ಆರೋಗ್ಯ ಕ್ಷೇತ್ರಕ್ಕೆ ₹ 62,659 ಕೋಟಿ

ಬುಧವಾರ, ಜೂಲೈ 17, 2019
30 °C
ಆಯುಷ್ಮಾನ್‌ ಭಾರತ್ ಯೋಜನೆ, ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಆದ್ಯತೆ

ಆರೋಗ್ಯ ಕ್ಷೇತ್ರಕ್ಕೆ ₹ 62,659 ಕೋಟಿ

Published:
Updated:

ನವದೆಹಲಿ: ಆರೋಗ್ಯ ಕ್ಷೇತ್ರಕ್ಕೆ ಹಿಂದಿನ ಎರಡು ವರ್ಷಗಳಿಗಿಂತ  ಹೆಚ್ಚಿನ ಆದ್ಯತೆ ದೊರೆತಿದ್ದು, 2019–20ನೇ ಹಣಕಾಸು ವರ್ಷದಲ್ಲಿ ₹ 62,659.12 ಕೋಟಿ ನಿಗದಿಪಡಿಸಲಾಗಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಆಯುಷ್ಮಾನ್‌ ಭಾರತ್ –ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ ಈ ಸಾಲಿನಲ್ಲಿ ಗರಿಷ್ಠ ಅಂದರೆ ₹ 6,400 ಕೋಟಿ ನಿಗದಿಪಡಿಸಲಾಗಿದೆ.

ಫಲಾನುಭವಿ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷದವರೆಗೂ ಆರೋಗ್ಯ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಸುಮಾರು 50 ಕೋಟಿ ಜನರಿಗೆ ಯೋಜನೆಯಿಂದ ಲಾಭವಾಗಲಿದೆ ಎಂಬುದು ಕೇಂದ್ರ ಸರ್ಕಾರದ ಅಂದಾಜು.

ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌ ಅನ್ವಯ ಆಯುಷ್ಮಾನ್‌ ಭಾರತ್‌ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ₹ 249.96 ಕೋಟಿ ಕಾದಿರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !