ರಾಯಚೂರು ನಗರದ ಮಂತ್ರಾಲಯ ರಸ್ತೆಯ ನವೋದಯ ಆಸ್ಪತ್ರೆ ಪಕ್ಕದ ದಾರಿಯನ್ನು ಹಿಡಿದು ಹೋದರೆ ಬೆಟ್ಟದ ಮೇಲೆ ವಿಜ್ಞಾನ ಕೇಂದ್ರ ಸಿಗುತ್ತದೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಈ ವಿಜ್ಞಾನ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಿಜ್ಞಾನ ಕೇಂದ್ರವಿರುವ ಎತ್ತರ ಪ್ರದೇಶವನ್ನು ಗಮನಿಸಿ ಇದಕ್ಕೆ ‘ವಿಜ್ಞಾನ ಬೆಟ್ಟ’ ಎಂದು ನಾಮಕರಣ ಮಾಡಿದರು. ಅಲ್ಲದೆ ಇಲ್ಲಿನ ಆವರಣಕ್ಕೆ ‘ರಾಷ್ಟ್ರಕವಿ ಕುವೆಂಪು ವನ’ ಎಂದೂ ಕರೆಯಲಾಗುತ್ತದೆ.

1999 ರಲ್ಲಿ ಈ ಹೊಸ ಕಟ್ಟಡವು ವೈಜ್ಞಾನಿಕ ಮನೋಭಾವವನ್ನು ಜನರಲ್ಲಿ ಬಿತ್ತಲು ಶ್ರಮಿಸಿದ ಪ್ರೊ. ಎಚ್.ನರಸಿಂಹಯ್ಯ ಅವರಿಂದ ಉದ್ಘಾಟನೆಗೊಂಡಿದೆ. ಹತ್ತು ಎಕರೆಯ ವಿಶಾಲವಾದ ಸ್ಥಳದಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ಫನ್ ಸೈನ್ಸ್ ಗ್ಯಾಲರಿ, ಅನಾಟಮಿ ಗ್ಯಾಲರಿ, ಬೇಸಿಕ್ ಫಿಸಿಕ್ಸ್ ಲ್ಯಾಬ್, ಕಂಪ್ಯೂಟರ್ ಕೊಠಡಿ, ವಿಜ್ಞಾನ ಗ್ರಂಥಾಲಯ, ಸಿ.ವಿ.ರಾಮನ್ ಸಭಾಂಗಣ, ಬಯಲು ಮಂಟಪ, ಗಣಿತ ಪ್ರಯೋಗಾಲಯ ಕಟ್ಟಡ, ಟೆರೆಸ್ ಗಾರ್ಡನ್ ಒಳಗೊಂಡು ವಿಜ್ಞಾನ ಆಸಕ್ತರನ್ನು, ವಿದ್ಯಾರ್ಥಿಗಳನ್ನು, ಅಲ್ಲದೆ ಸಾರ್ವಜನಿಕರನ್ನೂ ತನ್ನತ್ತ ಸೆಳೆಯುತ್ತಿದೆ.

ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಚಯಿಸಲು ಮತ್ತು ನೂತನ ಆವಿಷ್ಕಾರಗಳನ್ನು ತಲುಪಿಸಲು, ಮುಖ್ಯವಾಗಿ ವೈಚಾರಿಕ ಮನೋಭಾವ ಬೆಳೆಸಿ, ಮೌಢ್ಯತೆಯನ್ನು ತೊಲಗಿಸಲು ವಿಜ್ಞಾನ ಕೇಂದ್ರದ ಪಾತ್ರ ಮಹತ್ವವಾಗಿದೆ.

ರಾಯಚೂರು ವಿಜ್ಞಾನ ಕೇಂದ್ರವು ರಾಜ್ಯದ ಮೊದಲನೇ ವಿಜ್ಞಾನ ಕೇಂದ್ರವಾಗಿದೆ. 1997ರಲ್ಲಿ ಸ್ಥಾಪನೆಯಾದ ಈ ಕೇಂದ್ರ ಆರಂಭದಲ್ಲಿ ರಾಯಚೂರಿನ ವಿದ್ಯಾಭಾರತಿ ಪ್ರೌಢಶಾಲೆಯ ಪುಟ್ಟ ಕೊಠಡಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಶರಣಪ್ಪ ಅವರಿಂದ ಉದ್ಘಾಟನೆಯಾಯಿತು. ಈ ಕೇಂದ್ರ ಸ್ಥಾಪಿಸಲು ಅಂದಿನ ಜಿಲ್ಲಾಧಿಕಾರಿ ಅಶೋಕ ದಳವಾಯಿ ಮುತುವರ್ಜಿ ವಹಿಸಿದ್ದರು.

2015 ರಲ್ಲಿ ಮೇಲ್ದರ್ಜೆಗೆ ಏರಿದ ಈ ವಿಜ್ಞಾನ ಕೇಂದ್ರವು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವಾಗಿ ಪರಿವರ್ತನೆಯಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ಸ್ಪಾಕ್ಸ್ ಯೋಜನೆಯಡಿಯಲ್ಲಿ 22.25 ಕೋಟಿ ರೂಪಾಯಿ ಅನುದಾನದಲ್ಲಿ ಸುಸಜ್ಜಿತ ವಿಜ್ಞಾನ ಕೇಂದ್ರದ ಸ್ಥಾಪನೆ ನಿರ್ಮಾಣದ ಹಂತದಲ್ಲಿದೆ.

ಈ ಕೇಂದ್ರವು ವೈಜ್ಞಾನಿಕ ಮನೋಭಾವ ಬೆಳೆಸಲು ಶಾಲಾ ಶಿಕ್ಷಕರಿಗೆ ವಿಜ್ಞಾನ ಚಟುವಟಿಕೆಗಳನ್ನು ಕೈಗೊಳ್ಳಲು ಅವರಿಗೆ ತರಬೇತಿ ನೀಡಿದೆ. ವಿದ್ಯಾರ್ಥಿ ವಿಜ್ಞಾನ ನೇರ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಸ್ಪರ್ಧೆಗಳನ್ನು, ವಿಶೇಷ ಉಪನ್ಯಾಸ, ಕಮ್ಮಟಗಳನ್ನು, ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಆಕಾಶ ವೀಕ್ಷಣೆಯ ಕಾರ್ಯಕ್ರಮ, ಖಗೋಳ ಶಾಸ್ತ್ರದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದೆ.

ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಕಾರ್ಯಾಗಾರಗಳನ್ನು ಸಂಘಟಿಸಿದೆ. ಅಲ್ಲದೆ ರಾಷ್ಟ್ರೀಯ ಬಾಹ್ಯಾಕಾಶ ದಿನ, ಶೂನ್ಯ ನೆರಳು ದಿನ, ಸಿ.ವಿ.ರಾಮನ್ ಜನ್ಮ ದಿನಾಚರಣೆ ಒಳಗೊಂಡಂತೆ ರಾಷ್ಟ್ರಮಟ್ಟದ, ಅಂತರರಾಷ್ಟ್ರೀಯ ಮಟ್ಟದಲ್ಲಿನ ವಿಜ್ಞಾನಕ್ಕೆ ಸಂಬಂಧಿಸಿದ ದಿನಾಚರಣೆಗಳನ್ನು ಆಚರಿಸುತ್ತದೆ. ಇನ್ನು ನೂರಾರು ವಿಜ್ಞಾನದ ಕಾರ್ಯಕ್ರಮಗಳನ್ನು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಕೇಂದ್ರವು ನಿರಂತರವಾಗಿ ಮಾಡುತ್ತಾ ಬಂದಿದೆ.

ವಿದ್ಯಾರ್ಥಿ ಕೇಂದ್ರಿತ ವಿಜ್ಞಾನ ಚಟುವಟಿಕೆಗಳು ನಿರಂತರವಾಗಿ ಜರುಗುತ್ತವೆ. ಶಿಕ್ಷಕರಿಗೆ ವಿವಿಧ ತರಬೇತಿಗಳು ಆಗಾಗ್ಗೆ ಹಮ್ಮಿಕೊಂಡು ತನ್ಮೂಲಕ ವೈಜ್ಞಾನಿಕ ವಿಚಾರಗಳನ್ನು, ವಿಷಯಗಳನ್ನು ಮಕ್ಕಳಿಗೆ, ಸಮುದಾಯಕ್ಕೆ ತಲುಪಿಸುತ್ತಿದ್ದಾರೆ. ಸೂರ್ಯ ಗ್ರಹಣ, ಚಂದ್ರ ಗ್ರಹಣ, ಪ್ರಕೃತಿಯಲ್ಲಿ ಸಂಭವಿಸುವ ಸಹಜ ಪ್ರಕ್ರಿಯೆಗಳ ಘಟಾನಾವಳಿಗಳಂತಹ ಸಂದರ್ಭದಲ್ಲಿ ಅವುಗಳ ಕುರಿತಾದ ಮೂಢನಂಬಿಕೆಗಳನ್ನು ಹೋಗಲಾಡಿಸಲು, ಸತ್ಯ ಸಂದೇಶ ಹರಡಲು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನ ಸಾಮಾನ್ಯರಿಗೂ ವಿಜ್ಞಾನ ಕೇಂದ್ರ ಹತ್ತಿರವಾಗಿದೆ. ವರ್ಷಕ್ಕೆ ಆರು ಸಾವಿರದಿಂದ ಏಳು ಸಾವಿರ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ರಾಯಚೂರು ವಿಜ್ಞಾನ ಕೇಂದ್ರದ ಸ್ಥಾಪನೆಗೆ ಇಲ್ಲಿನ ಜನರಲ್ಲಿ ವೈಜ್ಞಾನಿಕ ಮನೋಭಾವ ಪಸರಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ಮನವರಿಕೆ ಮಾಡಲು ಪ್ರೊ.ಸಿ.ಡಿ.ಪಾಟೀಲ ಅವರ ಪರಿಶ್ರಮವನ್ನು ಸ್ಮರಿಸಲೇಬೇಕು. ಅವರು ಸೈನ್ಸ್ ಎಜುಕೇಷನ್ ಟ್ರಸ್ಟ್ರ್ ಹುಟ್ಟು ಹಾಕಿ ಅದರ ಕಾರ್ಯದರ್ಶಿಯಾಗಿ ಅಪಾರವಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ರಾಯಚೂರು ವಿಜ್ಞಾನ ಕೇಂದ್ರದ ಸ್ಥಾಪನೆಗೆ ಕಾರಣರಾಗಿದ್ದಾರೆ. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಒಳಗೊಂಡಂತೆ ಜನಸಾಮಾನ್ಯರೂ ಸಹ ಈ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಬೇಕು. ಇದರಿಂದ ವೈಜ್ಞಾನಿಕ ಸಂಗತಿಗಳ ಅರಿವು ಮೂಡುತ್ತದೆ. ಮತ್ತು ವಿಜ್ಞಾನದ ನೆರವಿನಿಂದ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.