ನೋಡಲು ದೊಣ್ಣೆ ಮೆಣಸಿನಕಾಯಿ ಹೋಲುವ ಈ ವಿಶಿಷ್ಟ ದುಂಡು ಮೆಣಸು ಗಾತ್ರದಲ್ಲಿ ಚಿಕ್ಕದ್ದು. ಡಾಲ್ಡಾ, ವನಸ್ಪತಿ ಪರಿಮಳ ಇದಕ್ಕಿದೆ. ಮಲೆನಾಡಿನ ಕೈತೋಟಗಳಲ್ಲಿ ಈ ಮೆಣಸು ಹೆಚ್ಚಾಗಿ ಕಂಡು ಬರುತ್ತದೆ.

ಅತಿಯಾದ ಖಾರದ, ಸಹಜ ಕಡುಕೆಂಪು ಬಣ್ಣದ ಮೆಣಸಿನ ಕಾಯಿಗಳು ಹಣ್ಣಾದ ನಂತರ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ನಂತರ ಪುಡಿ ಮಾಡಿ ಇಟ್ಟುಕೊಂಡು ಬಳಸಬಹುದು. ಡಾಲ್ಡಾ ಪರಿಮಳವಿರುವುದರಿಂದ ಅದನ್ನು ಬಳಸಿ ಮಾಡಿದ ಖಾದ್ಯ ಪದಾರ್ಥಗಳಿಗೆ ವಿಶೇಷ ಪರಿಮಳ ಬರುತ್ತದೆ.

ಈ ಮೆಣಸಿನ ಗಿಡಗಳಿಗೆ ಕೀಟಗಳ ಬಾಧೆ ಅತಿ ಕಡಿಮೆ. ರಾಸಾಯನಿಕ ಕೀಟನಾಶಕ ಬಳಸುವ ಅಗತ್ಯ ಇಲ್ಲ. ಈ ಮೆಣಸಿನ ಗಿಡಗಳು ಅತ್ಯಂತ ಸಹಜವಾಗಿಯೇ ಬೆಳೆದು ವರ್ಷವಿಡೀ ಕಾಯಿ ಬಿಡುತ್ತವೆ. ಕಾಯಿಗಳ ಬಣ್ಣ ಮತ್ತು ಆಕಾರ ಆಕರ್ಷಕವಾಗಿರುವುದರಿಂದ ಹೂಗಳ ಜತೆ ಜೋಡಿಸಿ ಅಲಂಕಾರ ಮಾಡಬಹುದು.

ಹಸಿರು ಬಣ್ಣದ ಕಾಯಿಗಳು ಹಣ್ಣಾಗುವ ಹಂತ ಬಂದಾಗ ಕೇಸರಿ ಬಣ್ಣಕ್ಕೆ ತಿರುಗಿ ನಂತರ ಕಡುಗೆಂಪು ಬಣ್ಣ ತಾಳುತ್ತವೆ. ಮಾಗಿದ ಹಣ್ಣಿನ ಬೀಜಗಳಿಂದ ಸಸಿಗಳನ್ನು ಬೆಳೆಸಿಕೊಳ್ಳಬಹುದು. ಅಡಿಗೆಗೂ ಅಂದಕ್ಕೂ ಬಳಕೆಯಾಗುವ ದುಂಡು ಮೆಣಸನ್ನು ನಗರವಾಸಿಗಳು ಸಹ ಕುಂಡಗಳಲ್ಲಿ ಬೆಳೆಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.