ಶಾಸಕರ ರಾಜೀನಾಮೆ ಶೀಘ್ರದಲ್ಲೇ ವಾಪಸ್‌: ಡಿ.ಕೆ. ಶಿವಕುಮಾರ್‌

ಶನಿವಾರ, ಜೂಲೈ 20, 2019
23 °C
‘ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ’

ಶಾಸಕರ ರಾಜೀನಾಮೆ ಶೀಘ್ರದಲ್ಲೇ ವಾಪಸ್‌: ಡಿ.ಕೆ. ಶಿವಕುಮಾರ್‌

Published:
Updated:
Prajavani

ಮದ್ದೂರು (ಮಂಡ್ಯ ಜಿಲ್ಲೆ): ‘ಆನಂದ ಸಿಂಗ್‌ ಹಾಗೂ ರಮೇಶ ಜಾರಕಿಹೊಳಿ ಅವರ ಮನವೊಲಿಸಲಾಗಿದ್ದು, ಶೀಘ್ರದಲ್ಲೇ ರಾಜೀನಾಮೆ ವಾಪಸ್‌ ಪಡೆಯಲಿದ್ದಾರೆ’ ಎಂದು ಮಂಗಳವಾರ ಇಲ್ಲಿ ಭರವಸೆ ವ್ಯಕ್ತಪಡಿಸಿದ ಸಚಿವ ಡಿ.ಕೆ.ಶಿವಕುಮಾರ್, ಶಾಸಕರ ರಾಜೀನಾಮೆಗೆ ಯಾರು ಕಾರಣ ಎಂಬುದರ ಮಾಹಿತಿ ತಮಗಿದೆ ಎಂದರು.

ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಅವರ ಸೋದರ, ಎಸ್‌.ಎಂ.ಶಂಕರ ಅವರ ಉತ್ತರ ಕ್ರಿಯಾದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಪರೇಷನ್ ಕಮಲದಿಂದ ಸಮ್ಮಿಶ್ರ ಸರ್ಕಾರವನ್ನು ಅಭದ್ರ ಮಾಡಬಹುದು ಎಂದು ಬಿಜೆಪಿಯವರು ಅಂದುಕೊಂಡರೆ ಅದು ಅವರ ಭ್ರಮೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಸರ್ಕಾರ ಸುಭದ್ರವಾಗಿರಲಿದೆ. ಇದರಿಂದ ಬಿಜೆಪಿಯವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.

ಎಸ್‌.ಎಂ. ಕೃಷ್ಣ ಕಾಲಿಗೆರಗಿದ ಸಚಿವ
ಎಸ್.ಎಂ.ಶಂಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಾಜರಿದ್ದ ತಮ್ಮ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರ ಕಾಲಿಗೆ ನಮಸ್ಕರಿಸಿದ ಸಚಿವ ಡಿ.ಕೆ. ಶಿವಕುಮಾರ್‌, ಅವರ ಜೊತೆ ಭೋಜನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !