‘ವಿಆರ್’ ಬೆಂಗಳೂರು ತನ್ನ ನಾಲ್ಕನೇ ಸರಣಿಯ ವಾರ್ಷಿಕ ಕಲಾ ಉತ್ಸವ ‘ವೈಟ್ಫೀಲ್ಡ್ ಆರ್ಟ್ ಕಲೆಕ್ಟಿವ್’ಗೆ (ಡಬ್ಲುಎಸಿ) ಚಾಲನೆ ನೀಡಿದೆ. ಡುಮಾಸ್ ಆರ್ಟ್ ಪ್ರಾಜೆಕ್ಟ್, ಪಂಜಾಬ್ ಆರ್ಟ್ ಇನಿಶಿಯೇಟಿವ್ಸ್ ಮತ್ತು ಮದ್ರಾಸ್ ಆರ್ಟ್ ಗಿಲ್ಡ್ ಸಂಯುಕ್ತ ಆಶ್ರಯದಲ್ಲಿ ದೇಶದಾದ್ಯಂತ ಆಯೋಜಿಸುವ ಇಂಥ ಸಮುದಾಯ ಸಂಪರ್ಕ ಕಾರ್ಯಕ್ರಮಗಳಿಗೆ ಹಲವು ಸಂಸ್ಥೆಗಳು ಬೆಂಬಲ ನೀಡಿವೆ.

ವಿಆರ್ ಆರ್ಟ್ ಕಾರ್ 2019 ಬಿಡುಗಡೆ, ಖ್ಯಾತ ಕಲಾವಿದರಾದ ಎಂ.ಸೇನಾಧಿಪತಿ, ಚೋಳಮಂಡಲ್ ಆರ್ಟಿಸ್ಟ್ ವಿಲೇಜ್ನ ಪಂಕಜ್ರೆಂಜನ್ ಮತ್ತು ಪ್ರಸಿದ್ಧ ಕಲಾವಿದ ಟಿ.ವಿ.ಸಂತೋಷ್ ಸೇರಿದಂತೆ ಮತ್ತಿತರ ಕಲಾವಿದರ ಕಲೆಗಳ ಪ್ರದರ್ಶನ ನಡೆಯಿತು. ಕಲಾ ಉತ್ಸವದ ಕ್ಯುರೇಟರ್ ಸುಮಿ ಗುಪ್ತ, ಟಿ.ವಿ.ಸಂತೋಷ್ ಅವರು ‘ಸಮುದಾಯ ಸಂಪರ್ಕದಲ್ಲಿ ಕಲೆಯ ಪಾತ್ರ’ದ ಕುರಿತು ಉಪನ್ಯಾಸ ನೀಡಿದರು.

ಖ್ಯಾತ ಕಲಾವಿದರಾದ ಬೋಸ್ ಕೃಷ್ಣಮಾಚಾರಿ, ಯೂಸುಫ್ ಅರಕ್ಕಲ್, ಗೋಗಿ ಸರೋಜ್ಪಾಲ್, ಫರ್ಹಾದ್ ಹುಸೇನ್, ವಿಕಾಸ್ಕಾಲ್ರ, ಮುರಳಿಚೀರೋತ್, ಎಸ್.ಜಿ. ವಾಸುದೇವ್, ಎಸ್. ಹರ್ಷವರ್ಧನ ಅವರ ಚಿತ್ರಕಲಾಕೃತಿಗಳು ಮತ್ತು ಎಂ.ಎಫ್.ಹುಸೇನ್ ಹಾಗೂ ಜೋಗನ್ ಚೌಧರಿ ಅವರ ಸಹಿ ಇರುವ ಪ್ರಿಂಟ್ಗಳನ್ನು ಪ್ರದರ್ಶಿಸಲಾಯಿತು.

ಈ ಡಬ್ಲುಎಸಿ ಮಾರ್ಚ್ 21ರವರೆಗೆ ನಡೆಯಲಿದೆ. ಖ್ಯಾತ ಕಲಾವಿದರು ಮತ್ತು ಕಲಾ ಸಂಸ್ಥೆಗಳು ಕ್ಯುರೇಟ್ ಮಾಡಿರುವ ನೂರಕ್ಕೂ ಹೆಚ್ಚು ಇನ್ಸ್ಟಲೇಶನ್ ಮತ್ತು ಫೈನ್ ಆರ್ಟ್ಸ್ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಈ ಬಾರಿ ಚಿತ್ರಕಲಾ ಪರಿಷತ್ತು (ಬೆಂಗಳೂರು), ಚೋಳಮಂಡಲ್ ಆರ್ಟಿಸ್ಟ್ ವಿಲೇಜ್ (ಚೆನ್ನೈ), ಸರ್ಕಾರಿ ಫೈನ್ ಆರ್ಟ್ ಕಾಲೇಜು (ಪಾಂಡಿಚೇರಿ), ಸರ್ಕಾರಿ ಫೈನ್ ಆರ್ಟ್ ಕಾಲೇಜು (ಕುಂಭಕೋಣಂ) ಮತ್ತು ಸರ್ಕಾರಿ ಫೈನ್ ಆರ್ಟ್ ಕಾಲೇಜು (ಚೆನ್ನೈ)ಗಳು ಸಹಯೋಗ ನೀಡುತ್ತಿದೆ.

ತಿಂಗಳ ಅವಧಿಯಲ್ಲಿ ಆರ್ಟ್ ಪಾಪ್ ಅಪ್ಸ್, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಬೆಂಗಳೂರನ್ನು ಕೇಂದ್ರೀಕರಿಸಿ ಆನ್ಲೈನ್ ಫೋಟೋಗ್ರಫಿ ಸ್ಪರ್ಧೆ ಮತ್ತು ಕಲೆಗೆ ಸಂಬಂಧಿಸಿದ ಸಿನೆಮಾ ಪ್ರದರ್ಶನವೂ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.