ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ADVERTISEMENT
ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ವಿಶ್ವಾದ್ಯಂತ ₹765 ಕೋಟಿ ಗಳಿಸಿದೆ.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ದೀಪಾವಳಿ ಹಬ್ಬದ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಾಪ್ಟರ್ 1ರ ಮತ್ತೊಂದು ಟ್ರೇಲರ್ ಅನ್ನು ಬಿಡುಗಡೆ ಮಾಡಿತ್ತು.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ಈಗ ನಟ ರಿಷಬ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಕಾಂತಾರಾ ಚಾಪ್ಟರ್ 1 ಚಿತ್ರೀಕರಣದ ಸೊಗಸಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ಅದರ ಜೊತೆಗೆ ಕಾಂತಾರ ಸಿನಿಮಾ ನಿರ್ಮಾಣದ ನಿಜವಾದ ಮೋಜು ಆರಂಭವಾಗುವುದು ಅಲ್ಲಿಂದ ಎಂದು ಅಡಿಬರಹವನ್ನು ಹಾಕಿದ್ದಾರೆ.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ಕಾಂತಾರಾ ಚಾಪ್ಟರ್ 1 ಚಿತ್ರೀಕರಣದಲ್ಲಿ ನಟ ರಿಷಬ್ ಶೆಟ್ಟಿ ಅವರು ಹೇಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂಬುದನ್ನು ಫೋಟೊಗಳ ಮೂಲಕ ಕಾಣಬಹುದು.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ಕೈಯಲ್ಲಿ ಮೈಕ್ ಹಿಡಿದುಕೊಂಡು ಗಾಂಭೀರ್ಯ ಹಾಗೂ ನಿಷ್ಠೆಯಿಂದ ಕಾಂತಾರ ಚಿತ್ರೀಕರಣದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ.
ಚಿತ್ರ: ರಿಷಬ್ ಶೆಟ್ಟಿ / ಇನ್‌ಸ್ಟಾಗ್ರಾಮ್
ಸದ್ಯ ನಟ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅದರ ಜೊತೆಗೆ ‘ನೀವು ಅದ್ಭುತ ಕೆಲಸ ಮಾಡಿದ್ದೀರಿ’ ಎಂದು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.