ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಕೋಟಿ ಜನ ಪ್ರಯಾಣ

KIA Passenger Traffic: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಕಳೆದ ವರ್ಷ (2025) ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 4,38,20,000 ಜನರು ಪ್ರಯಾಣಿಸಿದ್ದಾರೆ. ನವೆಂಬರ್‌ 23ರಂದು ದಾಖಲೆ ಪ್ರಮಾಣದ ಸಂಚಾರ ನಡೆದಿದೆ.
Last Updated 16 ಜನವರಿ 2026, 3:14 IST
ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಕೋಟಿ ಜನ ಪ್ರಯಾಣ

2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ. ತೆರಿಗೆ ಸಂಗ್ರಹ, ಮಮತಾ ಬ್ಯಾನರ್ಜಿ ವಿಚಾರಣೆ, ಜಿಡಿಪಿ ಅಂದಾಜು ಸೇರಿದಂತೆ ಹಲವು ಬೆಳವಣಿಗೆಗಳು.
Last Updated 16 ಜನವರಿ 2026, 2:17 IST
2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಹೂಡಿಕೆದಾರರ ಸಮಾವೇಶ | 11 ತಿಂಗಳಲ್ಲಿ ₹ 4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂಬಿಪಾ

Global Investors Meet: ‘2025ರ ಫೆಬ್ರುವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹ 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿತ್ತು. ಈ ಪೈಕಿ, ಡಿಸೆಂಬರ್ ಅಂತ್ಯದ ವೇಳೆಗೆ ₹ 4.71 ಲಕ್ಷ ಕೋಟಿ ಹೂಡಿಕೆ ಆಗಿದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 16 ಜನವರಿ 2026, 1:31 IST
ಹೂಡಿಕೆದಾರರ ಸಮಾವೇಶ | 11 ತಿಂಗಳಲ್ಲಿ ₹ 4.71 ಲಕ್ಷ ಕೋಟಿ ಹೂಡಿಕೆ: ಸಚಿವ ಎಂಬಿಪಾ

ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಕಾಡುಗೋಡಿಯ ಅರಣ್ಯ ಭೂಮಿಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ವಿಳಂಬ ಮಾಡುತ್ತಿರುವ ನಡುವೆಯೇ, ಎಂಬೆಸಿ ಗ್ರೂಪ್‌ನಿಂದ ಐಟಿ ಪಾರ್ಕ್ ನಿರ್ಮಾಣ ಕಾರ್ಯ ಆರಂಭವಾಗಿದೆ. ₹22,000 ಕೋಟಿ ಮೌಲ್ಯದ ಭೂಮಿ ವಿವಾದದಲ್ಲಿದೆ.
Last Updated 16 ಜನವರಿ 2026, 1:07 IST
ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ರಾಜ್ಯದ ಬೊಕ್ಕಸಕ್ಕೆ ₹13 ಸಾವಿರ ಕೋಟಿ ನಷ್ಟ: ₹65,000 ಕೋಟಿ ಸಂಗ್ರಹ ಸವಾಲು

Karnataka Revenue Loss: ಕರ್ನಾಟಕ ಸರ್ಕಾರಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ₹13,000 ಕೋಟಿವರೆಗೆ ಕೊರತೆಯಾಗುವ ಸಾಧ್ಯತೆಯಿದೆ. ಜಿಎಸ್‌ಟಿ ಬದಲಾವಣೆ ಹಾಗೂ ನೋಂದಣಿ ಇಲಾಖೆಯ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣ.
Last Updated 16 ಜನವರಿ 2026, 1:01 IST
ರಾಜ್ಯದ ಬೊಕ್ಕಸಕ್ಕೆ ₹13 ಸಾವಿರ ಕೋಟಿ ನಷ್ಟ: ₹65,000 ಕೋಟಿ ಸಂಗ್ರಹ ಸವಾಲು

ಶಿಶುಮರಣ ತಪ್ಪಿಸಲು ಜನ್ಮಜಾತ ಸಮಸ್ಯೆ ಪತ್ತೆಗೆ ತಪಾಸಣೆ

Infant Health Care: ಜನ್ಮಜಾತ ಅನಾರೋಗ್ಯ ಸಮಸ್ಯೆಗಳ ಪತ್ತೆಯ ಜತೆಗೆ, ವಿರಳ ಕಾಯಿಲೆಗಳಿಂದ ಸಂಭವಿಸುತ್ತಿರುವ ಮರಣ ತಡೆಯಲು ಆರೋಗ್ಯ ಇಲಾಖೆಯು ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ರೂಪಿಸಿದೆ. ಇದು ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಜಾರಿಯಾಗಲಿದೆ.
Last Updated 16 ಜನವರಿ 2026, 1:00 IST
ಶಿಶುಮರಣ ತಪ್ಪಿಸಲು ಜನ್ಮಜಾತ ಸಮಸ್ಯೆ ಪತ್ತೆಗೆ ತಪಾಸಣೆ

ಉತ್ತರ ಕನ್ನಡದಲ್ಲಿ 110 ರಾಮಪತ್ರೆ ಜಡ್ಡಿ ಕಾಡು: ಕಾಪಾಡಿಕೊಳ್ಳುವ ಅನಿವಾರ್ಯತೆ

Ecological Conservation: ಬೇಡ್ತಿ– ವರದಾ ನದಿ ತಿರುವು ಯೋಜನೆ ವಿಷಯವು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೆಲ ವಿಜ್ಞಾನಿಗಳು ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ಮರಗಳು ಮತ್ತು ಸಸ್ಯಗಳಿರುವುದನ್ನು ಪತ್ತೆ ಮಾಡಿದ್ದಾರೆ. ಅವುಗಳ ಮಹತ್ವ ಮತ್ತು ಸೂಕ್ಷ್ಮ ಸಂಗತಿಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ.
Last Updated 16 ಜನವರಿ 2026, 0:59 IST
ಉತ್ತರ ಕನ್ನಡದಲ್ಲಿ 110 ರಾಮಪತ್ರೆ ಜಡ್ಡಿ ಕಾಡು: ಕಾಪಾಡಿಕೊಳ್ಳುವ ಅನಿವಾರ್ಯತೆ
ADVERTISEMENT

ಜೈಪುರ ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮಾತಿನ ಆಕರ್ಷಣೆ

Banu Mushtaq: ಸಾಹಿತ್ಯಾಸಕ್ತರ ಬಹುನಿರೀಕ್ಷಿತ ಜೈಪುರ ಸಾಹಿತ್ಯ ಉತ್ಸವದ ಮೊದಲ ದಿನವು ವೈವಿಧ್ಯಮಯವಾದ ಗೋಷ್ಠಿಗಳಿಗೆ ಸಾಕ್ಷಿಯಾಯಿತು. ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರು ದಿಕ್ಸೂಚಿ ಭಾಷಣ ಮಾಡಿದರು.
Last Updated 16 ಜನವರಿ 2026, 0:55 IST
ಜೈಪುರ ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮಾತಿನ ಆಕರ್ಷಣೆ

ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ | ಸಮಸ್ಯೆ ಶಾಶ್ವತ: ಪರಿಹಾರ ದೂರ

Bengaluru Traffic: ತುಮಕೂರು ರಸ್ತೆಯ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ಆರಂಭವಾಗಿ ಒಂದೂವರೆ ವರ್ಷ ಕಳೆದಿದ್ದರೂ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ವಾಹನ ಚಾಲಕರಿಗೆ ಸಂಕಟ ಮಾತ್ರ ತಪ್ಪುತ್ತಿಲ್ಲ.
Last Updated 16 ಜನವರಿ 2026, 0:47 IST
ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ | ಸಮಸ್ಯೆ ಶಾಶ್ವತ: ಪರಿಹಾರ ದೂರ

ಹಾಸನ: ಆನೆ ಕಾರ್ಯಪಡೆಯ 15 ಹುದ್ದೆಗಳ ಪೈಕಿ 11 ಖಾಲಿ

Elephant Conflict: ಸಕಲೇಶಪುರ (ಹಾಸನ ಜಿಲ್ಲೆ): ಜಿಲ್ಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕಾಗಿ ರಚಿಸಿರುವ ಆನೆ ಕಾರ್ಯಪಡೆಗೇ ಬಲವಿಲ್ಲದಂತಾಗಿದೆ. ಮಂಜೂರಾಗಿರುವ 15 ಹುದ್ದೆಗಳಲ್ಲಿ 11 ಖಾಲಿ ಇವೆ. ಪ್ರಮುಖವಾಗಿರುವ ಡಿಸಿಎಫ್‌ ಹುದ್ದೆಯ ಜೊತೆಗೆ ವಲಯ ಅರಣ್ಯಾಧಿಕಾರಿ ಹುದ್ದೆಯೂ ಖಾಲಿ ಇದೆ.
Last Updated 16 ಜನವರಿ 2026, 0:43 IST
ಹಾಸನ: ಆನೆ ಕಾರ್ಯಪಡೆಯ 15 ಹುದ್ದೆಗಳ ಪೈಕಿ 11 ಖಾಲಿ
ADVERTISEMENT
ADVERTISEMENT
ADVERTISEMENT