ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ..
Published 22 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ನಿಮ್ಮ ಬುದ್ಧಿವಂತಿಕೆಯ ಕಾರ್ಯವೈಖರಿಯಿಂದ ಅನುಭವಕ್ಕೆ ಬರುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಅತೀವ ಆಸಕ್ತಿಗೆ ಇತರೆ ಅನಿವಾರ್ಯ ಜವಬ್ದಾರಿಗಳ ಮೋಡ ಮುಸುಕಿ ಗ್ರಹಣ ಬಂದಂತಾಗುವುದು.
22 ಅಕ್ಟೋಬರ್ 2025, 23:30 IST
ವೃಷಭ
ಹವ್ಯಾಸಿ ಉಪನ್ಯಾಸಕರಿಗೆ ಹೇರಳವಾದ ಅವಕಾಶ ಲಭ್ಯವಾಗುತ್ತದೆ. ವಿವಾಹ ವಿಷಯ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ದೇಹಾರೋಗ್ಯದ ಬಗ್ಗೆ ಅದರಲ್ಲೂ ಉದರ ವ್ಯಾಧಿಯ ಬಗ್ಗೆ ಕಳಜಿ ವಹಿಸಬೇಕು.
22 ಅಕ್ಟೋಬರ್ 2025, 23:30 IST
ಮಿಥುನ
ಈ ದಿನ ಮಗಳ ಮದುವೆಯ ವಿಚಾರದಲ್ಲಿ ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದುದು ಆಗಿರುತ್ತದೆ. ಶಿಕ್ಷಕ ವೃತ್ತಿಯನ್ನು ಆರಂಭಿಸುವ ಬಗ್ಗೆ ಆಲೋಚಿಸಿದವರಿಗೆ ಶುಭ ದಿನ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
22 ಅಕ್ಟೋಬರ್ 2025, 23:30 IST
ಕರ್ಕಾಟಕ
ಬೇರೆಯ ವ್ಯಕ್ತಿಯ ಕೆಲವು ವಸ್ತುಗಳು ಅರಿವಿಲ್ಲದಂತೆ ನಿಮ್ಮ ಮನೆಯನ್ನು ಸೇರುವ ಸಾಧ್ಯತೆ ಇದೆ. ಅಚಾತುರ್ಯದಿಂದ ಬಳಸಿದ ಔಷಧವು ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುವ ಲಕ್ಷಣವಿದೆ.
22 ಅಕ್ಟೋಬರ್ 2025, 23:30 IST
ಸಿಂಹ
ಸದ್ಯದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆಸಕ್ತಿ ನೀಡುವುದು ಉತ್ತಮವಾಗಿ ಕಾಣುತ್ತದೆ. ಹಳೆಯ ಸ್ನೇಹಿತರೊಂದಿಗಿನ ಭೇಟಿ, ಅವರೊಂದಿಗಿನ ಮಾತುಕತೆ, ವ್ಯವಹಾರಗಳ ಬಗ್ಗೆ ಚರ್ಚೆ ಹಾಗೂ ಹಳೆಯ ದಿನದ ನೆನಪುಗಳ ಮೆಲುಕು ನಿಮಗೆ ಹೊಸ ಉತ್ಸಾಹವನ್ನು ಕೊಡಲಿದೆ.
22 ಅಕ್ಟೋಬರ್ 2025, 23:30 IST
ಕನ್ಯಾ
ಕಠಿಣವಾದ ಕೆಲಸವೊಂದಕ್ಕೆ ಕೈ ಹಾಕುವ ಮನಸ್ಸಾಗಲಿದೆ, ನಿಧಾನವಾಗಿ ಯೋಚಿಸಿ ನಂತರದಲ್ಲಿ ನಿರ್ಧರಿಸಿ. ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯು ಈ ದಿನದಿಂದಲೇ ಉಂಟಾಗಲಿದೆ.
22 ಅಕ್ಟೋಬರ್ 2025, 23:30 IST
ತುಲಾ
ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವ ರೀತಿಯನ್ನು ಒಬ್ಬರಿಗೆ ವಿಸ್ತಾರವಾಗಿ ವಿವರಿಸುವ ಮೂಲಕ ಅದರ ಚೌಕಟ್ಟು ನಿಮಗೆ ದೊರಕುತ್ತದೆ. ರಕ್ತ ಸಂಬಂಧೀ ಖಾಯಿಲೆಯನ್ನು ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
22 ಅಕ್ಟೋಬರ್ 2025, 23:30 IST
ವೃಶ್ಚಿಕ
ಸಾಮಾಜಿಕ ಸ್ಥಾನಮಾನಗಳನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಿಮಗಿರುವ ಕಟ್ಟುಪಾಡುಗಳು ಹೆಚ್ಚೆಂದು ಎನ್ನಿಸುವುದು. ಅವೆಲ್ಲವೂ ಬಿಡಲಾಗದ ಅನಿವಾರ್ಯವಾಗಿರುತ್ತದೆ. ಮುಖ್ಯವಾದ ವಿಚಾರಗಳನ್ನು ಮರೆಯುವುದರಿಂದಾಗಿ ಕೆಲಸದಲ್ಲಿ ನಿಧಾನಗತಿ ಉಂಟಾಗಬಹುದು.
22 ಅಕ್ಟೋಬರ್ 2025, 23:30 IST
ಧನು
ಸ್ವಂತ ಉದ್ಯೋಗಸ್ಥರಿಗೆ ಬಿಡುವಿಲ್ಲದೆ ಕೆಲಸಗಳು ಪೂರ್ತಿಗೊಳಿಸಬೇಕಾದ ಸಂದರ್ಭ ಎದುರಾಗುವುದು. ಕಚ್ಚಾ ತೈಲದ ವಹಿವಾಟನ್ನು ನಡೆಸುವವರಿಗೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತದೆ. ಗಣಪತಿಯ ಆರಾಧನೆ ಧೈರ್ಯ ತರುತ್ತದೆ.
22 ಅಕ್ಟೋಬರ್ 2025, 23:30 IST
ಮಕರ
ಮಧುರ ಖಾದ್ಯಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನಿರಪರಾಧಿಗಳ ಮೇಲೆ ಅಪರಾಧಗಳನ್ನು ಹೊರಸಿ ಅವರನ್ನು ದುಃಖಗೊಳಿಸುವುದು ಶ್ರೇಯಸ್ಸಲ್ಲ. ಪ್ರಯಾಣದಲ್ಲಿ ಮೃತ್ಯುವಿನ ದರ್ಶನವೇ ಆದಂತಾಗಬಹುದು.
22 ಅಕ್ಟೋಬರ್ 2025, 23:30 IST
ಕುಂಭ
ದಿನದ ಮೊದಲ ಭಾಗ ಶ್ರಮ ಭರಿತವಾಗಿದ್ದರೂ ನಂತರ ನಿಮಗೆ ಬಹಳ ವಿರಾಮ ದೊರೆಯುವುದು. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ಸಂಘ ಸಂಸ್ಥೆಗಳಲ್ಲಿ ಸ್ಥಾನ ಮಾನಗಳು ದೊರೆಯಲಿದೆ.
22 ಅಕ್ಟೋಬರ್ 2025, 23:30 IST
ಮೀನ
ಇಂಜಿನಿಯರಿಂಗ್ ಮುಗಿಸುವ ಹಂತದ ವಿದ್ಯಾರ್ಥಿಗಳು ಹೊರದೇಶಕ್ಕೆ ಹೋಗುವುದಿದ್ದಲ್ಲಿ ಆದಷ್ಟು ಬೇಗ ಕೆಲವು ಕೋರ್ಸ್ಗಳನ್ನು ಮಾಡಿಕೊಳ್ಳುವ ಯೋಚನೆ ಮಾಡಿ. ಕೆಲಸದ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡುವಿರಿ.
22 ಅಕ್ಟೋಬರ್ 2025, 23:30 IST