ಬೆಂಗಳೂರು: ಈಶಾನ್ಯ ವಲಯ ಕ್ರಿಕೆಟ್ ತಂಡದ ಆಟಗಾರರಿಗೆ ಅನುಭವದ ಕೊರತೆ ಇದೆ. ಆದರೆ ಬಲಿಷ್ಠ ಎದುರಾಳಿಯನ್ನು ಎದುರಿಸಿ ನಿಲ್ಲುವ ಆತ್ಮವಿಶ್ವಾಸ ಮಾತ್ರ ಅವರಲ್ಲಿ ಭರಪೂರ ತುಂಬಿದೆ.

ನಗರದ ಹೊರವಲಯದ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ನಡೆದ ದುಲೀಪ್ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದ ಕೊನೆಯ ದಿನದಾಟದಲ್ಲಿ ಈಶಾನ್ಯ ಆಟಗಾರರ ದಿಟ್ಟತನ ಗಮನ ಸೆಳೆಯಿತು. ದೇಶಿ ಕ್ರಿಕೆಟ್ನ ಖ್ಯಾತನಾಮ ಆಟಗಾರರು ಇರುವ ಕೇಂದ್ರ ವಲಯ ತಂಡವು ಭಾನುವಾರ ಒಡ್ಡಿದ್ದ 679 ರನ್ಗಳ ಬೃಹತ್ ಮೊತ್ತವನ್ನು ಈಶಾನ್ಯ ವಲಯ ಬೆನ್ನಟ್ಟಿತ್ತು.

ಕೇಂದ್ರ ತಂಡವು ಸುಲಭ ಜಯ ಸಾಧಿಸುವ ಯೋಚನೆಯಲ್ಲಿತ್ತು. ಆದರೆ ಜೆಹು ಆ್ಯಂಡರ್ಸನ್ (64; 96ಎ, 4X11, 6X1) ಮತ್ತು ನಾಯಕ ರಾಂಗ್ಸೆನ್ ಜೊನಾಥನ್ (60; 97ಎ, 4X9) ಅವರ ಅರ್ಧಶತಕಗಳ ಬಲದಿಂದ ಈಶಾನ್ಯ ತಂಡವು ಸೋಲಿನಿಂದ ಪಾರಾಯಿತು. ಪಂದ್ಯ ಡ್ರಾ ಆಯಿತು. ಈಶಾನ್ಯ ವಲಯವು 58 ಓವರ್ಗಳಲ್ಲಿ 6 ವಿಕೆಟ್ಗಳಿಗೆ 200 ರನ್ ಗಳಿಸಿತು. ರಜತ್ ಪಾಟೀದಾರ್ ನಾಯಕತ್ವದ ಕೇಂದ್ರ ತಂಡವು ಸೆಮಿಫೈನಲ್ ಪ್ರವೇಶಿಸಿತು.

ಇನ್ನೊಂದು ಕ್ವಾರ್ಟರ್ಫೈನಲ್ ಕೂಡ ಡ್ರಾದಲ್ಲಿ ಮುಕ್ತಾಯವಾಯಿತು. ಉತ್ತರ ವಲಯ ತಂಡವು ಪಶ್ಚಿಮ ವಲಯದ ವಿರುದ್ಧ ಪಂದ್ಯದ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.

ಉತ್ತರ ವಲಯ ತಂಡದ ಬ್ಯಾಟರ್ಗಳು ಕೊನೆಯ ದಿನದಾಟದಲ್ಲಿಯೂ ಡಿಕ್ಲೇರ್ ಕೊಡಲಿಲ್ಲ. ಬದಲಿಗೆ ಭರ್ಜರಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಅಂಕಿತ್ ಕುಮಾರ್ (198; 321ಎ, 4X19, 6X1) ಎರಡು ರನ್ಗಳ ಅಂತರದಲ್ಲಿ ದ್ವಿಶತಕ ತಪ್ಪಿಸಿಕೊಂಡರು.

ಆದರೆ ನಾಲ್ಕನೇ ಕ್ರಮಾಂಕದ ಆಟಗಾರ ಆಯುಷ್ ಬಡೋನಿ (ಔಟಾಗದೇ 204; 223ಎ, 4X13, 6X3) ಭರ್ಜರಿ ದ್ವಿಶತಕ ಬಾರಿಸಿದರು. ನಿಶಾಂತ್ ಸಿಂಧು (68; 91ಎ, 4X2, 6X5) ಭರ್ಜರಿ ಅರ್ಧಶತಕ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಕೇಂದ್ರ ವಲಯ: 102 ಓವರ್ಗಳಲ್ಲಿ 4ಕ್ಕೆ532 ಡಿಕ್ಲೇರ್ಡ್

ಈಶಾನ್ಯ ವಲಯ: 69.3 ಓವರ್ಗಳಲ್ಲಿ 185.

ಎರಡನೇ ಇನಿಂಗ್ಸ್

ಕೇಂದ್ರ ವಲಯ: 80.3 ಓವರ್ಗಳಲ್ಲಿ 7ಕ್ಕೆ331 ಡಿಕ್ಲೇರ್ಡ್.

ಈಶಾನ್ಯ ವಲಯ: 58 ಓವರ್ಗಳಲ್ಲಿ 6ಕ್ಕೆ200 (ಜೆಹು ಆ್ಯಂಡರ್ಸನ್ 64, ರಾಂಗ್ಸೇನ್ ಜೋನಾಥನ್ 60, ಹರ್ಷ ದುಬೆ 53ಕ್ಕೆ2, ಆದಿತ್ಯ ಠಾಕರೆ 21ಕ್ಕೆ2, ಶುಭಂ ಶರ್ಮಾ 10ಕ್ಕೆ2)

ಫಲಿತಾಂಶ: ಡ್ರಾ.

ಮೊದಲ ಇನಿಂಗ್ಸ್

ಉತ್ತರ ವಲಯ: 93.2 ಓವರ್ಗಳಲ್ಲಿ 405.

ಪೂರ್ವ ವಲಯ 56.1 ಓವರ್ಗಳಲ್ಲಿ 230.

ಎರಡನೇ ಇನಿಂಗ್ಸ್

ಉತ್ತರ ವಲಯ: 146.2 ಓವರ್ಗಳಲ್ಲಿ 4ಕ್ಕೆ658 ಡಿಕ್ಲೇರ್ಡ್ (ಅಂಕಿತ್ ಕುಮಾರ್ 198, ಆಯುಷ್ ಬಡೋನಿ ಅಜೇಯ 204, ನಿಶಾಂತ್ ಸಿಂಧು 68, ಕನ್ಹಯಾ ವಾಧ್ವಾನ್ ಔಟಾಗದೇ 23, ಮುಕ್ತಾರ್ ಹುಸೇನ್ 86ಕ್ಕೆ1, ಸೂರಜ್ ಸಿಂಧು ಜೈಸ್ವಾಲ್ 77ಕ್ಕೆ1, ರಿಯಾನ್ ಪರಾಗ್ 78ಕ್ಕೆ1)

ಫಲಿತಾಂಶ: ಡ್ರಾ

ಸೆಮಿಫೈನಲ್ ಪಂದ್ಯಗಳು

ದಕ್ಷಿಣ ವಲಯ vs ಉತ್ತರ ವಲಯ

ಪಶ್ವಿಮ ವಲಯ vs ಕೇಂದ್ರ ವಲಯ

ದಿನಾಂಕ: ಸೆ. 4ರಿಂದ 7

ಸಮಯ: ಬೆಳಿಗ್ಗೆ 9.30ರಿಂದ

ಸ್ಥಳ: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನ.

ದಕ್ಷಿಣ ವಲಯಕ್ಕೆ ಅಜರುದ್ದೀನ್ ನಾಯಕ

ಬೆಂಗಳೂರು: ಕೇರಳ ತಂಡದ ಬ್ಯಾಟರ್ ಮೊಹಮ್ಮದ್ ಅಜರುದ್ದೀನ್ ಅವರನ್ನು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ದಕ್ಷಿಣ ವಲಯ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಈ ಮೊದಲು ತಂಡಕ್ಕೆ ತಿಲಕ್ ವರ್ಮಾ ಅವರನ್ನು ನಾಯಕರನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಅವರು ಈಗ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದರಿಂದಾಗಿ ಅವರು ದುಲೀಪ್ ಟ್ರೋಫಿಯಲ್ಲಿ ಆಡಲು ಲಭ್ಯರಿಲ್ಲ. ಆದ್ದರಿಂದ ಉಪನಾಯಕರಾಗಿರುವ ಅಜರುದ್ದೀನ್ ಅವರಿಗೆ ನಾಯಕತ್ವ ವಹಿಸಲಾಗಿದೆ. ಈಗ ತಮಿಳುನಾಡಿನ ಎನ್. ಜಗದೀಶನ್ ಅವರನ್ನುಉಪನಾಯಕರನ್ನಾಗಿ ಮಾಡಲಾಗಿದೆ.

ದಕ್ಷಿಣ ವಲಯ ತಂಡ: ಮೊಹಮ್ಮದ್ ಅಜರುದ್ದೀನ್ (ನಾಯಕ), ತನ್ಮಯ್ ಅಗರವಾಲ್, ದೇವದತ್ತ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣ ಜಗದೀಶನ್, ತ್ರಿಪುರಣ ವಿಜಯ್, ತನಯ್ ತ್ಯಾಗರಾಜನ್, ವೈಶಾಖ ವಿಜಯಕುಮಾರ್, ಎಂ.ಡಿ. ನಿಧೀಶ್, ರಿಕಿ ಭುಯ್, ಎನ್.ಪಿ. ಬಾಸಿಲ್, ಗುರ್ಜಪನೀತ್ ಸಿಂಗ್, ಸ್ನೇಹಲ್ ಕೌತಣಕರ್, ಅಂಕಿತ್ ಶರ್ಮಾ, ಶೇಖ್ ರಶೀದ್.

ಮೀಸಲು ಆಟಗಾರರು: ಮೋಹಿತ್ ರೇಡ್ಕರ್, ಆರ್.ಸ್ಮರಣ್, ಇಡೇನ್ ಆ್ಯಪಲ್ ಟಾಮ್, ಆ್ಯಂಡ್ರೆ ಸಿದ್ಧಾರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.