ಸಿಕ್ಸ್‌ ಪ್ಯಾಕ್‌ ಗಣಪನಿಗೆ ಬೇಡಿಕೆ!

ಆನೇಕಲ್: ವೈವಿಧ್ಯಮಯ ವಿನಾಯಕನ ಮಣ್ಣಿನ ಮೂರ್ತಿ ಸಿದ್ಧಪಡಿಸುವಲ್ಲಿ ಆನೇಕಲ್‌ನ ಚಿತ್ರಗಾರ ವೆಂಕಟರಮಣಪ್ಪ ಕುಟುಂಬದ ಕಲಾವಿದ ನಂಜುಂಡೇಶ್ವರ ಅವರದು ಪ್ರಸಿದ್ಧ ಹೆಸರು.

ಮೂರ್ತಿ ಸಿದ್ಧಪಡಿಸಲು ಕುಟುಂಬದ ಮಹಿಳೆಯರೂ ಸೇರಿದಂತೆ ಹತ್ತು ಮಂದಿ ಹಗಲಿರುಳೆನ್ನದೇ ಕೆಲಸ ಮಾಡಿದ್ದಾರೆ. ₹50ರಿಂದ 20 ಸಾವಿರದವರೆಗೂ ವಿವಿಧ ದರಗಳ ಮೂರ್ತಿ ತಯಾರಿಸಿದ್ದಾರೆ.

‘ಏಳು ವರ್ಷದ ಬಾಲಕಿಯಾಗಿದ್ದಾಗ ತಂದೆಯಿಂದ ಗಣಪತಿ ಮಾಡುವುದನ್ನು ಕಲಿತುಕೊಂಡೆ.‌ ಪರಿಸರ ಸ್ನೇಹಿ ಗಣಪನನ್ನು ತಯಾರು ಮಾಡಿ ಜನರಿಗೆ ನೀಡುವುದು ಗುರಿ’ ಎನ್ನುತ್ತಾರೆ ಕಲಾವಿದೆ ಮುತ್ತಮ್ಮ.

‘ಜನರ ಬೇಡಿಕೆಯಂತೆ ಗಣಪನ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಡೊಳ್ಳು ಹೊಟ್ಟೆ ಗಣಪನ ಜೊತೆಗೆ ಸಿಕ್ಸ್ ಪ್ಯಾಕ್ ಗಣಪನ ಮೂರ್ತಿಗೆ ಯುವಕರು ಬೇಡಿಕೆ ಇಡುತ್ತಾರೆ’ ಎಂದರು.

ಆನೇಕಲ್ ಸುತ್ತಲಿನ ಗ್ರಾಮಗಳಿಂದ ಹಾಗೂ ತಮಿಳುನಾಡಿನ ವಿವಿಧೆಡೆಗಳಿಂದ ಗಣಪತಿ ಮೂರ್ತಿ ಕೊಳ್ಳಲು ಇಲ್ಲಿಗೆ ಬರುವುದು ವಿಶೇಷ.

ಪ್ರಮುಖ ಸುದ್ದಿಗಳು