ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜರು ಜಮೀನಲ್ಲಿ ಬಂಪರ್ ಬೆಳೆ

Last Updated 13 ಮೇ 2013, 19:59 IST
ಅಕ್ಷರ ಗಾತ್ರ

ಸ್ವಲ್ಪ ಜಮೀನು ಇದ್ದರೆ ಅದನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ಪಟ್ಟಣದತ್ತ ಸಾಗುವತ್ತ ಇಂದಿನ ಯುವಕರ ಚಿತ್ತ. ಪಟ್ಟಣದಲ್ಲಿ ಏನಾದರೂ ಸಣ್ಣ ಉದ್ಯೋಗ ಮಾಡಿ ಜೀವನ ಸಾಗಿಸುವ ಹಂಬಲ ಅವರದ್ದು. ಅಲ್ಲಿ ಅವರು ಎಷ್ಟರಮಟ್ಟಿಗೆ ಯಶ ಪಡೆಯುತ್ತಾರೋ ಗೊತ್ತಿಲ್ಲ. ಅಂತೂ ಗ್ರಾಮೀಣ ಯುವಜನರಿಗೆ ಪಟ್ಟಣದ ಆಸೆಯೇ ಹೆಚ್ಚು.

ಆದರೆ ಈಗ ಹೇಳುತ್ತಿರುವ ಯುವಕ ಈ ಎಲ್ಲರಂಥಲ್ಲ. ಪಟ್ಟಣದತ್ತ ಹೋಗಲು ಹಂಬಲಿಸದೇ, ತಮ್ಮಲ್ಲಿರುವ ಮೂರೂವರೆ ಎಕರೆ ಜಾಗದ್ಲ್ಲಲಿಯೇ ಸಂತೋಷ ಕಂಡು ಯಶಸ್ವೀ ಯುವ ಕೃಷಿಕ ಎನಿಸಿದ್ದಾನೆ. ಅಡಿಕೆ, ತೆಂಗು, ಜಾಯಿಕಾಯಿ, ಬಾಳೆ ಸೇರಿದಂತೆ ವೈವಿಧ್ಯಮಯ ತರಕಾರಿ ಇವರ ಜಮೀನಿನಲ್ಲಿ ಕಂಗೊಳಿಸುತ್ತಿದೆ. ಇದನ್ನಷ್ಟೇ ಮಾಡಿದ್ದರೆ ಅದೇನೂ ದೊಡ್ಡ ಸಾಧನೆ ಎನಿಸುತ್ತಿರಲಿಲ್ಲ. ಆದರೆ ಈ ಯುವಕ ಇಷ್ಟೆಲ್ಲ ಬೆಳೆಸಿರುವುದು ಬಂಜರು ಭೂಮಿಯಲ್ಲಿ!

ಈ ಯುವ ಕೃಷಿಕನೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಪೂಣಚ್ಚದ ಚಿಪ್ಲುಕೋಟೆಯ ಚಂದ್ರಹಾಸ. ಪ್ರೌಢಶಾಲೆ ಶಿಕ್ಷಣ ಮುಗಿಸಿರುವ ಇವರಿಗೆ ಕೃಷಿಯತ್ತಲೇ ಒಲವು. ಬೇರೆಯವರ ತೋಟದ ಕೆಲಸಕ್ಕೆ ಹೋಗುವುದರೊಂದಿಗೆ ಜೀವನದ ಆರಂಭ. ಬೇರೆಯವರ ತೋಟದಲ್ಲಿ ಕೆಲಸ ಮಾಡುವ ಬದಲು ತಮ್ಮಲ್ಲಿಯೇ ಇರುವ (ಬಂಜರು) ಜಮೀನಿನಲ್ಲಿ ಸ್ವಾವಲಂಬಿಯಾಗಿ ದುಡಿಯೋಣವೆಂದು ನಿರ್ಧರಿಸಿದರು. ಅದರ ಫಲವಾಗಿ ಇಂದು ಅವರ ಜಮೀನಿನಲ್ಲಿ 500 ಅಡಿಕೆ, ತೆಂಗು, 25ಕ್ಕೂ ಅಧಿಕ ಜಾಯಿಕಾಯಿ ಗಿಡಗಳು ನಳನಳಿಸುತ್ತಿವೆ.

ಅಚ್ಚುಕಟ್ಟಾದ ತೊಂಡೆಕಾಯಿ
ಮನೆಯಂಗಳದ್ಲ್ಲಲಿ ಮೂರು ವರ್ಷದಿಂದ ಉತ್ತಮ ಇಳುವರಿ ನೀಡುತ್ತಿರುವ ವಿಶಾಲವಾದ ತೊಂಡೆ ಚಪ್ಪರ ಇದೆ. ಇದರಿಂದ ವಾರಕ್ಕೆ ಲಭಿಸುವ ಬೆಳೆಯ ಪ್ರಮಾಣ ಸುಮಾರು 75 ಕೆ.ಜಿ. `ಈ ಪರಿಯಾಗಿ ಹುಲುಸು ಬೆಳೆ ಬೆಳೆಯಬೇಕೆಂದರೆ ಹೊಸ ತೊಂಡೆ ಬಳ್ಳಿ ಅಕ್ಟೋಬರ್‌ನ್ಲ್ಲಲಿ ನೆಡಬೇಕು. ಒಂದು ತಿಂಗಳ ನಂತರ ಬಲಿತ ಬಳ್ಳಿ ಚಿಗುರಲು ಚಪ್ಪರ ಅಗತ್ಯ. ಸಂಜೆ ಹೊತ್ತಿನ ತಂಪು ವಾತಾವರಣದ್ಲ್ಲಲಿ  ಸಾಕೆನಿಸುವಷ್ಟು ನೀರೆರೆದರೆ ಕಡಿಮೆ ನೀರು ಸಾಕು. ಹೀಗೆ ಮಾಡಿದರೆ ಬೇಸಿಗೆಯಲ್ಲೂ ಅಧಿಕ ಇಳುವರಿ ಪಡೆಯಬಹುದು. ಪ್ರತಿ ಬುಡಕ್ಕೂ ಮಿತ ಪ್ರಮಾಣದ್ಲ್ಲಲಿ ಹಟ್ಟಿಗೊಬ್ಬರ ಅನಿವಾರ್ಯ. ಇದು ಬಳ್ಳಿಗೆ ತಗಲುವ ಫಂಗಸ್ ಅನ್ನು ತಡೆದು ಗಂಟುಹುಳರೋಗವನ್ನು ದೂರಮಾಡುವುದು. ಚಪ್ಪರದಡಿ ಖಾಲಿ ಇರುವ ಜಾಗದ್ಲ್ಲಲಿ ಹುಲ್ಲನ್ನೂ ಬೆಳೆಸಬಹುದು' ಎನ್ನುತ್ತಾರೆ ಚಂದ್ರಹಾಸ.

ಎಲ್ಲರೂ ಬಳಸುವ ನೀರಿನ ರೆಡಿಮೇಡ್ ಟ್ಯಾಂಕ್ ಇವರದ್ದಲ್ಲ. ಮನೆಯ ಗುಡ್ಡದ ನೆಲತಟ್ಟಿನಿಂದ 6 ಅಡಿ ಆಳವಿರುವ ಗಟ್ಟಿಮುಟ್ಟಾದ ಮಣ್ಣಿನ ಟ್ಯಾಂಕ್ ನಿರ್ಮಿಸಿದ್ದಾರೆ. ಇದರಲ್ಲಿ ಬೋರ್‌ವೆಲ್ ನೀರಿನ ಸಂಗ್ರಹ. ಇದನ್ನು ತೋಟ ಹಾಗೂ ತರಕಾರಿಗೂ ಬಳಕೆ. `ಕೊಳವೆಬಾವಿ ನೀರಿನಲ್ಲಿ ಕಬ್ಬಿಣ ವಾಸನೆ ಇರುತ್ತದೆ. ಆದರೆ ಈ ರೀತಿ ನೀರನ್ನು ಸಂಗ್ರಹಿಸಿದರೆ ಸ್ವಚ್ಛಂದ ಜಲ ಲಭ್ಯ, ಜೊತೆಗೆ ವಿದ್ಯುತ್ ಉಳಿತಾಯವೂ ಸಾಧ್ಯ. ಹಳ್ಳಿ ಪ್ರದೇಶದ್ಲ್ಲಲಿ ಆಗಾಗ ತಲೆದೋರುವ ಲೋಡ್‌ಶೆಡ್ಡಿಂಗ್ ಸಮಸ್ಯೆಯಿಂದ ತೋಟದ ನೀರುಪೂರೈಕೆ ಅಡ್ಡಿಯಾಗುವುದುಂಟು. ಆದರೆ ಈ ಮಾದರಿಯ ಜಲಸಂಗ್ರಹದ ಪದ್ಧತಿಗೆ ಪವರ್‌ಕಟ್ ಕಿರಿಕಿರಿ ಇಲ್ಲ' ಎನ್ನುವುದು ಚಂದ್ರಹಾಸ ಅಭಿಮತ.

ವೈವಿಧ್ಯ ಗಿಡಮರ
ಗುಡ್ಡದ್ಲ್ಲಲಿ ಉತ್ಕೃಷ್ಟವಾಗಿ ಲಾಭ ನೀಡುವ ಗೋಡಂಬಿ ಮರಗಳಿವೆ. ಅವುಗಳ ಮಧ್ಯೆ ಇರುವ ಸ್ವಲ್ಪ ಜಾಗವೂ ವ್ಯರ್ಥವಾಗಿಲ್ಲ. ಅ್ಲ್ಲಲಿ 6 ಅಡಿ ಎತ್ತರ ಹುಲುಸಾಗಿ ಬೆಳೆದ ಹುಲ್ಲನ್ನೂ ಇವರು ಬೆಳೆಸಿದ್ದಾರೆ. ಇದು ಅವರ ಮನೆಯಲ್ಲಿರುವ ದನಕರುಗಳಿಗೆ ಮೃಷ್ಟಾನ್ನ ಎನಿಸಿವೆ. ದುಡ್ಡುಕೊಟ್ಟು ಖರೀದಿಸುವ ಹುಲ್ಲಿನ ಖರ್ಚನ್ನೂ ಉಳಿಸಿದೆ. ಹುಲ್ಲು ಹುಲುಸಾಗಿ ಬೆಳೆಯಲು ಇವರು `ಜೀವಾಮೃತ' ಬಳಸುವರು.

ಇದರ ತಯಾರಿ ಹೀಗಿದೆ: 200ಲೀ ನೀರಿಗೆ 20ಕಿ.ಲೋ ಸಗಣಿ, 2 ಕೆ.ಜಿ ಕಡ್ಲೆ ಹಿಂಡಿ ಹಾಗೂ ಸ್ವಲ್ಪ ಗೋಮೂತ್ರ ಬಳಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ವಾರ ನೆನೆಸಿಟ್ಟರೆ ಹುಲ್ಲಿಗೆ ಅತ್ಯುತ್ತಮ ಗೊಬ್ಬರ ಜೀವಾಮೃತ ಸಿದ್ಧ. ಸಾಮಾನ್ಯವಾಗಿ ಇತರೆ ಗೊಬ್ಬರ ಹಾಕಿದರೆ ಅದರ ಬೆಳವಣಿಗೆ ನಿಧಾನ. ಆದರೆ ಜೀವಾಮೃತ ದ್ರವರೂಪದಲ್ಲಿ ಇರುವ ಕಾರಣ ಹುಲ್ಲು ಚೆನ್ನಾಗಿ ಬೆಳೆಯಲು ಸಹಕಾರಿ. ಭೂಮಿಯ ಇಳಿಜಾರು ಪ್ರದೇಶವನ್ನೂ ಬಿಡದೆ ಅಡಿಕೆ ಗಿಡ ನೆಟ್ಟಿದ್ದು ಚಂದ್ರಹಾಸ್ ಅವರ ಇನ್ನೊಂದು ವಿಶೇಷ. ತೈವಾನ್ ಜಾತಿಯ ಪಪ್ಪಾಯ ಗಿಡಗಳೂ ಇವರಲ್ಲಿವೆ. ಸೊಂಪಾಗಿ ಬೆಳೆದ ವೀಳ್ಯದೆಲೆ ಬಳ್ಳಿಯೂ ಇವರ ಖರ್ಚಿಗೆ ಆಧಾರ. ಬಂಜರು ಭೂಮಿಯಿಂದ ಸಿಗುವ ಲಾಭ ಶೂನ್ಯ ಎಂದು ಯೋಚಿಸುವ ಮಂದಿಗೆ ಚಂದ್ರಹಾಸರ ಕೃಷಿ ಪದ್ಧತಿ ಉತ್ತರ ನೀಡಬಲ್ಲುದು. ಸಂಪರ್ಕಕ್ಕೆ 9449585704
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT