‘ಮನೆ’ ಎಂದ ಕೂಡಲೇ ನನಗೆ ನೆನಪಾಗುವುದು ಕುವೆಂಪು ಅವರು ಕುಪ್ಪಳಿಯ ಕವಿಶೈಲದೆದುರು ಬರೆದ ‘ಮನೇ ಮನೇ ಮುದ್ದು ಮನೇ..’ ಕವಿತೆ. ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದೇ ಆಗಿರಲಿ ಅದು ಅವರವರ ಪಾಲಿಗೆ ಅನ್ನ-ಆಶ್ರಯ, ಆಟ-ಪಾಠ, ನಿದ್ರೆ-ನೆಮ್ಮದಿ ಎಲ್ಲವನ್ನೂ ನೀಡುವ ಸ್ಥಳ. ಇತ್ತೀಚೆಗೆ ಸಿದ್ದಾಪುರ ತಾಲ್ಲೂಕಿನ ಹೆಗ್ಗೋಡಮನೆ ಕುಟುಂಬದವರ ಆಹ್ವಾನದ ಮೇರೆಗೆ ‘ಆಸರೆ’ ಮನೆಯ ಶತಮಾನ ಸಂಭ್ರಮಕ್ಕೆ ಹೋದಾಗ ಅದೊಂದು ವಿಶೇಷ ಅನ್ನಿಸಿತು.

1923ರಲ್ಲಿ ಪುಟ್ಟಣ್ಣಯ್ಯ ಗೌಡರ್ ನಿರ್ಮಿಸಿದ ಈ ಮನೆ ಇತ್ತೀಚೆಗಷ್ಟೇ ಶತಮಾನೋತ್ಸವ ಆಚರಿಸಿಕೊಂಡಿತು. ಬ್ರಿಟಿಷ್ ಸರ್ಕಾರದ ಭೂಮಾಲೀಕರದ್ದೇ ಕಾರುಬಾರು. ಆಗರ್ಭ ಶ್ರೀಮಂತಿಕೆ, ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿಯೂ ಈ ಮನೆತನದ ಹಿರಿಯರು ಭೂಮಾಲೀಕರಾಗಿದ್ದರೂ, ದೌರ್ಜನ್ಯ, ದಬ್ಬಾಳಿಕೆ ಮಾಡಿದವರಲ್ಲ. ಹಸಿದವರಿಗೆ ಊಟ ನೀಡಿದ ಅನೇಕ ಮಾತೆಯರು, ಕಷ್ಟವೆಂದು ಮನೆಬಾಗಿಲಿಗೆ ಬಂದವರಿಗೆ ಕರೆದು ಸಹಾಯ ಮಾಡಿದ ಹಿರಿಯ ದಾನಿಗಳು, ನೂರಾರು ಕೂಲಿಕಾರ್ಮಿಕರಿಗೆ, ಗುಡಿ ಕೈಗಾರಿಕೆಯವರಿಗೆ ಆಶ್ರಯ ನೀಡಿದ ಹಿರಿಮನಸ್ಸುಗಳು, ಸುತ್ತ ಹತ್ತೂರು ವ್ಯಾಜ್ಯಗಳನ್ನು ಸಕಾಲಿಕವಾಗಿ ಪರಿಹರಿಸಿ ಸೂಕ್ತ ನ್ಯಾಯ ನೀಡಿದ ಹಿರಿತಲೆಗಳು ಬಾಳಿಬದುಕಿದಂತಹ ಮನೆಯಿದು.

‘ಕರ ನಿರಾಕರಣೆ, ಚಲೇಜಾವ್ ಚಳವಳಿ ಮುಂತಾದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾದ ನೂರಾರು ಭೂಗತ ಸ್ವಾತಂತ್ರ್ಯ ಸೇನಾನಿಗಳಿಗೆ ನಮ್ಮ ಹಿರಿಯರು ಆಶ್ರಯ ನೀಡಿದ್ದರು. ಈ ಮನೆಯಲ್ಲಿ ಎರಡು ಅಂತಸ್ತುಗಳಿದ್ದು, ಹಿಂಬದಿಯ ಅಂತಸ್ತಿಗೂ ಮುಂಭಾಗಕ್ಕೂ ಯಾವುದೇ ಬಾಗಿಲುಗಳಿಲ್ಲ. ಹಿಂದಿನ ಮೇಲಂತಸ್ತಿನಲ್ಲಿ ಭೂಗತ ಹೋರಾಟಗಾರರಿಗೆ ಆಶ್ರಯ ನೀಡುತ್ತಿದ್ದರು. ಸ್ವಾತಂತ್ರ್ಯ ನಂತರ ಗಾಂಧೀಜಿ ಚರಕದ ಕೈಮಗ್ಗ ಸೇರಿದಂತೆ ಅನೇಕ ಗಾಂಧೀ ತತ್ವಗಳನ್ನು ಈ ಮನೆ ಅಳವಡಿಸಿಕೊಂಡಿತು. ಇಂದಿಗೂ ಈ ಮಹಾಮನೆಯ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಹಾಗೂ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಗಳಿವೆ’ ಎನ್ನುತ್ತಾರೆ ಮನೆಯ ಸದಸ್ಯರಲ್ಲಿ ಒಬ್ಬರಾದ ವಕೀಲ ಎಂ.ಎಸ್.ಗೌಡರ್.

ಸ್ವಾತಂತ್ರ್ಯಾನಂತರ ಭೂದಾನ ಚಳವಳಿಯ ನೇತಾರ ವಿನೋಬಾ ಭಾವೆಯವರ ಮಾತಿನಂತೆ ಹಾಗೂ ಕಾಗೋಡು ಹೋರಾಟ ಮತ್ತು ಕೆನರಾ ಜಿಲ್ಲೆಯ ದಿನಕರ ದೇಸಾಯಿಯವರ ರೈತ ಹೋರಾಟಕ್ಕೆ ಸ್ಪಂದಿಸಿ ತಮ್ಮ ಸುಪರ್ದಿಯಲ್ಲಿದ್ದ ಸುಮಾರು ಐದುನೂರು ಎಕರೆಗೂ ಹೆಚ್ಚಿನ ಭೂಮಿಯನ್ನು ಗೇಣಿದಾರರಿಗೆ ನೀಡಲು ಈ ಕುಟುಂಬದವರು ಸಮ್ಮತಿಸಿದ್ದರು. ‘ಉಳುವವನೇ ಭೂಮಿಯ ಒಡೆಯ’ ಕಾನೂನಿಗೆ ತಲೆಬಾಗಿ ಕೆನರಾ ಜಿಲ್ಲೆಯಲ್ಲಿಯೇ ಮೊದಲ ಭಾರಿಗೆ ಉಳುವ ರೈತರಿಗೆ ಅವರವರ ಜಮೀನು ನೀಡಿದ ಹೆಗ್ಗಳಿಕೆ ಈ ಕುಟುಂಬದ್ದು.

ಮಹಾಮನೆಯ ನಿರ್ಮಾಣ

ಸದ್ಯ ಈ ಮನೆಯಲ್ಲಿ ನಾಲ್ಕು ಕುಟುಂಬಗಳಿವೆ. ಯಾವ ಕುಟುಂಬವೂ ಮೂಲಮನೆಯಲ್ಲಿ ಉಳಿದುಕೊಳ್ಳುವುದಿಲ್ಲ. ಬದಲಿಗೆ ಹಿಂಭಾಗದಲ್ಲಿ ಬೇರೆ ಮನೆ ಮಾಡಿಕೊಂಡು ಮೂಲಮನೆಯನ್ನು ಸ್ಮಾರಕದಂತೆ ಉಳಿಸಿಕೊಂಡಿದ್ದಾರೆ. ಪ್ರತಿ ವಾರ ಒಂದು ಕುಟುಂಬ ಈ ಮನೆಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಿಕೊಡುತ್ತದೆ.

‘1923ರಲ್ಲಿ ರಾಯಚೂರಿನಿಂದ ಕಲ್ಲು ಕಟ್ಟಡ ಕುಶಲಕರ್ಮಿಗಳನ್ನು ಕರೆಸಿ ನಿಡಗೋಡಿನ ಕಪ್ಪು ಶಿಲೆಗಳಿಂದ ಸುಭದ್ರವಾದ ಗೋಡೆಗಳನ್ನು ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ ಮರಳು, ಸುಣ್ಣ ಹಾಗೂ ಬೆಲ್ಲದ ಸುರ್ಕಿ ಗಾರೆ ಬಳಕೆ ಮಾಡಿದ್ದಾರೆ. ವಿವಿಧ ಜಾತಿಯ ಹೆಮ್ಮರಗಳಿಂದ ಕರಕುಶಲ ಕಂಬಗಳು, ಜಂತಿಗಳು, ಪಕಾಸು, ತೊಲೆಗಳು, ಬಾಗಿಲುಗಳು, ಕಿಟಕಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆ ದಿನಗಳಲ್ಲಿ ಕಲ್ಲು, ಮರಳು, ಮರಮುಟ್ಟುಗಳನ್ನು ಸಾಗಿಸಲು ನೂರಾರು ಎತ್ತುಗಳನ್ನು, ಕೋಣಗಳನ್ನು ಬಳಸಿದ್ದಾರೆಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಶತಮಾನದ ಹೊಸ್ತಿನಲ್ಲಿ ಮನೆಯನ್ನು ಸುಣ್ಣಬಣ್ಣಗಳಿಂದ ಅಲಂಕರಿಸಿದ್ದೇವೆ. ಒಂದೆರಡು ಸಲ ಸಣ್ಣಪುಟ್ಟ ರಿಪೇರಿ ಕೆಲಸ ಮಾಡಿಸಿದ್ದೇವೆ’ ಎನ್ನುತ್ತಾರೆ ಎಂ.ಎಸ್.ಗೌಡರ್.

ಹೆಗ್ಗೋಡಮನೆ ಕುಟುಂಬದವರು ಉತ್ತರ ಕನ್ನಡದವರಲ್ಲ. ಕೋಲಾರ ಪ್ರಾಂತ್ಯದವರಾಗಿದ್ದು, ಅಲ್ಲಿ ಜಮೀನ್ದಾರು. 1800ರ ಸುಮಾರಿಗೆ ಇಲ್ಲಿಗೆ ಒಕ್ಕಲು ಬಂದವರು. ಅಂದಿನ ಬಾಂಬೆ ಬ್ರಿಟಿಷ್ ಸರ್ಕಾರವು ಈ ಕುಟುಂಬಕ್ಕೆ ಸಿದ್ದಾಪುರದ ಉತ್ತರ ಭಾಗದ ಸುಮಾರು 500 ಎಕರೆ ಭೂಮಾಲಿಕತ್ವ ನೀಡಿ, ಹಿರಿಯರಾದ ಪುಟ್ಟಣ್ಣನವರಿಗೆ ‘ರಾವ್ ಬಹಾದ್ದೂರ್’ ಪದವಿ ನೀಡಿತು.

‘ಅಖಂಡ ಕರ್ನಾಟಕ ರಾಜ್ಯ ಪುನರ್ ವಿಂಗಡಣೆ ವೇಳೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಸ್ವಾತಂತ್ರ್ಯ ಹೋರಾಟಗಾರ ಹಾವೇರಿಯ ಹಳ್ಳಿಕೇರಿ ಗುದ್ಲೆಪ್ಪ, ಕೊಂಡಜ್ಜಿ ಬಸಪ್ಪ ಮುಂತಾದ ನಾಯಕರು 1952-53ರ ಸುಮಾರಿಗೆ ಇವರ ಮನೆಗೆ ಆಗಮಿಸಿ ವಾಸ್ತವ್ಯ ಹೂಡಿ, ಈ ಭಾಗದಲ್ಲಿ ಸಭೆ ನಡೆಸಿದ್ದರು. ಡಾ.ಎಂ.ಸಿ. ಮೋದಿ, ವೈದ್ಯರ ತಂಡದೊಂದಿಗೆ ಇಲ್ಲಿ ವಾಸ್ತವ್ಯ ಮಾಡಿ ಒಂದು ವಾರದ ‘ಕಣ್ಣಿನ ಚಿಕಿತ್ಸಾ ಶಿಬಿರ’ ಹಮ್ಮಿಕೊಂಡಿದ್ದರು. ಹಬ್ಬ ಹರಿದಿನಗಳು, ಸ್ಥಳೀಯ ಭಾಗದ ವಿಶೇಷ ಆಚರಣೆಗಳ ಸಮಯದಲ್ಲಿ ಈ ಮನೆ ಒಂದು ರೀತಿ ದೇವಾಲಯದಂತೆ ಪರಿವರ್ತನೆ ಆಗುತ್ತದೆ. ಕುಟುಂಬದವರ ಜತೆ ಸುತ್ತಲಿನ ಜನ ಇಲ್ಲಿ ಬಂದು ಸಂಭ್ರಮಿಸುತ್ತಾರೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಈ ಮನೆಯ ಮತ್ತೋರ್ವ ಸದಸ್ಯ ಸತೀಶ್ ಗೌಡರ್.

ಸಿದ್ದಾಪುರ–ಶಿರಸಿ ಮಾರ್ಗದಲ್ಲಿರುವ ಈ ಮನೆಗೆ ಸಾರ್ವಜನಿಕರು ವಾರದ ಎಲ್ಲ ದಿನ ಹಗಲಿನಲ್ಲಿ ಭೇಟಿ ನೀಡಲು ಮುಕ್ತ ಆಹ್ವಾನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.