ಬೆಂಗಳೂರು: 2021 ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಯಲ್ಲಿದ್ದೀರಾ? ಕೋವಿಡ್ ಆತಂಕದ ಕಾಲದಲ್ಲಿ ಓದುಗರು ಮನೆಯಲ್ಲಿ ಕುಳಿತೇ ಸಂಭ್ರಮಿಸಲು ಪ್ರಜಾವಾಣಿಯಿಂದ ವಿನೂತನ ಪ್ರಯತ್ನ.

ಇಂದು ಸಂಜೆ 7ರಿಂದ ಮಧ್ಯರಾತ್ರಿ ಕಳೆಯುವವರೆಗೂ ಎರಡು ಭಾಗಗಳಲ್ಲಿ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನಗೆ, ಹಾಡು, ಕುಣಿತ, ಹಾರೈಕೆ ಇರುತ್ತದೆ.

ಸಂಜೆ 7ರಿಂದ ರಾತ್ರಿ 9.50 ಮತ್ತು ರಾತ್ರಿ 10ರಿಂದ ಮಧ್ಯರಾತ್ರಿ 00.50ರ ವರೆಗೆ ಹೀಗೆ ಎರಡು ಹಂತಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್ ಬುಕ್ ಪ್ರೀಮಿಯರ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:

ಏಳು ಗಂಟೆಗೆ ಸರಿಯಾಗಿ ಖ್ಯಾತ ಕವಿ ಎಛ್. ದುಂಡಿರಾಜ್ ಅವರಿಂದ ಹನಿಗವನಗಳ ರಸದೌತಣ ಪ್ರಾರಂಭವಾಗಿದ್ದು, 7.45ರ ವರೆಗೂ ಮುಂದುವರಿಯಲಿದೆ.

ರಾತ್ರಿ 7.45ಕ್ಕೆ ಅಂತರ ರಾಷ್ಟ್ರೀಯ ಚೌಡಿಕೆ ಕಲಾವಿದೆ, ಅಥಣಿಯ ಕೆ. ರಾಧಾ ಬಾಯಿ ಮತ್ತು ತಂಡದಿಂದ ಚೌಡಿಕೆ ಮೇಳ.

ರಾತ್ರಿ 8.30ಕ್ಕೆ ಸರಿಯಾಗಿ ಅಮೆರಿಕದ ವರ್ಜೀನಿಯಾದ ರಿಚ್ಮಂಡ್‌ನಿಂದ ಸೌಮ್ಯ ಕೃಷ್ಣ ಅವರಿಂದ 'ನಿನ್ನ ಬಾಂದಳದಂತೆ ನನ್ನ ಮನವಿರಲಿ' ಸಮಸ್ತ ಕನ್ನಡಿಗರಿಗೆ ವಿವಿಧ ಕವಿಗಳ ಕಾವ್ಯ ಗಾಯನದ ಮೂಲಕ ಶುಭ ಹಾರೈಕೆ.

ರಾತ್ರಿ 10ಕ್ಕೆ ಇಂಪು ಸಂಗೀತ ಸಂಸ್ಥೆಯ ಶೈಲಜಾ, ಎಚ್.ಆರ್.ಕೆ. ಪ್ರಸಾದ್ ಮತ್ತು ಕಿಶೋರ್ ಅವರಿಂದ ಕನ್ನಡ ಚಿತ್ರರಂಗದ ಎಂದೂ ಮರೆಯಲಾಗದ ಗೀತೆಗಳು.

ರಾತ್ರಿ 11ಕ್ಕೆ ಭಾರತ್ ನಗರದ ದೀಪಾ ಅಂಧಮಕ್ಕಳ ಶಾಲೆಯ ಸದಸ್ಯರಿಂದ 'ಒಂದೇ ವೃಕ್ಷದ ಕೊಂಬೆಗಳು ನಾವು' ವಿಶೇಷ ನೃತ್ಯ ರೂಪಕ. ಕೋರಿಯೋಗ್ರಫಿ ಮತ್ತು ನಿರ್ದೇಶನ ಡಾ. ಸುಪರ್ಣಾ ವೆಂಕಟೇಶ್. ತಾಂತ್ರಿಕ ನಿರ್ದೇಶಕರು ಸಾಯಿ ವೆಂಕಟೇಶ್. ಸಿ. ಅಶ್ವಥ್ ಸಂಗೀತ ನೀಡಿದ್ದ ಜಿಎಸ್‌ಎಸ್ ಕವಿತೆಗಳಿಗೆ ಈ ಪ್ರತಿಭಾನಿತ್ವರು ಹೆಜ್ಜೆ ಹಾಕಲಿದ್ದಾರೆ. ನಿರೂಪಣೆ: ಸುಷ್ಮಾ, ನಿರ್ಮಾಣ: ಶಾಂತಾರಾಮ್

ಮಧ್ಯರಾತ್ರಿ 12ಕ್ಕೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾ ಅರಸೀಕೆರೆಯ ಕುಮಾರಯ್ಯ ಮತ್ತು ತಂಡದವರಿಂದ ದೇಶೀ ವಾದ್ಯಗಳ 'ಚಿಟ್ ಮೇಳ'.

ನಿರೂಪಣೆ: ಸುಮಾ ಪ್ರಸಾದ್, ಚಿಕ್ಕಮಗಳೂರು
ಕಾರ್ಯಕ್ರಮ ವಿನ್ಯಾಸ ಮತ್ತು ಸಂಘಟನೆ: ಶ್ರೀನಿವಾಸ ಜಿ.ಕಪ್ಪಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.