ್‌ಗೆ ಸನ್ಮಾನ 

Published:
Updated:
Prajavani

ವಿಟ್ಲ: ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಕಾಲೇಜಿನ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮಾ ಕೆ. ಅವರನ್ನು ಬಂಟ್ವಾಳ ತಾಲ್ಲೂಕಿನ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ವತಿಯಿಂದ ಅಭಿನಂದಿಸಲಾಯಿತು.

ಬದಿಯಡ್ಕದ ಅವರ ಮನೆಗೆ ಭೇಟಿ ನೀಡಿದ ತಂಡದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವಿಟ್ಲ ಶಾಖೆಯ ಅಧ್ಯಕ್ಷ ಹೈದರ್ ಅಲಿ, ಎಸ್ಐಓ ಅಧ್ಯಕ್ಷ ರಿಜ್ವಾನ್, ಪಾಣೆಮಂಗಳೂರು ಅಧ್ಯಕ್ಷ ತಮೀಜ್, ಕಾರ್ಯದರ್ಶಿ ಮುಬಾರಿಶ್, ವಿಟ್ಲ ಯೂನಿಟ್‌ನ ಉಮರುಲ್ ಫಾರೂಕ್ ಇದ್ದರು.

Post Comments (+)