ರದ್ದಾದ ನೆಹರೂ ನಿಲಯ ಉದ್ಘಾಟನೆ

ಸೋಮವಾರ, ಜೂನ್ 17, 2019
22 °C

ರದ್ದಾದ ನೆಹರೂ ನಿಲಯ ಉದ್ಘಾಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಸೋಮವಾರ ನಡೆಯಬೇಕಿದ್ದ ನವೀಕೃತ ನೆಹರೂ ನಿಲಯದ ಉದ್ಘಾಟನೆ ಕಾರ್ಯಕ್ರಮ ನಾಟಕಕಾರ, ಸಾಹಿತಿ ಗಿರೀಶ ಕಾರ್ನಾಡ ಅವರ ನಿಧನದಿಂದಾಗಿ ಕೊನೆಯ ಗಳಿಗೆಯಲ್ಲಿ ರದ್ದಾಯಿತು.

ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಶಾಸಕ ಡಾ.ಕೆ.ಸುಧಾಕರ್ ಅವರು ಕಾರ್ಯಕ್ರಮಕ್ಕಾಗಿ ಬೆಟ್ಟಕ್ಕೆ ಬಂದಿದ್ದರು. ಆದರೆ, ಕಾರ್ನಾಡರ ಸಾವಿನ ಸುದ್ದಿ ತಿಳಿದು ಕಾರ್ಯಕ್ರಮ ರದ್ದುಗೊಳಿಸಿ, ಮೌನಾಚರಣೆ ನಡೆಸಿ ವಾಪಾಸಾದರು.

ಈ ವೇಳೆ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್, ‘ರಾಜ್ಯದ ಹೆಮ್ಮೆಯ ಪುತ್ರ, ನಾಟಕಕಾರ, ಲೇಖಕ, ನಟರಾಗಿದ್ದ ಗಿರೀಶ ಕಾರ್ನಾಡ ಅವರು ಸಮಾಜದ ಸ್ವಾಸ್ಥ್ಯ ಉತ್ತಮವಾಗಿರಬೇಕು ಎಂಬ ಧ್ಯೇಯದೊಂದಿಗೆ ಹೋರಾಟಗಾರರಾಗಿಯೂ ಅವರು ಕೆಲಸ ಮಾಡಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ’ ಎಂದು ಹೇಳಿದರು.

‘ದೇಶ ಇವತ್ತು ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ. ಒಬ್ಬ ಬಡ ಕುಟುಂಬದ ವ್ಯಕ್ತಿ ತಮ್ಮ ಆದರ್ಶ, ತತ್ವ ಸಿದ್ಧಾಂತಗಳಿಂದ ಎಷ್ಟರಮಟ್ಟಿಗೆ ಖ್ಯಾತರಾಗಬಹುದು ಎನ್ನುವುದಕ್ಕೆ ಅವರ ಬದುಕೇ ಸಾಕ್ಷಿ. ಕನ್ನಡಿಗರು ಕಾರ್ನಾಡರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ’ ಎಂದು ತಿಳಿಸಿದರು.

ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಆಯುಕ್ತ ಡಾ.ಎಂ.ವಿ.ವೆಂಕಟೇಶ್, ನಂದಿಬೆಟ್ಟದ ವಿಶೇಷ ಅಧಿಕಾರಿ ರಮೇಶ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !