ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು– ಹಲಸು ವೈವಿಧ್ಯ ಮೇಳ

Last Updated 20 ಮೇ 2019, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮೇ 28 ಮತ್ತು 29ರಂದು ಮಾವು ಮತ್ತು ಹಲಸಿನ ಹಣ್ಣಿನ ವೈವಿಧ್ಯ ಮೇಳವನ್ನು ಆಯೋಜಿಸುತ್ತಿದೆ. ಹೆಸರಘಟ್ಟದಲ್ಲಿರುವ ಸಂಸ್ಥೆಯ ಆವರಣದಲ್ಲೇ ಈ ಮೇಳ ನಡೆಯಲಿದೆ. ಇದಾದ ನಂತರ ಜೂನ್‌ 1 ಮತ್ತು 2ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇದೇ ಮೇಳ ನಡೆಯಲಿದೆ.

ಏನೇನು ಇರಲಿದೆ?
ಸಂಸ್ಥೆಯು ಸುಮಾರು 750ಕ್ಕೂ ಅಧಿಕ ಮಾವು ತಳಿಗಳನ್ನು ಸಂರಕ್ಷಿಸಿದೆ. ಅದರಲ್ಲಿ 180 ಬಗೆಯ ಅಪ್ಪೆ ಮಿಡಿ (ಉಪ್ಪಿನಕಾಯಿಗೆ ಬಳಸುವ ಕಾಯಿ) ಜಾತಿಗೆ ಸೇರಿವೆ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ 110 ಬಗೆಯ ಹಲಸಿನ ತಳಿಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ. ಈ ಫಲ ವೈವಿಧ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಮೇಳದ ಉದ್ದೇಶ. ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಾಗಾರ
ಮೇಳದ ಭಾಗವಾಗಿ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸಹಯೋಗದಲ್ಲಿ ಇದೇ ಸಂಸ್ಥೆಯ ಆವರಣದಲ್ಲಿ ಮೇ 27 ಮತ್ತು 28ರಂದು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತಾಂತ್ರಿಕ–ವ್ಯವಹಾರದ ಭಾಗವಾದ ಬಿಇಎಸ್‌ಎಸ್‌ಟಿ–ಎಚ್‌ಒಆರ್‌ಟಿಯು (BESST-HORT, a technology business incubator of the IIHR, Bangalore) ತೋಟಗಾರಿಕೆ ಸಂಬಂಧಿಸಿದ ತಾಂತ್ರಿಕ ನೆರವು ನೀಡುತ್ತಿದೆ. ಇದರ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾವು ಮತ್ತು ಹಲಸಿನಹಣ್ಣು ಕ್ಷೇತ್ರದಲ್ಲಿ ಉದ್ಯಮದ ಅವಕಾಶಗಳು– ಸಸಿ ಬೆಳೆಸುವುದರಿಂದ ಹಿಡಿದು ರಫ್ತು ಮಾರುಕಟ್ಟೆವರೆಗಿನ ಎಲ್ಲ ಆಯಾಮಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಮಾವು ಮತ್ತು ಹಲಸಿನ ತಳಿ ವೈವಿಧ್ಯ, ಪ್ಯಾಕೇಜ್‌ ಮಾಡುವ ವಿಧಾನ, ಪ್ರಯೋಗಗಳು, ಮಾರುಕಟ್ಟೆ ಸಾಧ್ಯತೆ, ಕೊಯ್ಲೋತ್ತರ ಪ್ರಕ್ರಿಯೆ, ರಫ್ತು ಸಂದರ್ಭದಲ್ಲಿ ಹಣ್ಣುಗಳು ತಾಜಾ ಆಗಿ ಉಳಿಯುವಂತೆ ಕಾಪಾಡುವ ಬಗೆ, ಈ ಎರಡೂ ಹಣ್ಣುಗಳಿಗೆ ರಫ್ತು ಪ್ರಮಾಣೀಕರಣ ಪಡೆಯುವ ಶಿಷ್ಟಾಚಾರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ನೋಂದಣಿಗೆ: ಐಸಿಎಆರ್‌–ಐಐಎಚ್‌ಆರ್‌, ಹೆಸರಘಟ್ಟ ಲೇಕ್‌ ಪೋಸ್ಟ್‌, ಬೆಂಗಳೂರು– 560089. ಮೇಳ ಮತ್ತು ಕಾರ್ಯಾಗಾರದ ಮಾಹಿತಿಗೆ ಮೊ.918197926903 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT