ವಡೋದರಾ: ಆತಿಥೇಯ ಭಾರತ ವಿರುದ್ಧ ಇಲ್ಲಿನ ಬಿಸಿಎ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.

ಟಾಸ್ ಗೆದ್ದ ಭಾರತದ ನಾಯಕ ಶುಭಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ರವಾಸಿಗರಿಗೆ ಓಪನರ್ಗಳಾದ ಡೆವೊನ್ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 21.4 ಓವರ್ಗಳಲ್ಲಿ 117 ರನ್ ಗಳಿಸಿದರು.

ಕಾನ್ವೆ 56 ಹಾಗೂ ನಿಕೋಲ್ಸ್ 62 ರನ್ ಗಳಿಸಿ ಔಟ್ ಆದರು. ಈ ನಡುವೆ ವಿಲ್ ಯಂಗ್ ನಿರಾಸೆ ಮೂಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಇನಿಂಗ್ಸ್ ಕಟ್ಟಿದ ಡೆರಿಲ್ ಮಿಚೆಲ್ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. 71 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು.

ಇನ್ನುಳಿದಂತೆ ಕ್ರಿಸ್ಟಿಯಾನ್ ಕ್ಲಾರ್ಕ್ 24*, ಗ್ಲೆನ್ ಫಿಲಿಪ್ಸ್ 12, ಮಿಚೆಲ್ ಹೇ 18, ನಾಯಕ ಮೈಕೆಲ್ ಬ್ರೇಸ್ವೆಲ್ 16 ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್, ಹರ್ಷೀತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣ ತಲಾ ಎರಡು ಮತ್ತು ಕುಲದೀಪ್ ಯಾದವ್ ಒಂದು ವಿಕೆಟ್ ಗಳಿಸಿದರು.

ಸರಣಿಯ ಎರಡನೇ ಪಂದ್ಯ ಜನವರಿ 14ರಂದು ರಾಜ್ಕೋಟ್ ಮತ್ತು ಅಂತಿಮ ಪಂದ್ಯ ಜ.18ರಂದು ಇಂದೋರ್ನಲ್ಲಿ ನಡೆಯಲಿದೆ.

ಟಾಸ್ ಗೆದ್ದ ಭಾರತ: ವಿಭಿನ್ನ ಸಂಯೋಜನೆಯೊಂದಿಗೆ ಕಣಕ್ಕೆ

ಈ ಮೊದಲು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲ ಬೌಲಿಂಗ್ ಮಾಡಲು ನಿರ್ಧರಿಸಿತು.

ಇನ್ನೂ ಈ ಪಂದ್ಯದಲ್ಲಿ ಭಾರತ ನಾಯಕ ಶುಭಮನ್ ಗಿಲ್ ಅವರು ವಿಭಿನ್ನ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಐವರು ಬ್ಯಾಟರ್ಗಳು ಹಾಗೂ ಇಬ್ಬರು ಬೌಲಿಂಗ್ ಆಲ್ರೌಂಡರ್ ಸೇರಿ 6 ಬೌಲರ್ಗಳ ಜೊತೆ ಮೈದಾನಕ್ಕಿಳಿಸಿದ್ದಾರೆ.

ತಂಡಗಳು:

ನ್ಯೂಜಿಲೆಂಡ್ ಆಡುವ ಬಳಗ: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್ವೆಲ್ (ನಾಯಕ), ಜಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್.

ಭಾರತ ಆಡುವ ಬಳಗ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್ ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.