ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಇಳಿದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರಿಗೆ ಚೆಕ್ ಡ್ಯಾಂ, ನಾಲಾ ಬಂಡ್‌ಗಳು, ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಲಾಯಿತು. ಈಗ ಅವುಗಳಲ್ಲಿ ನೀರು ನಿಂತು ಸಾವಿರಾರು ಎಕರೆ ಹಸಿರು ಹೊದ್ದು ಕಂಗೊಳಿಸುತ್ತಿದೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪರಿಣಾಮ ಆರು ಸಾವಿರ ಹೆಕ್ಟೇರ್ ಜಮೀನು ಬೇಸಿಗೆಯಲ್ಲೂ ಹಸಿರು ಹೊದ್ದು ನಿಲ್ಲಲು ಸಾಧ್ಯವಾಗಿದೆ.