ಶನಿವಾರ, ಮೇ 28, 2022
26 °C

ಬಂಜೆತನ ನಿವಾರಣೆಗೆ ತಪಾಸಣೆ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಂಜೆತನಕ್ಕೆ ಮಹಿಳೆ ಮಾತ್ರ ಕಾರಣಳಲ್ಲ, ಪುರುಷನೂ ಕಾರಣರಾಗಿರುತ್ತಾನೆ. ಸೂಕ್ತವಾದ ತಪಾಸಣೆ ಮೂಲಕ ಶೇ 50ರಷ್ಟು ಬಂಜೆತನ ನಿವಾರಣೆ ಮಾಡಬಹುದಾಗಿದೆ ಎಂದು ಡಾ. ರಾಜಶ್ರೀ ಪಾಲಾದಿ ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಮಂತ್ರ ತಂತ್ರದಿಂದ ಅಥವಾ ಆರ್.ಎಂ.ಪಿ. ವೈದ್ಯರಿಂದ ಬಂಜೆತನ ನಿವಾರಣೆ ಸಾಧ್ಯವಿಲ್ಲ. ಬಂಜೆತನದಿಂದ ಬೇಸತ್ತ ದಂಪತಿ ಹಲವು ಆಸ್ಪತ್ರೆಗಳಿಗೆ ಅಲೆದಾಡುವ ಬದಲು ಒಂದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡರೆ ನಿಖರವಾದ ಕಾರಣ ತಿಳಿಯಲು ಸಾಧ್ಯವಿದೆ. ಜೂನ್ 24ರಂದು ಸೋಲಾಪುರದ ಶೋಭಾ ನರ್ಸಿಂಗ್ ಹೋಮ್‌ನಲ್ಲಿನ ಮಾರ್ಫಿಅಸ್- ಶೋಭಾ ಫರ್ಟಿಲಿಟಿ ಸೆಂಟರ್ ಸೋಲಾಪುರ ಮತ್ತು ಡಾ. ರಾಜಶ್ರೀ ಪಾಲಾದಿ ಆದಿತ್ಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಬಂಜೆತನ ನಿವಾರಣೆಗಾಗಿ ಖೂಬಾ ಪ್ಲಾಟ್‌ನ ಆದಿತ್ಯ ಆಸ್ಪತ್ರೆಯಲ್ಲಿ ಶಿಬಿರವನ್ನು ಆಯೋಜಿಸಿಲಾಗಿದೆ ಎಂದರು.ಶಿಬಿರದಲ್ಲಿ ಸೋಲಾಪುರದ ಪ್ರಸಿದ್ಧ ಬಂಜೆತನ ನಿವಾರಣೆ ವೈದ್ಯ ಡಾ. ಮಿಲಿಂದ ಪಾಟೀಲ ಬಂಜೆತನ ದಂಪತಿಗೆ ಅತ್ಯಾಧುನಿಕ ತಂತ್ರಜ್ಞಾನ ಉಪಕರಣಗಳಿಂದ ತಪಾಸಣೆ ಮಾಡಿ, ಮಾರ್ಗದರ್ಶನ ಮಾಡಲಿದ್ದಾರೆ ಎಂದರು.ಬಂಜೆತನ ನಿವಾರಣೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಉಪಕರಣಗಳ ಬಗ್ಗೆ ಜರ್ಮನ್‌ನಲ್ಲಿ ಡಾ.ಮಿಲಿಂದ ಪಾಟೀಲ ಅಭ್ಯಾಸ ಮಾಡಿದ್ದಾರೆ. ಅವರು ಚಿಕಿತ್ಸೆ ನೀಡಲಿದ್ದು, ಗುಲ್ಬರ್ಗ ಜನತೆಗೆ ಇದೊಂದು ಉತ್ತಮ ಅವಕಾಶವಾಗಿದೆ. ಇಲ್ಲಿನ ಜನರ ಪ್ರತಿಕ್ರಿಯೆ ನೋಡಿ ಮುಂದೆ ಶಿಬಿರ ನಡೆಸುವ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.ಡಾ. ಮಿಲಿಂದ ಪಾಟೀಲ ಮಾತನಾಡಿ, ಪ್ರನಾಳ ಶಿಶು ಪ್ರಕ್ರಿಯೆಯಲ್ಲಿ ಮಹಿಳೆಯ ಅಂಡಾಣು ಮತ್ತು ಪುರುಷರ ಶುಕ್ರಾಣುವನ್ನು ಫಲಿತ ಮಾಡಿ ಗರ್ಭ ತಯಾರಿಸಿ, ಮಹಿಳೆಯ ಗರ್ಭಾಶಯದಲ್ಲಿ ಸೇರಿಸಲಾಗುತ್ತದೆ. ಈ ವಿಧಾನದಿಂದ ಬಂಜೆತನ ಇರುವ ದಂಪತಿ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.