50 ವರ್ಷಗಳ ಹಿಂದೆ, 13–9–1968

ಚವಾಣ್‌–ಕೇಂದ್ರ ನೌಕರರ ಮಾತುಕತೆ ವಿಫಲ

ನವದೆಹಲಿ, ಸೆ.12– ಕೇಂದ್ರ ಸರಕಾರದ ನೌಕರರ ಒಂದು ದಿನದ ಸಾಂಕೇತಿಕ ಮುಷ್ಕರ ತಪ್ಪಿಸಲು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಸಲಹೆ ಪ್ರಕಾರ ಗೃಹಸಚಿವ ಶ್ರೀ ಚವಾಣ್‌ ಮತ್ತು ನೌಕರರ ಪ್ರತಿನಿಧಿಗಳ ನಡುವೆ ಇಂದು ನಡೆದ ಎರಡು ಗಂಟೆ ಕಾಲದ ಮಹತ್ವದ ಮಾತುಕತೆಗಳು ವಿಫಲವಾದವು.

ಅಗತ್ಯ ಆಧಾರಿತ ಕನಿಷ್ಠ ವೇತನದ ಪ್ರಶ್ನೆಯನ್ನು ಪಂಚಾಯಿತಿಯ ಪರಿಶೀಲನೆಗೆ ಒಪ್ಪಿಸುವಂತೆ ನೌಕರರ ವಕ್ತಾರರು ಒತ್ತಾಯಪಡಿಸಿದರು. ಆದರೆ ಕೇಂದ್ರ ಗೃಹಸಚಿವರು ಈ ಬೇಡಿಕೆಯನ್ನು ತಳ್ಳಿಹಾಕಿದರು.

ಮಾದಯ್ಯ ಅವರ ಆಯ್ಕೆ

ಬೆಂಗಳೂರು, ಸೆ.12– ಅರವತ್ತನಾಲ್ಕು ವರ್ಷ ವಯಸ್ಸಿನ ಶ್ರೀ ಎಂ. ಮಾದಯ್ಯ
ನವರು ವಿಧಾನಪರಿಷತ್ತಿನ ಉಪಸಭಾ
ಪತಿಯಾಗಿ ಇಂದು ಸರ್ವಾನುಮತದಿಂದ ಆಯ್ಕೆಯಾದರು. ಕಾಂಗ್ರೆಸ್‌ ಸದಸ್ಯ ಶ್ರೀ ಮಾದಯ್ಯನವರ ಹೆಸರು ಮಾತ್ರ ಸೂಚಿಸಲ್ಪಟ್ಟಿತು. ಅವರು ಅವಿರೋಧವಾಗಿ ಆಯ್ಕೆಯಾದರು.

ಪ್ರಮುಖ ಸುದ್ದಿಗಳು