ಬುಧವಾರ, ಅಕ್ಟೋಬರ್ 16, 2019
21 °C
ಹೆಬ್ಬಾಳ್ಕರ್‌ಗೆ ಸಾಲ: ದಾಖಲೆ ಸಲ್ಲಿಕೆಗೆ ಸೂಚನೆ

ಇ.ಡಿ. ವಿಚಾರಣೆ ಎದುರಿಸಿದ ರಾಜಣ್ಣ

Published:
Updated:

ನವದೆಹಲಿ: ಕರ್ನಾಟಕದ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್. ರಾಜಣ್ಣ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆಗೆ ಹಾಜರಾದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಳೆದ ವಾರ ರಾಜಣ್ಣ ಅವರಿಗೆ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು.

‘ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಂಜೂರು ಮಾಡಲಾದ ಸಾಲಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಒದಗಿಸುವಂತೆ ತನಿಖಾಧಿಕಾರಿಗಳು ಕೇಳಿದ್ದಾರೆ. ಇದೇ 16ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಆ ವೇಳೆ ದಾಖಲೆಗಳನ್ನು ಒದಗಿಸಲಾಗುವುದು’ ಎಂದು  ಸುದ್ದಿಗಾರರಿಗೆ ತಿಳಿಸಿದರು.

ಸಂಸದ ಡಿ.ಕೆ. ಸುರೇಶ್ ಹಾಗೂ ಸುನಿಲ್‌ ಕುಮಾರ್‌ ಶರ್ಮಾ ಅವರೂ ಬುಧವಾರ ಇ.ಡಿ ವಿಚಾರಣೆ ಎದುರಿಸಿದರು.

Post Comments (+)