ಅಜ್ಜಂಪುರ: ತಾಲ್ಲೂಕಿನಲ್ಲಿ ಮಳೆ- ಬೆಳೆ ಎರಡೂ ವೈಫಲ್ಯ ಕಂಡಿವೆ. ವಾಣಿಜ್ಯ ಬೆಳೆ ಈರುಳ್ಳಿ ಬೆಳೆದು, ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಹಣ ಹೊಂದಿಸಿ, ಬಿತ್ತನೆ ಮಾಡಿದ್ದ ರೈತರಿಗೆ ಸಾಲ ಮರುಪಾವತಿಯ ಚಿಂತೆ ಕಾಡುತ್ತಿದೆ. ಸರ್ಕಾರದ ಪರಿಹಾರ ಹಾಗೂ ಬೆಳೆ ವಿಮೆ ಮೊತ್ತದತ್ತ ರೈತರು ಮುಖಮಾಡುವಂತಾಗಿದೆ.

ಹಿಂಗಾರಿನಲ್ಲೂ ಉತ್ತಮ ಮಳೆ ಬಂದಿರಲಿಲ್ಲ. ಮುಂಗಾರಿನ ಸಮಯವಾದ ಈಗ ಒಮ್ಮೆಯೂ ಹದ ಮಳೆ ಆಗಿಲ್ಲ. ಮೊದಲೇ ಬೇಸಿಗೆಯ ಬಿಸಿಲಿನ ತಾಪದಿಂದ ಒಣಗಿದ್ದ ಕೃಷಿ ಭೂಮಿಯಲ್ಲಿ ತೇವಾಂಶದ ಪ್ರಮಾಣ ತೀವ್ರಗತಿಯಲ್ಲಿ ಕುಸಿದಿತ್ತು. ಮೋಡ ಕಂಡು ಮಳೆ ಬರುವುದೆಂಬ ನಿರೀಕ್ಷೆಯಲ್ಲಿ ಈರುಳ್ಳಿ ಬೀಜ ಬಿತ್ತನೆ ನಡೆಸಿದ್ದೆವು. ಆದರೆ, ಮೋಡ ಮಳೆಯಾಗಿ ಪರಿವರ್ತನೆಯಾಗಿ ಹನಿಯಲಿಲ್ಲ. ಇದರಿಂದಾಗಿ ಬಿತ್ತನೆ ಮಾಡಿದ್ದ ಈರುಳ್ಳಿ ಬೀಜ ಹುಟ್ಟೇ ಇಲ್ಲ ಎಂದು ರೈತ ಬಸವರಾಜಪ್ಪ ಅಳಲು ತೋಡಿಕೊಂಡರು.

ಬಿತ್ತನೆ ಬೀಜ, ಗೊಬ್ಬರ, ಬೇಸಾಯ ಸೇರಿ ₹ 10,000 ವೆಚ್ಚಮಾಡಿ ಬಿತ್ತನೆ ನಡೆಸಿದ್ದೇವೆ. ಮಳೆ ಇಲ್ಲದೇ ಬೀಜಗಳು ಮೊಳಕೆಯೊಡೆದಿಲ್ಲ. ಮುಂದೆಯೂ ಗಿಡಕಟ್ಟುವ ಭರವಸೆ ಇಲ್ಲ. ಪುನಃ ಬಿತ್ತನೆ ನಡೆಸಲು ಮಳೆಯೂ ಇಲ್ಲ, ಸಮಯವೂ ಮೀರಿದೆ. ಒಟ್ಟಾರೆ, ಸಾಲ ಮಾಡಿ ಹೊಲಕ್ಕೆ ಹಾಕಿದ್ದ ಬಂಡವಾಳವೂ ಕೈಸೇರಲ್ಲ ಎಂದು ರೈತ ತಿಮ್ಮಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಈರುಳ್ಳಿ ಬೆಳೆಯುವ ಬಹುತೇಕ ರೈತರು ಮಳೆಕೊರತೆಯಿಂದ ಬೆಳೆ ಕಳೆದುಕೊಂಡಿದ್ದಾರೆ. ಈ ನಡುವೆ ಬೆರಳೆಣಿಕೆ ಪ್ರಮಾಣದ ಅಜ್ಜಂಪುರ-ಶಿವನಿ ಭಾಗದವರು ಕೊಳವೆ ಬಾವಿಯನ್ನು, ಗಿರಿಯಾಪುರ ಭಾಗದವರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ತುಂತುರು ನೀರಾವರಿ ಮೂಲಕ ನೀರು ಹರಿಸಿ, ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ನಮ್ಮದು ಕೃಷಿ ಕುಟುಂಬ. ಕೃಷಿಯೇ ಮೂಲ ಉದ್ಯೋಗ. ಬೆಳೆಯಿಂದಲೇ ಆದಾಯ. ಹೀಗಾಗಿ ಈರುಳ್ಳಿ ಉಳಿಸಿಕೊಳ್ಳಲೇಬೇಕೆಂಬ ಆಶಯದಿಂದ ಈರುಳ್ಳಿ ಬಿತ್ತಿದ್ದ ನಾಲ್ಕೂವರೆ ಎಕರೆಗೂ ಟ್ಯಾಂಕರ್ನಲ್ಲಿ ನೀರು ತರಿಸಿ, ಡೀಸೆಲ್ ಮೋಟಾರು ಬಳಸಿ, ತುಂತುರು ನೀರಾವರಿ ಮೂಲಕ ನೀರು ಪೂರೈಸುತ್ತಿದ್ದೇವೆ ಎನ್ನುತ್ತಾರೆ ಗಿರಿಯಾಪುರದ ರೈತ ರಚಿತ್.

ಪ್ರತೀ 20,000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರಿಗೆ ₹ 1,000 ಕೊಟ್ಟು ನೀರು ಖರೀದಿಸುತ್ತಿದ್ದೇವೆ. ಎಕರೆಗೆ ಇಂತಹ ಕನಿಷ್ಠ 15-20 ಟ್ಯಾಂಕರ್ ನೀರಿನ ಅಗತ್ಯವಿದೆ. ನೀರಿಗಾಗಿಯೇ ₹ 15-20 ಸಾವಿರ ವೆಚ್ಚ ಮಾಡಬೇಕಾದ ಅನಿವಾರ್ಯತೆಯಿದೆ. ಅಧಿಕ ಇಳುವರಿ ಬಂದು, ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಮಾತ್ರ ಲಾಭ. ಆ ನಿರೀಕ್ಷೆಯಲ್ಲಿಯೇ ಹಣ ಖರ್ಚು ಮಾಡಿ ಬೆಳೆ ಉಳಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ರೈತ ರಕ್ಷಿತ್.

55,000 ಹೆಕ್ಟೇರ್ ಈರುಳ್ಳಿ ಬೆಳೆಯುವ ಪ್ರದೇಶದ ಪೈಕಿ 5,100 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಆಗಿದೆ. ಮಳೆ ನಿರೀಕ್ಷೆಯಲ್ಲಿ ಬಹುತೇಕರು ಬಿತ್ತನೆ ನಡೆಸಿದರೂ, ಮಳೆಯಿಲ್ಲದರಿಂದ ಬೀಜಗಳು ಮೊಳಕೆಯೊಡೆದಿಲ್ಲ. ಕೃಷಿಯಲ್ಲಿ ನೀರಾವರಿ ಬಳಸಿದವರಲ್ಲೂ ಈರುಳ್ಳಿ ಬಿಡಿಬಿಡಿಯಾಗಿದ್ದು, ಶೇ 50-60 ರಷ್ಟು ಮಾತ್ರ ಇಳುವರಿ ಕಾಣುವ ಸಾಧ್ಯತೆ ಇದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಲಿಂಗರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.