ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.26: ಪ್ರಜಾವಾಣಿ ದಸರಾ ಸಂಗೀತೋತ್ಸವ ಸಮಾರೋಪ

10 ದಿನ ಆನ್‌ಲೈನ್ ಮೂಲಕ ಓದುಗರ ಮನಸ್ಸಿಗೆ ಸಾಂತ್ವನ ನೀಡಿದ ಸಾಂಸ್ಕೃತಿಕ ಸರಣಿ
Last Updated 24 ಅಕ್ಟೋಬರ್ 2020, 8:54 IST
ಅಕ್ಷರ ಗಾತ್ರ
ADVERTISEMENT
""
""
""
""
""
""
"ದಯಾನಂದ"

ಕನ್ನಡ ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ 'ಪ್ರಜಾವಾಣಿ ದಸರಾ ಸಂಗೀತೋತ್ಸವ 2020' ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.26ರ ಸೋಮವಾರ ವಿಜಯ ದಶಮಿ ದಿನ ನಡೆಯಲಿದೆ.

ಕೋವಿಡ್ ಕಾಲದಲ್ಲಿ ನಾಡಿನ ಜನತೆಗೆ ನೆಮ್ಮದಿ, ಶಾಂತಿಗಾಗಿ ಪ್ರಜಾವಾಣಿ ಅ.16ರಿಂದ ಪ್ರತಿದಿನ ಸಂಜೆ ಫೇಸ್‌ಬುಕ್ ಪುಟದಲ್ಲಿ, ಮಹಾನ್ ಕಲಾವಿದರ ಭಾಗೀದಾರಿಯೊಂದಿಗೆ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಗಳು ಲಕ್ಷಾಂತರ ಓದುಗರ ಮನಸೂರೆಗೊಂಡಿದ್ದು, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿವೆ.

ಕೃಪಾ ಫಡ್ಕೆ ತಂಡದಿಂದ ಶಕ್ತಿ ದೇವತೆ ಚಾಮುಂಡೇಶ್ವರಿ ನೃತ್ಯ.

ಅ.26, ಸೋಮವಾರ 2020 ಸಮಾರೋಪದ ದಿನದ ಕಾರ್ಯಕ್ರಮಗಳು ಹೀಗಿವೆ:

ಬೆಳಗ್ಗೆ 7 ರಿಂದ
ಸಂಗೀತ ಸಮರ್ಪಣೆ:ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶ್ ಕುಮಾರ್, ಧಾರವಾಡ
ಹಾರ್ಮೋನಿಯಂ: ಗುರುಪ್ರಸಾದ್ ಹೆಗಡೆ
ತಬಲ: ಕೇಶವ ಪ್ರಸಾದ್

ಸಾಂತ್ವನ ಸಂದೇಶ: ಪದ್ಮಶ್ರೀ ಡಾ. ಮಂಜುನಾಥ್, ಜಯದೇವ ಆಸ್ಪತ್ರೆ ಹಾಗೂ ಕೆ.ಎ.ದಯಾನಂದ್, ಐಎಎಸ್ ಅಧಿಕಾರಿ
ನಿರೂಪಣೆ: ಶಶಿಧರ್ ನರೇಂದ್ರ, ಧಾರವಾಡ

ಡಾ ಮಂಜುನಾಥ್‌
ದಯಾನಂದ, ಕೆಎಎಸ್ ಅಧಿಕಾರಿ

ಸಂಜೆ 5.30 ರಿಂದ 6.30
ವಿಜಯ ದಶಮಿಗಾಗಿ ನೃತ್ಯ ಸಮರ್ಪಣೆ
ಸಂಯೋಜಿತ ನೃತ್ಯ: ಶಕ್ತಿ ದೇವತೆ ಚಾಮುಂಡೇಶ್ವರಿ
ನಿರ್ದೇಶನ ಮತ್ತು ಸಂಯೋಜನೆ: ಗುರು ಡಾ.ಕೃಪಾ ಫಡ್ಕೆ
ಅರ್ಪಣೆ: ನೃತ್ಯಗಿರಿ, ಮೈಸೂರು

ಗುರು ಡಾ.ಕೃಪಾ ಫಡ್ಕೆ

ಸಂಜೆ 6.40ರಿಂದ ರಾತ್ರಿ 8
ವಿಜಯ ದಶಮಿ "ರಾಷ್ಟ್ರಕ್ಕೆ ನೆಮ್ಮದಿ ಮತ್ತು ಶಾಂತಿ ತರಲಿ"
ರಾಷ್ಟ್ರದ ಖ್ಯಾತ ಕಲಾವಿದರು ಒಂದಾಗಿ ನವದುರ್ಗೆಯರನ್ನು ಪ್ರಾರ್ಥಿಸುವ "ಜಯದುರ್ಗೆ" ನೃತ್ಯ ರೂಪಕ.
ಕಲ್ಪನೆ ಮತ್ತು ಕೋರಿಯೋಗ್ರಫಿ:ಪ್ರತಿಭಾ ಪ್ರಹ್ಲಾದ್, ಕೇಂದ್ರ ಸಂಗೀತ & ನಾಟಕ ಅಕಾಡೆಮಿ, ನವದೆಹಲಿ, ಪ್ರಶಸ್ತಿ ಪುರಸ್ಕೃತರು
ನಿರ್ಮಾಣ: ಪ್ರಸಿದ್ಧ ಫೌಂಡೇಶನ್
ಭೂಮಿಕೆಯಲ್ಲಿ:ಪದ್ಮಶ್ರೀ ಹಾಗೂ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:
ಭರತ ನಾಟ್ಯಂ: ಪ್ರತಿಭಾ ಪ್ರಹ್ಲಾದ್
ಚಾವ್: ಶಶಿಧರ ಆಚಾರ್ಯ
ಒಡಿಸ್ಸಿ: ರಂಜನಾ ಗೌಹರ್
ಕೂಚುಪುಡಿ: ಜಯರಾಂ ರಾವ್
ಮಣಿಪುರಿ: ಸಿಂಗ್ ಜಿತ್ ಸಿಂಗ್

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:
ಕೂಚುಪುಡಿ: ವಾಣಿಶ್ರೀ
ಮಣಿಪುರಿ: ಚಾವ್ ಮಾಥುರ್
ಕಥಕ್ಕಳಿ: ಸಾಧನಂ ಬಾಲಕೃಷ್ಣ
ಕಥಕ್: ರಾಜೇಂದ್ರ ಗಂಗಾನಿ
ಸತ್ರಿಯ: ಶರೋದಿ ಸೈಕಿಯ

ಪ್ರತಿಭಾ ಪ್ರಹ್ಲಾದ್

*
ಮೋಹಿನಿ ಆಟಂ: ಜಯಪ್ರಭಾ ಮೆನನ್
ಅವಧಿ: 80 ನಿಮಿಷ

ರಾತ್ರಿ 8.10 ರಿಂದ 9.40


ಸಮಾರೋಪ ಸಂಗೀತ:ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ
ತಬಲ: ಭೀಮಾಶಂಕರ್ ಬಿದನೂರು
ನಿರೂಪಣೆ: ನಾಗಣ್ಣ
ಸಂಘಟನೆ: ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT