ಶನಿವಾರ, ಏಪ್ರಿಲ್ 10, 2021
32 °C

ಟೇಬಲ್‌ ಟೆನಿಸ್‌ ಟೂರ್ನಿ: ಸಮರ್ಥ್‌, ಖುಷಿಗೆ ಸಿಂಗಲ್ಸ್‌ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಂಗಳೂರಿನ ಬಿಎನ್‌ಎಂ ಕ್ಲಬ್‌ ಪ್ರತಿನಿಧಿಸುವ ವಿ. ಖುಷಿ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ಸಮರ್ಥ ಕುರ್ಡಿಕೇರಿ, ಧಾರವಾಡದಲ್ಲಿ ನಡೆಯುತ್ತಿರುವ ಕಾಸ್ಮಸ್‌ ಕ್ಲಬ್‌ ರಾಜ್ಯಮಟ್ಟದ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಯೂತ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಕಾಸ್ಮಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಖುಷಿ 13-11, 11-13, 11-9, 7-11, 12-10, 12-10ರಲ್ಲಿ ಸ್ಕೈಸ್‌ ಕ್ಲಬ್‌ನ ಯಶಸ್ವಿನಿ ಘೋರ್ಪಡೆ ಎದುರು ಗೆಲುವು ಪಡೆದರು. ಬಾಲಕರ ವಿಭಾಗದಲ್ಲಿ ಧಾರವಾಡ ಮೂಲದ ಸಮರ್ಥ 11-5, 11-8, 11-7, 11-4ರಲ್ಲಿ ಎಂಎಸ್‌ಎಸ್‌ ಕ್ಲಬ್‌ನ ಜಿ.ಎಸ್‌. ಸಂಕೇತ್‌ ಅವರನ್ನು ಮಣಿಸಿ ಚಾಂಪಿಯನ್‌ ಆದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಖುಷಿ 10-12, 12-14, 12-10, 11-6, 11-7, 11-8ರಲ್ಲಿ ಎಂಎಸ್‌ಎಸ್‌ ಕ್ಲಬ್‌ನ ಬಿ.ಟಿ. ಕೌಮುದಿ ಪಟ್ನಾಂಕರ್‌ ಮೇಲೂ, ಯಶಸ್ವಿನಿ 11-4, 11-7, 13-11, 11-2ರಲ್ಲಿ ಮಂಗಳೂರಿನ ಮಹಾಪತಿ ಟೇಬಲ್‌ ಟೆನಿಸ್‌ ಅಕಾಡೆಮಿಯ ಪ್ರೇಕ್ಷಾ ಪಿ. ಕರ್ಕೇರಾ ವಿರುದ್ಧವೂ ಗೆಲುವು ಪಡೆದಿದ್ದರು.

ಯೂತ್‌ ಬಾಲಕರ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಮರ್ಥ್‌ 8-11, 11-8, 13-11, 11-3, 7-11,
9-11, 11-9ರಲ್ಲಿ ಪಿ.ವಿ. ಶ್ರೀಕಾಂತ್‌ ಕಶ್ಯಪ್‌ ಎದುರು ಗೆಲುವು ಸಾಧಿಸಿದರು. ಸೌಮ್ಯಜಿತ್‌ ಬೋಸ್‌ ಗಾಯಗೊಂಡಿದ್ದರಿಂದ ಸಂಕೇತ್‌ ಪ್ರಶಸ್ತಿ ಸುತ್ತು ತಲುಪಿದರು.

ಪುರುಷರ ವಿಭಾಗದ ಫೈನಲ್‌ನಲ್ಲಿ ಬಿಎನ್‌ಎಂ ಕ್ಲಬ್‌ನ ಶ್ರೇಯಲ್‌ ತೆಲಾಂಗ್‌ 11-8, 11-8, 11-2, 7-11, 11-7ರಲ್ಲಿ ಸ್ಕೈಸ್‌ ಕ್ಲಬ್‌ನ ವಿ.ಪಿ. ಚರಣ್‌ ಅವರನ್ನು ಮಣಿಸಿ ಪ್ರಶಸ್ತಿಯ ಒಡೆಯರಾದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಶ್ರೇಯಲ್‌ 11-5, 11-5, 11-4, 11-7ರಲ್ಲಿ ಎಂಎಸ್‌ಎಸ್‌ ಕ್ಲಬ್‌ನ ಸುಷ್ಮಿತ್‌ ಬಾರಿಗಿಡದ ಮೇಲೂ, ಚರಣ್ 11-8, 5-11, 11-2, 9-11, 2-11, 11-9, 11-6ರಲ್ಲಿ ರಕ್ಷಿತ್‌ ಆರ್‌. ಬಾರಿಗಿಡದ ಅವರನ್ನು ಮಣಿಸಿದರು.

ನಾನ್‌ ಮೆಡಲಿಸ್ಟ್‌ ಸಿಂಗಲ್ಸ್ ವಿಭಾಗದಲ್ಲಿ ಎಂಟಿಟಿ ಕ್ಲಬ್‌ನ ಅಭಿರಾಮ ಆರ್‌. ಐತಾಳ 6-11, 11-8, 11-9, 11-9ರಲ್ಲಿ ಎಸ್‌ಬಿಟಿ ಕ್ಲಬ್‌ನ ವಿಷ್ಣು ಎದುರು ಜಯ ಪಡೆದು ಚಾಂಪಿಯನ್‌ ಆದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಎಸ್‌ಬಿಟಿಯ ವಿಷ್ಣು ಭಟ್‌ 11-8, 11-7, 11-4ರಲ್ಲಿ ಸ್ಕೈಸ್‌ ಕ್ಲಬ್‌ನ ಶ್ರೀವತ್ಸ ಮೇಲೂ, ಅಭಿರಾಮ 11-8, 14-12, 7-11, 11-9ರಲ್ಲಿ ಪಿಒಎನ್‌ ಕ್ಲಬ್‌ನ ಪಿ.ಎಂ. ಶ್ವೇತಾ ಎದುರು ಜಯ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು