ಶಿವಮೊಗ್ಗ: ಇಲ್ಲಿನ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಕ್ರೀಡಾಂಗಣದಲ್ಲಿ ಅ. 25ರಿಂದ 28ರವರೆಗೆ ರಣಜಿ ಟ್ರೋಫಿ ಎಲೀಟ್ ವಿಭಾಗದ ‘ಬಿ’ ಗುಂಪಿನ ಕ್ರಿಕೆಟ್ ಪಂದ್ಯ ನಡೆಯಲಿದೆ.

ಮಯಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಹಾಗೂ ದೀಪರಾಜ್ ಗಾಂವ್ಕರ್ ನೇತೃತ್ವದ ಗೋವಾ ತಂಡಗಳು ಮುಖಾಮುಖಿಯಾಗಲಿವೆ.

ರಾಜ್ಕೋಟ್ನಲ್ಲಿ ನಡೆದಿದ್ದ ಪ್ರಸಕ್ತ ಅಭಿಯಾನದ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕವು ಸೌರಾಷ್ಟ್ರ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ಕೇವಲ 4 ರನ್ಗಳ ಅಂತರದಲ್ಲಿ ಮೊದಲ ಇನ್ನಿಂಗ್ಸ್ ಲೀಡ್ ಬಿಟ್ಟುಕೊಟ್ಟಿತ್ತು. ಡ್ರಾ ಪಂದ್ಯದಲ್ಲಿ ಬರೀ 1 ಅಂಕ ಗಳಿಸಿರುವ ಕರ್ನಾಟಕ ತಂಡ ಈಗ ಒತ್ತಡದಲ್ಲಿದೆ.

‘ಪಂದ್ಯದ ಯಶಸ್ಸಿಗೆ ಈಗಾಗಲೇ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶವಿದೆ. 2020ರ ಜನವರಿ 4ರಿಂದ 7ರವರೆಗೆ ಇದೇ ಮೈದಾನದಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವೆ ರಣಜಿ ಪಂದ್ಯ ನಡೆದಿತ್ತು. ಐದು ವರ್ಷಗಳ ನಂತರ ಶಿವಮೊಗ್ಗ ನಗರ ಮತ್ತೆ ಆತಿಥ್ಯ ವಹಿಸುತ್ತಿದೆ’ ಎಂದು ಕೆಎಸ್ಸಿಎ ಶಿವಮೊಗ್ಗ ವಲಯದ ಹಿಂದಿನ ಸಂಚಾಲಕರೂ ಆದ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.