ಹಿಪ್ಪಲಿ ಕಾಯಿಯ ಬೇರು ಮತ್ತು ಕಾಂಡಗಳನ್ನು ಔಷಧಿಯಲ್ಲಿ ಬಳಸಲಾಗುತ್ತದೆ. ಕೆಮ್ಮು, ದಮ್ಮು ವಾತಗಳಿಗೆ ಇದು ಹೇಳಿ ಮಾಡಿಸಿದ ಮದ್ದು. ಕ್ಷಯರೋಗ ಉಂಟು ಮಾಡುವ ಕೀಟಾಣುಗಳನ್ನು ಕೊಲ್ಲಲು, ವಿವಿಧ ರೀತಿಯ ಜ್ವರಗಳ ನಿವಾರಣೆಯಲ್ಲಿ ಹಿಪ್ಪಲಿಯದ್ದು ಮಹತ್ವದ ಪಾತ್ರ ಎಂದು ‘ಔಷಧೀಯ ಸಂಶೋಧನಾ ಕೇಂದ್ರ’ದ ವರದಿಯಲ್ಲಿ ತಿಳಿಸಲಾಗಿದೆ.

ನಿದ್ರಾಹೀನತೆ ಮತ್ತು ಮೂರ್ಛೆ ರೋಗಗಳಲ್ಲಿ ಶಾಮಕವಾಗಿಯೂ, ಶಕ್ತಿದಾಯಕ ಮತ್ತು ರಕ್ತವರ್ಧಕ ಔಷಧದಂತೆಯೂ ಕೊಡುತ್ತಾರೆ. ಪಿತ್ತನಾಳ ಮತ್ತು ಪಿತ್ತಕೋಶಗಳ ತೊಂದರೆ ನಿವಾರಣೆಗೆ, ಗರ್ಭಸ್ರಾವಕ, ಕುಷ್ಠರೋಗಗಳ ಚಿಕಿತ್ಸೆಯಲ್ಲಿಯೂ ಉಪಯೋಗಿಸುತ್ತಾರೆ. ಹಿಪ್ಪಲಿಯನ್ನು ಸಂಬಾರ ಜಿನಿಸಾಗಿ, ಉಪ್ಪಿನಕಾಯಿಗಳಲ್ಲಿ ಹಾಗೂ ಆಹಾರ ಕೆಡದಂತೆ ಸಂಸ್ಕರಿಸಿಡಲು ಬಳಸುತ್ತಾರೆ.

ಹೀಗಿದೆ ಹಿಪ್ಪಲಿ
ಸುವಾಸನೆಯಲ್ಲಿ ಮೆಣಸಿನ ಕಾಳನ್ನು ಹೋಲುವ, ಅದರಂತೆ ಬಳ್ಳಿಯಲ್ಲೇ ಬಿಡುವ ಸಂಬಾರ ಜಿನಸು ಹಿಪ್ಪಲಿ. ಬಹೂಪಯೋಗಿ ಔಷಧೀಯ ಸಸ್ಯ ಆಗಿರುವ ಹಿಪ್ಪಲಿಗೆ ಆಯುರ್ವೇದದಲ್ಲಿ ಮಹತ್ವದ ಸ್ಥಾನ. ಪಿಪ್ಪಲಿ, ಉಷಣಾ, ಮಾಗಧೀ, ವೈದೇಹಿ ಎಂದೆಲ್ಲಾ ಕರೆಸಿಕೊಳ್ಳುವ ಹಿಪ್ಪಲಿ ಎಲ್ಲೆಂದರಲ್ಲಿ ಸುಲಭವಾಗಿ ಬೆಳೆಯಬಹುದಾದ ಗಿಡಮೂಲಿಕೆ. ಪೈಪರೇಸಿ ಸಸ್ಯ ಕುಟುಂಬಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು ‘ಪೈಪರ್ ಲಾಂಗಮ್’. ಕಾಳುಮೆಣಸಿನಂತೆ ಇದ್ದರೂ ೫ ರಿಂದ ೯ ಸೆಂ.ಮೀ. ಉದ್ದವಿರುವ ಕಾರಣ ಇಂಗ್ಲಿಷ್ನಲ್ಲಿ ‘ಲಾಂಗ್ಪೆಪ್ಪರ್’ ಎಂಬ ಹೆಸರಿದೆ.

ಇದರ ಎಲೆಗಳು ದುಂಡಾಗಿ ಇಲ್ಲವೇ ಹೃದಯಾಕಾರದಲ್ಲಿ ಇರುತ್ತವೆ. ಹಣ್ಣು ಸುಮಾರು ೩ ಸೆಂ.ಮೀ ನಷ್ಟು ಉದ್ದವಿದ್ದು, ಅವು ಹಳದಿ ಮಿಶ್ರಿತ ಕಿತ್ತಳೆ ಬಣ್ಣದ್ದಾಗಿದೆ.

ಔಷಧೀಯ ಸಸ್ಯವಾಗಿ ಮಾತ್ರವಲ್ಲದೇ ವಾಣಿಜ್ಯ ಬೆಳೆಯಾಗಿಯೂ ಹಿಪ್ಪಲಿ ಬೆಳೆಯಬಹುದು. ಅಷ್ಟೇ ಅಲ್ಲದೇ ಇತರ ಬೆಳೆಗಳ ಜೊತೆಯಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಸಬಹುದು. ಏಕಬೆಳೆಯಾಗಿ ಬೆಳೆಯುವುದಿದ್ದಲ್ಲಿ ವಾರಕ್ಕೊಂದು ಬಾರಿ ನೀರುಣಿಸಬೇಕು. ಅಂತರ ಬೆಳೆಯಾಗಿದ್ದಲ್ಲಿ ಇತರ ಬೆಳೆಗೆ ಹಾಯಿಸುವ ನೀರು ಇದಕ್ಕೆ ಸಾಕಾಗುತ್ತದೆ. ತುಂತುರು ನೀರಾವರಿ ಪದ್ಧತಿ ಇದ್ದರೆ ಚೆನ್ನಾಗಿ ಬೆಳೆ ತೆಗೆಯಬಹುದು. ಬೇಸಿಗೆಯಲ್ಲಿ ನೀರುಣಿಸಿದಲ್ಲಿ ನಿರಂತರವಾಗಿ ಕಾಯಿಗೊನೆ ಮೂಡುವುದು.

ಒಂದು ಹೆಕ್ಟೇರ್ ಹಿಪ್ಪಲಿ ಬೆಳೆಯಿಂದ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿವರೆಗೂ ಆದಾಯ ಗಳಿಸಬಹುದು. ಇದಕ್ಕೆ ಸೊರಗುರೋಗದ ಬಾಧೆಯಿಲ್ಲ. ಆದ್ದರಿಂದ ಇದರ ಸಶಕ್ತ ಬುಡವನ್ನು ಆಯ್ದು ಮೆಣಸಿನ ಬಳ್ಳಿಯ ತಲೆಯನ್ನು ಅದಕ್ಕೆ ‘ವಿ’ ಕಸಿ ಮುಖಾಂತರ ಕಸಿಕಟ್ಟಿ ಪ್ರಯೋಜನ ಪಡೆಯುತ್ತಿರುವುದು ಈಚೆಗೆ ಹೆಚ್ಚಾಗಿದೆ. ಒಮ್ಮೆ ಕಸಿ ಮೆಣಸು ಚಿಗುರಿದ ನಂತರ ಬುಡದಲ್ಲಿ ಹೊರಡುವ ಹಿಪ್ಪಲಿ ಗೆಲ್ಲುಗಳನ್ನು ಒಂದೆರಡು ತಿಂಗಳ ಕಾಲ ಚಿವುಟಿದರೆ ನಂತರ ತೋಟದಲ್ಲಿ ಬಳ್ಳಿ ಹಬ್ಬಲು ಸಿದ್ಧ.

ಹಿಪ್ಪಲಿ ಕೃಷಿ ಹೀಗೆ

ನೀರು ಇಂಗಿ ಹೋಗುವ ಫಲವತ್ತಾದ ಮಣ್ಣು ಹಿಪ್ಪಲಿ ಕೃಷಿಗೆ ಅತ್ಯುತ್ತಮ. ಮಳೆಗಾಲದ ಆರಂಭದಲ್ಲಿ ಇದರ ಕೃಷಿ ಉತ್ತಮ. ಸುಮಾರು ಮೂರರಿಂದ ಐದು ಗಂಟುಗಳಿರುವ ಬೇರು ಬಿಟ್ಟ ಕಾಂಡಗಳನ್ನು ಸಸ್ಯಾಭಿವೃದ್ಧಿಗೆ ಬಳಸಬೇಕು. ಪಾಲಿಥೀನ್ ಚೀಲದಲ್ಲಿ ನಾಟಿ ಮಾಡಿದರೆ ಬೇರು ಸರಿಯಾಗಿ ಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಬಳ್ಳಿಗೆ ಹದವಾದ ನೀರುಣಿಸುತ್ತಿರಬೇಕು. ಇದರ ತಳ ಭಾಗಕ್ಕೆ ತರಗೆಲೆಗಳನ್ನು ಹರಡಿದಲ್ಲಿ ತೇವಾಂಶ ಉಳಿಯುವುದು. ನೀರುಣಿಸಿದಾಗ ಬರಬಹುದಾದ ಕಳೆಗಳನ್ನು ಆಗಾಗ ತೆಗೆಯುತ್ತಿರಬೇಕು.

ನಿಗದಿ ಪಡಿಸಿದ ಭೂಮಿಯನ್ನು ಎರಡರಿಂದ ಮೂರು ಬಾರಿ ಉಳುಮೆ ಮಾಡಿ ಬಳಿಕ ದಿಣ್ಣೆಯನ್ನು ತಯಾರಿ ಮಾಡಬೇಕು. ಈ ದಿಣ್ಣೆಗಳಲ್ಲಿ ೬೦ ಸೆಂ.ಮೀ. ಅಂತರದಲ್ಲಿ ಗುಣಿಗಳನ್ನು ತೆಗೆದು ಆ ಹೊಂಡಕ್ಕೆ ೧೦೦ ಗ್ರಾಂನಷ್ಟು ಹಟ್ಟಿಗೊಬ್ಬರ ಅಥವಾ ಕಾಂಪೋಸ್ಟನ್ನು ಹಾಕಿ ಮುಚ್ಚಬೇಕು. ಇಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿ ಹೊಂಡಕ್ಕೆ ಇಲ್ಲವೇ ಗುಣಿಗೆ ಎರಡು ಬೇರು ಬಿಟ್ಟ ಬಳ್ಳಿಯ ತುಂಡುಗಳನ್ನು ನಾಟಿ ಮಾಡಬೇಕು.

ನಾಟಿ ಮಾಡಿದ ಎರಡು ಮತ್ತು ಆ ಬಳಿಕದ ವರ್ಷಗಳಲ್ಲಿ ಹೆಕ್ಟೇರೊಂದಕ್ಕೆ ಸುಮಾರು ೨೦ ಟನ್ಗಳಷ್ಟು ಹಟ್ಟಿಗೊಬ್ಬರವನ್ನು ದಿಣ್ಣೆಗಳ ಮೇಲೆ ಹಾಕಿ ಮಿಶ್ರ ಮಾಡಬೇಕು. ಹಿಪ್ಪಲಿ ಬಳ್ಳಿಯ ನಾಟಿಯಾಗಿ ೧೮೦ ದಿವಸಗಳಲ್ಲಿ ಪಕ್ವಗೊಂಡ ಕಾಯಿಗೊನೆಗಳು ಕೊಯ್ಲು ಮಾಡಲು ಸಿಗುವುದು. ಕಾಯಿಗಳು ಕಪ್ಪು ಮಿಶ್ರಿತ ಹಸಿರು ಬಣ್ಣವನ್ನು ತೋರುವಾಗ ಕೊಯ್ಲು ಆಗಬೇಕು. ವಾರ್ಷಿಕವಾಗಿ ಮೂರರಿಂದ ಐದು ಕೊಯ್ಲು ಮಾಡಲು ಸಾಧ್ಯ.

ಕಾಯಿಗೊನೆಗಳ ಕೊಯ್ಲು ಮಾಡಿದ ಬಳಿಕ ನಾಲ್ಕರಿಂದ ಐದು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಕಾಯಿಗಳನ್ನು ತೇವಾಂಶವಿಲ್ಲದ ಡಬ್ಬಿಗಳಲ್ಲಿ ಶೇಖರಿಸಿಡಬೇಕು. ಇದನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದು.
ಹಿಪ್ಪಲಿಯ ಕಾಂಡ ಮತ್ತು ಬೇರುಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಬಳ್ಳಿಯನ್ನು ನಾಟಿ ಮಾಡಿದ ೧೮ ತಿಂಗಳುಗಳ ಬಳಿಕ ಕೊಯ್ಲು ಮಾಡಲು ಸಾಧ್ಯ.

ಈ ಕೊಯ್ಲು ಮಾಡುವಾಗ ಬಳ್ಳಿಯ ಕಾಂಡವನ್ನು ತಳಭಾಗ ಸಮವಾಗಿ ಕತ್ತರಿಸಿಕೊಳ್ಳಬೇಕು, ಬಳಿಕ ಬೇರುಗಳನ್ನು ಅಗೆದು ತೆಗೆಯಬೇಕು. ಅಗೆದು ತೆಗೆದ ಬೇರನ್ನು ಶುಭ್ರಗೊಳಿಸಿ ೨೪ ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಳಿಕ ಅವನ್ನು ೨ ರಿಂದ ೫ ಸೆಂ.ಮೀ ತುಂಡುಗಳನ್ನಾಗಿ ಮಾಡಬೇಕು. ಹಿಪ್ಪಲಿ ಗಿಡ ಹಾಗೂ ಹಿಪ್ಪಲಿ ಗಿಡಕ್ಕೆ ಕಸಿ ಕಟ್ಟಿದ ಉತ್ತಮ ಗುಣಮಟ್ಟದ ರೋಗ ನಿರೋಧಕ ಕಾಳುಮೆಣಸಿನ ಗಿಡಗಳಿಗೆ ಪುತ್ತೂರಿನಲ್ಲಿರುವ ನರ್ಸರಿಯನ್ನು ಸಂಪರ್ಕಿಸಿ. 08251 – 310729,
98809 19200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.