ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಾವರಿ ಹೀರೇ ಕಾಯಿ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಳೆಗಳು ಹಲವಾರು, ಆದರೆ ಈ ಬೆಳೆಗಳಲ್ಲೇ ಹೊಸ ಹೊಸ ಪ್ರಯೋಗ ಮಾಡುತ್ತಾ ಲಾಭದ ಕಡೆ ಹೆಜ್ಜೆ ಇಡುವ ರೈತರು
ಕೆಲವೇ ಕೆಲವರು.

ಇಂಥ ಕೆಲವು ರೈತರ ಪೈಕಿ ಸಾಮಾನ್ಯವಾಗಿ ಎಲ್ಲರೂ ಬೆಳೆಯುವ ಹೀರೇಕಾಯಿಯನ್ನು ಆಸ್ಥೆಯಿಂದ ಬೆಳೆದು ವಿಭಿನ್ನ ರೀತಿಯ ಪ್ರಯೋಗದಲ್ಲಿ ತೊಡಗಿಸಿಕೊಂಡವರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಆರೋಳ್ಳಿ ಕ್ರಾಸ್ ಗ್ರಾಮದ ವಿನೋದ ಕುಮಾರ್.
ಇವರ ಅರ್ಧ ಎಕರೆ ಗದ್ದೆಯಲ್ಲಿ ವರ್ಷಪೂರ್ತಿ ಹೀರೇಕಾಯಿ ಲಭ್ಯ. ಇವರ ಯಶಸ್ಸಿನ ಹಿಂದಿರುವುದು ಸಾವಯವ ಕೃಷಿಯೊಂದಿಗೆ ಹನಿ ನೀರಾವರಿ ಪದ್ಧತಿ. ಹಾಗೆ ನೋಡಿದರೆ ಇದು ಹೊಸ ಪದ್ಧತಿಯೇನೂ ಅಲ್ಲ. ಆದರೆ ಅದರಲ್ಲಿಯೇ ಹೊಸ ಬಗೆಯ ಕೃಷಿಯಲ್ಲಿ ವಿನೋದ್‌ಕುಮಾರ್‌ ತೊಡಗಿಕೊಂಡಿದ್ದಾರೆ.

‘ಭೂಮಿಯಿಂದ ಸುಮಾರು ಒಂದು ಅಡಿ ಎತ್ತರದಲ್ಲಿ ಮಣ್ಣಿನ ದಿಬ್ಬವನ್ನು ಮಾಡಿ ಅಲ್ಲಿ ಬೀಜವನ್ನ ಸಿಂಪಡಿಸುತ್ತೇವೆ. ಒಂದು ಮಣ್ಣಿನ ದಿಬ್ಬದಿಂದ ಇನ್ನೊಂದು ಮಣ್ಣಿನ ದಿಬ್ಬದ ಅಂತರ ಸುಮಾರು 3 ಅಡಿ ಹಾಗೂ ಸಾಲಿನಿಂದ ಸಾಲಿಗೆ 4 ಅಡಿಯಾದರೂ ಇರಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಬಳ್ಳಿಗೆ ನೀರನ್ನು ಸಿಂಪಡಿಸುತ್ತೇವೆ. ಈ ಪದ್ಧತಿಯಲ್ಲಿ ಅಲ್ಪ ನೀರು ಹನಿ ಹನಿಯಾಗಿ ಹೀರೇ ಬಳ್ಳಿಯ ಬುಡಕ್ಕೆ ಸರಿಯಾಗಿ ತಲುಪುತ್ತದೆ. ಕಡಿಮೆ ನೀರಿನಲ್ಲಿ ಭರಪೂರ ಫಸಲು ಇದರಿಂದಲೇ ಸಾಧ್ಯವಾಗಿದೆ’ ಎಂದು ತಮ್ಮ ಯಶಸ್ಸಿನ ಗುಟ್ಟು ಹೇಳುತ್ತಾರೆ ವಿನೋದ್‌. ‘ನೀರು ಸುತ್ತಲೂ ನಿಲ್ಲಬಾರದು ಎಂದು ಈ ರೀತಿಯ ಮಣ್ಣಿನ ದಿಬ್ಬವನ್ನು ಮಾಡಲಾಗುವುದು. ಅಷ್ಟೇ ಅಲ್ಲದೆ ಇದರಿಂದ ಔಷಧಿಯನ್ನು ಸಿಂಪಡಿಸಲು ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

ಹೀರೇಕಾಯಿ ಭಾರಕ್ಕೆ ಬಳ್ಳಿ ಬಾಗಬಾರದು ಎಂಬ ಕಾರಣಕ್ಕೆ ಕೋಲು ನಿಲ್ಲಿಸಲಾಗುತ್ತದೆ. ಪ್ರಾರಂಭದ ಹಂತದಲ್ಲಿ ಮಣ್ಣಿನಲ್ಲಿ ಸೆಗಣಿ ಗೊಬ್ಬರವನ್ನು ಹಾಕಿ ಫಲವತ್ತಾದ ಮಣ್ಣನ್ನಾಗಿ ಮಾಡುತ್ತಾರೆ.

ತದನಂತರ ಬೀಜ ಹಾಕಿ ಸಸಿ ಬಂದ ಮೇಲೂ ಗೊಬ್ಬರ ಹಾಕುತ್ತಾರೆ. ಬೀಜವನ್ನು ಹಾಕಿದ ಎರಡು ತಿಂಗಳಿಗೆ ಹೂವು ಬಿಡಲು ಪ್ರಾರಂಭವಾಗುತ್ತದೆ. ನೀರಿನೊಂದಿಗೆ ಔಷಧಿ ಬೆರೆಸಿ ಗಿಡಕ್ಕೆ ಹಾಗೂ ಹೂವಿಗೆ ಸಿಂಪಡಿಸುತ್ತಾರೆ. ಸರಿಸುಮಾರು ಒಂದು ಹೀರೇಕಾಯಿ ಒಂದರಿಂದ ಒಂದೂಕಾಲು ಕೆ.ಜಿ ತೂಗುತ್ತದೆ. ಹೀಗೆ ತಮ್ಮ  ಅರ್ಧ ಎಕರೆ ಗದ್ದೆಯಲ್ಲಿ ಸುಮಾರು ಒಂದು ಟನ್ ಹೀರೇಕಾಯಿ ಬೆಳೆಯುತ್ತಾರೆ.

ಮಾರುಕಟ್ಟೆಯಲ್ಲಿಯೂ ಇವರು ಬೆಳೆದ ಹೀರೇಕಾಯಿಗೆ ಭಾರಿ ಬೇಡಿಕೆ. ಹಲವು ಬೃಹತ್‌ ಮಾಲ್‌ಗಳಿಂದಲೂ ಬೇಡಿಕೆ ಇದ್ದು, ಇವರು ಇದ್ದಲ್ಲಿಯೇ  ಬಂದು ಖರೀದಿಸಿ ಹೋಗುವುದೂ ಇದೆ. ‘ನಮ್ಮಲ್ಲಿರುವ ಅರ್ಧ ಎಕರೆ ಗದ್ದೆಯಲ್ಲಿ ಇದನ್ನು ಬೆಳೆಸಲು ಸುಮಾರು 10 ರಿಂದ 15 ಸಾವಿರ ರೂಪಾಯಿಯವರಗೊ ಖರ್ಚಾಗುತ್ತದೆ. ಆದರೆ  60 ರಿಂದ 70 ಸಾವಿರದವರೆಗೂ ಲಾಭವಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೆ ಹೆಚ್ಚು ಲಾಭ ಪಡೆಯಬಹುದು. ಇದನ್ನು ರೋಗಮುಕ್ತವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ’ ಎನ್ನುತ್ತಾರೆ ವಿನೋದ್‌. ಇವರ ಸಂಪರ್ಕ ಸಂಖ್ಯೆ 09035277301.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT