ಸ್ನಾತಕೋತ್ತರ ಪ್ರಾಯೋಗಿಕ ತರಗತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಬಿಸಿಲಿಗೆ ಬಾಡಿ ಬಸವಳಿದು ಎಷ್ಟು ಬೇಗನೆ ರೂಮಿಗೆ ಹೋಗಿ ಸೇರುವೆನೊ ಎಂಬ ಆತುರದಲ್ಲಿ ಹೋಗುತ್ತಿದ್ದಾಗ ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನ ವಿಭಾಗದ ಎದುರಿನ ಮರದ ಕೆಳಗೆ ಕೆಂಪು ಬಣ್ಣದ ಪೆನ್‌ಡ್ರೈವ್ ಕಂಡಿತು.

ಬಿಸಿಲಿನ ಬೇಗೆ ಮರೆಯಾಗಿ ಮೊಗದಲ್ಲಿ ಸಣ್ಣ ನಗುವೊಂದು ಅರಳಿತು. ಗೆಳೆಯ ಚಂದ್ರು ‘ಹೊಡೀತಲ್ಲ ಜಾಕ್‌ಪಾಟ್ ಮಗ, 32 ಜಿಬಿಯ ಪೆನ್‌ಡ್ರೈವ್ ಸಿಕ್ಕಿತ್ತಲ್ಲ’ ಮೊಬೈಲ್‌ಗೆ ಕನೆಕ್ಟ್ ಮಾಡಿ ಯಾರದ್ದಿರಬಹುದು ನೋಡೋಣ ಇರು ಎಂದಾಗ, ಅಲ್ಲಿದ್ದದ್ದು ಸಾಲು-ಸಾಲು ಮಾರ್ಕ್ಸ್ ಕಾರ್ಡುಗಳು, ಕುಟುಂಬದ ಜೊತೆಗಿನ ಫೋಟೊಗಳು ಮತ್ತು ಒಂದು ಪಾಸ್‌ಪೋರ್ಟ್ ಭಾವಚಿತ್ರ. ಹತ್ತು ರೂಪಾಯಿ ಸಿಕ್ಕಿದರೂ ಖುಷಿ ಪಡುತ್ತಿದ್ದ ನನಗೆ, ಯಾಕೋ ಆ ಪೆನ್‌ಡ್ರೈವ್ ಇಟ್ಟುಕೊಳ್ಳಲು ಮನಸ್ಸಾಗಲಿಲ್ಲ. ಅದು ಹುಡುಗಿಯ ಪೆನ್‌ಡ್ರೈವ್ ಆಗಿದ್ದ ಕಾರಣ ವಾಪಸ್ ಕೊಡಬೇಕೆಂದು ಮನಸ್ಸಾಯಿತು. ನಂಬರ್ ಕಲೆಕ್ಟ್ ಮಾಡಿ ಫೋನ್ ಮಾಡಿಯೇ ಬಿಟ್ಟೆ.

‘ಆ ಕಡೆಯಿಂದ ಹಲೋ... ಯಾರು?’ ಎನ್ನುವ ಧ್ವನಿ ಕಿವಿಗಪ್ಪಳಿಸಿ ನಡೆದ ಘಟನೆ ತಿಳಿಸಿದೆ. ‘ಹತ್ತು ಗಂಟೆಗೆ ನಿಮ್ಮ ಡಿಪಾರ್ಟ್‌ಮೆಂಟ್ ಹತ್ತಿರ ನಿಂತಿರುವೆ, ಬಂದು ನಿಮ್ಮ ಪೆನ್‌ಡ್ರೈವ್ ತೆಗೆದುಕೊಂಡು ಹೋಗಿ ಎಂದು ಹೇಳಿ ಪೋನ್ ಕಟ್ ಮಾಡಿದಾಗ, ಇನ್ನು ಸ್ವಲ್ಪ ಹೊತ್ತು ಮಾತನಾಡಬಾರದಿತ್ತೇ’ ಎಂದು ಹೃದಯ ನನ್ನ ಜೊತೆ ಮುನಿಸಿಕೊಂಡಿತ್ತು.

ಮುಂಜಾನೆ ಎದ್ದು ವ್ಯಾಯಾಮ ಮಾಡಿ, ಒಳ್ಳೆ ಟೀಶರ್ಟ್ ಧರಿಸಿ, ಕೈಯಲ್ಲಿ ಪೆನ್‌ಡ್ರೈವ್ ಹಿಡಿದು ಅತ್ತ-ಇತ್ತ ನೋಡುತ್ತ ನಿಂತಿದ್ದೆ. ಸ್ವಲ್ಪ ದೂರದಿಂದ ಕೈಯಲ್ಲಿ ಪುಸ್ತಕ ಹಿಡಿದು, ಹಣೆಗೆ ಸಿಂಧೂರವಿಟ್ಟು, ಲೂಸ್‌ಹೇರ್ ಬಿಟ್ಟುಕೊಂಡು, ಅಪ್ಪಟ ಕನ್ನಡತಿಯಂತೆ ಬಿಳಿ-ಗುಲಾಬಿ ಮಿಶ್ರಿತ ಚೂಡಿದಾರ್ ಧರಿಸಿದ್ದ ಹುಡುಗಿ ಹತ್ತಿರಕ್ಕೆ ಬಂದು, ‘ಕಿರಣ್ ಅಂದ್ರೆ ನೀವೆನಾ’, ಎಂದಾಗ ಎಚ್ಚರ ಗೊಂಡೆ. ಅಲ್ಲಿಯವರೆಗೆ ಅವಳನ್ನೇ ನೋಡುವತ್ತ ಮಗ್ನನಾಗಿಬಿಟ್ಟಿದ್ದೆ. ಹ್ಞಾ, ‘ನಾನೇ ತಕೋಳಿ ನಿಮ್ಮ ಪೆನ್‌ಡ್ರೈವ್’ ಎಂದೆ, ‘ತುಂಬಾ ಥ್ಯಾಂಕ್ಸ್, ಇದನ್ನು ಕಳೆದುಕೊಂಡು ಬಹಳ ನೋವಾಗಿತ್ತು, ಇದರಲ್ಲಿ ತುಂಬ ನೆನಪುಗಳಿವೆ. ಮತ್ತೆ ನನ್ನ ಕೈ ಸೇರಿಸಿದ್ದಕ್ಕೆ ನಿಮಗೆ ಮತ್ತೊಮ್ಮೆ ಥ್ಯಾಕ್ಸ್’ ಎಂದಳು.

ಹೀಗೆ... ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಗೆಳೆತನವಾಯಿತು. ಪ್ರತಿದಿನ ಕಾಲೇಜಿಗೆ ಹೋಗುವಾಗ ನಮ್ಮಿಬ್ಬರ ನಡುವೆ ಒಮ್ಮೆಯಾದರೂ ಪೆನ್‌ಡ್ರೈವ್ ವಿಷಯ ಪ್ರಸ್ತಾಪವಾಗುತ್ತಿತ್ತು.

ಸ್ನೇಹಿತೆಯ ನಿಜವಾದ ಹೆಸರೇ ಮರೆತುಹೋಗಿ ಪೆನ್‌ಡ್ರೈವ್ ಎಂದು ಕರೆದು-ಕರೆದು ಅದು ಅಡ್ಡಹೆಸರಾಗಿ ಹೋಗಿತ್ತು. ಆಕೆಯ ಸ್ನೇಹಿತೆಯರೂ ಆ ಹೆಸರನ್ನೇ ಕರೆಯಲು ಶುರುಮಾಡಿದ್ದರು. ಒಮ್ಮೆ ಟೀಚರ್, ‘ಸಿಸ್ಟಮ್‌ನಲ್ಲಿ ನೋಟ್ಸ್ ಸೇವ್ ಮಾಡಿದ್ದೀನಿ ಪೆನ್‌ಡ್ರೈವ್‌ಗೆ ಹಾಕಿಕೊಂಡು ಜೆರಾಕ್ಸ್ ಮಾಡಿಸಿಕೊಳ್ಳಿ’ ಎಂದಾಗ ಈಡೀ ತರಗತಿ ನಕ್ಕಿದ್ದು, ಅದರಿಂದ ಆ ಹೆಸರು ಟೀಚರ್‌ಗೂ ತಿಳಿದು ಪ್ರಸಿದ್ಧಿಯಾಗಿಬಿಟ್ಟಿದ್ದಳು ಆಕೆ.

ನಾನು ನಿನ್ನಿಂದ ಎಷ್ಟೇ ದೂರವಿದ್ದರೂ ಪೆನ್‌ಡ್ರೈವ್ ಎಂಬ ಶಬ್ದ ಕೇಳಿದರೆ ನನಗೆ ನೀನೆ ನೆನಪಾಗುತ್ತೀಯಾ, ನಿನ್ನ ನಗುಮುಖ ನನ್ನ ಕಣ್ಣಮುಂದೆ ಬರುತ್ತದೆ. ನಮ್ಮ ಕಾಲೇಜಿನ ಸುಂದರ ಸ್ಥಳಗಳಲ್ಲಿ, ನಮ್ಮ ಸ್ನೇಹ ಸರಪಳಿಯೊಳಗೆ ಕಳೆದ ಮಧುರ ನೆನಪುಗಳು ನನ್ನ ನೆನಪಲ್ಲಿ ಇನ್ನು ಹಚ್ಚಹಸಿರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.