ಕಳೆದ 20 ವರ್ಷಗಳಲ್ಲಿ ಅವರ ಕುರಿತ ಸಾಕ್ಷ್ಯಚಿತ್ರಗಳಿಗಾಗಿ ಮೂರು ಬಾರಿ ಸಂದರ್ಶಿಸಿದ್ದೇನೆ. ಅವರ ಭೇಟಿಯ ಚಿತ್ರಣ ಮನಸ್ಸಿನಲ್ಲಿ ಇನ್ನೂ ಸ್ಫುಟವಾಗಿದೆ. ಅವರದ್ದು ನಿಗೂಢವಾದ ವ್ಯಕ್ತಿತ್ವ. ಜ್ಞಾನಭಂಡಾರ. ಒಬ್ಬ ಮನುಷ್ಯನ ತಲೆಯೊಳಗೆ ಅಷ್ಟೆಲ್ಲಾ ವಿಚಾರಗಳು ಇರಲು ಸಾಧ್ಯವೇ ಎಂದು ಅಚ್ಚರಿಹುಟ್ಟಿಸುವವರು. ಅವರ ವ್ಯಕ್ತಿತ್ವೇ ಅಚ್ಚರಿಹುಟ್ಟಿಸುವಂಥದ್ದು. ಭೈರಪ್ಪನವರು ಬದುಕಿನಲ್ಲಿ, ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟವರು ಎನ್ನುವುದು ಅವರ ಓದುಗರಿಗೆ ಗೊತ್ತು. ಎಲ್ಲರೂ ಕಷ್ಟ ಅನುಭವಿಸಿರುತ್ತಾರೆ. ಆದರೆ ಅವರು ಆ ಕಷ್ಟವನ್ನು ಕ್ರಿಯಾಶೀಲತೆಯಿಂದ ಹೇಗೆ ಬಳಸಿಕೊಂಡರು, ಎಲ್ಲರಿಗೂ ಇದು ಏಕೆ ಸಾಧ್ಯವಿಲ್ಲ?

ನಾನು ಹಾಗೂ ಅವರು ಬಯಲುಸೀಮೆಯಿಂದ ಬಂದವರು. ನನ್ನ ಊರು ದಂಡಿನಶಿವರ. ಅವರ ಊರು ಸಂತೆಶಿವರ. ಇವೆರಡೂ ಊರಿಗೆ ಸುಮಾರು 12 ಕಿ.ಮೀ. ಅಂತರ. ನಿಮ್ಮೂರು ಭೈರಪ್ಪನವರ ಊರಿಗೆ ಹತ್ತಿರವೇ ಎಂದರೆ ಹೆಮ್ಮೆಯಿಂದ ಹೌದು ಎನ್ನುತ್ತಿದ್ದೆ. ಹೈಸ್ಕೂಲ್ ದಿನಗಳಲ್ಲಿ ಮೇಷ್ಟ್ರು ಅವರ ಬಗ್ಗೆ ಹೇಳುತ್ತಾ ನಮ್ಮೂರಿನವರು ಎಂದಾಗ, ಖ್ಯಾತ ಸಾಹಿತಿಯೊಬ್ಬರು ನಮ್ಮೂರಿನ ಹತ್ತಿರದಲ್ಲೇ ಇದ್ದಾರೆ ಎಂದು ಖುಷಿಯಾಗಿತ್ತು. ಹೀಗೆ ಅವರ ಕೃತಿಗಳಿಗೆ ತೆರೆದುಕೊಂಡಿದ್ದೆ. ಅವರ ಕೃತಿಗಳಲ್ಲಿನ ಸಾಲುಗಳು ನಮ್ಮೂರಿನಲ್ಲೇ ನಡೆದಿವೆಯೋ ಎನ್ನುವಷ್ಟು ಆಪ್ತವಾಯಿತು. ಆ ಭಾಷೆ, ಪಾತ್ರಗಳು, ಘಟನೆಗಳು ಎಲ್ಲವೂ ನಮ್ಮ ಸುತ್ತಮುತ್ತಲೇ ಇರುವಂಥ ಭಾವನೆ. ಹೀಗೆ ನಾನೂ ಬರೆಯಬಹುದು ಎನ್ನುವ ಭ್ರಮೆಯಲ್ಲಿ ಬರೆಯಲು ಆರಂಭಿಸಿ ಸೋತ ವ್ಯಕ್ತಿ ನಾನು.

ಅಬ್ಬಾ ಅದೆಷ್ಟು ಯೋಚನಾ ಶಕ್ತಿ ಅವರಿಗೆ. ಒಬ್ಬ ಕವಿ ಆಗಬೇಕೆಂದರೆ ಅವನ ಸುತ್ತ ಬೆಟ್ಟ, ಗುಡ್ಡಗಳು, ಪ್ರಕೃತಿ ಸೌಂದರ್ಯವಿರಬೇಕು, ಹೊಳೆ ಹರಿಯುತ್ತಿರಬೇಕು ಎನ್ನುತ್ತಾರೆ. ಸಂತೆಶಿವರ ಬರಡುಭೂಮಿ. ಅಲ್ಲಿ ಇಂಥ ಕ್ರಿಯಾಶೀಲತೆ ಹೇಗೆ ಹುಟ್ಟಿಕೊಂಡಿತು? ಅದಕ್ಕೇ ಅವರನ್ನು ನಿಗೂಢ ಎಂದೆ.

80ರ ದಶಕದ ಆರಂಭದಲ್ಲಿ ಅವರ ಕೆಲ ಕೃತಿಗಳನ್ನು ಓದಿದ್ದೆ, ರೋಮಾಂಚಿತನಾಗಿದ್ದೆ. 1985ರಲ್ಲಿ ದೂರದರ್ಶನ ಅರ್ಧಗಂಟೆಯ ‘ಪದ್ಮವ್ಯೂಹ’ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿತ್ತು. ಇದರಲ್ಲಿ ಎಸ್.ಎಲ್.ಭೈರಪ್ಪನವರೊಂದಿಗೆ ಸಂವಾದ ಏರ್ಪಡಿಸಿತ್ತು. ಇದಕ್ಕಾಗಿ ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಆಯ್ಕೆಯಾದ ಪ್ರಶ್ನೆಗಳನ್ನು ಕಳುಹಿಸಿದವರಿಗಷ್ಟೇ ಭಾಗವಹಿಸಲು ಅವಕಾಶವಿತ್ತು. ನಾನು 15 ಪೈಸೆಯ ಒಂದು ಕಾರ್ಡ್ನಲ್ಲಿ ಪ್ರಶ್ನೆ ಬರೆದು ಕಳುಹಿಸಿದ್ದೆ. ನನ್ನ ಪ್ರಶ್ನೆ ಆಯ್ಕೆಯಾಗಿತ್ತು. ನಾನು ಇಷ್ಟಪಟ್ಟ, ಅಭಿಮಾನದಿಂದ ಓದಿಕೊಂಡ ವ್ಯಕ್ತಿಯನ್ನು ಭೇಟಿಯಾಗಿದ್ದು ಅದೇ ಮೊದಲು.

ನನ್ನ ‘ಮುನ್ನುಡಿ’ ಚಿತ್ರವನ್ನು ಅವರಿಗೆ ತೋರಿಸಬೇಕು ಎನ್ನುವ ಆಸೆ ಹುಟ್ಟಿದಾಗ ಸಹಾಯ ಮಾಡಿದವರು ಕೃಷ್ಣಮೂರ್ತಿ ಹನೂರು ಅವರನ್ನು ಕೇಳಿದಾಗ, ಅವರು ಕರೆದುಕೊಂಡು ಬಂದರು. ಸಿನಿಮಾ ನೋಡಿ ಆಚೆ ಬಂದ ಸಂದರ್ಭದಲ್ಲಿ ನನ್ನ ಕಣ್ಣನ್ನು ಸುಮಾರು 10 ಸೆಕೆಂಡು ದಿಟ್ಟಿಸಿ ನೋಡಿ ‘ಒಳ್ಳೆಯದಾಗಲಿ’ ಎಂದಿದ್ದರು. 25 ವರ್ಷಗಳ ಹಿಂದೆ ಅವರ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡುವಂತೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕೇಳಿಕೊಂಡಿತು. ಆ ಸಂದರ್ಭದಲ್ಲಿ ನನ್ನ ‘ಮುನ್ನುಡಿ’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎನ್ನುವ ಅನುಮಾನದಲ್ಲೇ ಅವಕಾಶ ಕೋರಿದ್ದೆ. ಒಪ್ಪಿಕೊಂಡ ದಿನ ರಾತ್ರಿ ನಿದ್ದೆಯಿಲ್ಲ. ಅವರ ಇಪ್ಪತ್ತೂ ಕಾದಂಬರಿಗಳನ್ನು ತರಿಸಿಕೊಂಡು ಓದಿದ್ದೆ. ನೂರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಅವರ ಊರಿಗೆ ಅವರೊಂದಿಗೆ ಕಾರಿನಲ್ಲಿ ನಾನು ಡ್ರೈವ್ ಮಾಡುತ್ತಾ ಪಯಣಿಸಿದೆ. ಅವರ ಓಡಾಡಿದ, ಒಡನಾಡಿದ ಓಣಿಗಳು, ಜನರನ್ನು ಭೇಟಿಯಾಗಿ ಮಾತನಾಡಿಸಿದ್ದೆ.

2009 ರಲ್ಲಿ ದೂರದರ್ಶನಕ್ಕಾಗಿ 10 ನಿಮಿಷದ ಸಾಕ್ಷ್ಯಚಿತ್ರ ಮಾಡಿದ್ದೆ. 2018ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಗೆ 57 ನಿಮಿಷದ ಸಾಕ್ಷ್ಯಚಿತ್ರ ಮಾಡಿದ್ದೆ. ಈ ಅವಧಿಯಲ್ಲಿ ಅವರ ನಾಲ್ಕು ಕಾದಂಬರಿಗಳು ಜೊತೆಯಲ್ಲಿ ಎತ್ತರಕ್ಕೇರಿದ್ದರು. ಅವರ ಆಲೋಚನೆಗಳು ಸ್ಫುಟವಾಗುತ್ತಿದ್ದವು. ಮುಕ್ತತೆ ಅವರ ಮಾತು, ಆಲೋಚನೆಗಳಲ್ಲಿತ್ತು. ಯಾವುದಕ್ಕೂ ಗಂಟುಬಿದ್ದವರಲ್ಲ. ನಾನೂ ಬದಲಾಗಬಾರದೇಕೆ ಎಂದು ಪ್ರಶ್ನಿಸುತ್ತಿದ್ದರು.

ಅವರನ್ನು ಹಸ್ತಾಕ್ಷರಕ್ಕಾಗಿ ಯಾರಾದರೂ ಕೇಳಿದರೆ, ನನ್ನ ಕಾದಂಬರಿಗಳನ್ನು ಓದಿದ್ದೀಯೇ ಎಂದು ಪ್ರಶ್ನಿಸುತ್ತಿದ್ದರು. ಗಲಿಬಿಲಿಗೊಂಡರೆ ಓದಿಕೊಂಡು ಬರಲು ತಿಳಿಸುತ್ತಿದ್ದರು. ಒಬ್ಬ ವ್ಯಕ್ತಿಯನ್ನು ಆರಾಧಿಸಬೇಕಾದರೆ ಅದಕ್ಕೊಂದು ಕಾರಣವಿರಬೇಕು ಎನ್ನುವುದು ಇದರ ಹಿಂದಿರುವ ಅರ್ಥ. ಓದಿಕೊಂಡು ಅರ್ಹತೆಗಿಟ್ಟಿಸಿಕೊಳ್ಳಬೇಕು. ಇದನ್ನು ಹತ್ತಿರದಿಂದ ಗಮನಿಸಿದ್ದೇನೆ.

ಅವರ ಕಾದಂಬರಿಗಳನ್ನು ಸಿನಿಮಾ ಮಾಡಬೇಕು ಎನ್ನುವ ಆಸೆಯೂ ಇತ್ತು. ‘ನಾಯಿನೆರಳು’ ಮಾಡಬೇಕು ಎಂದು ಚಿತ್ರಕಥೆ ಮಾಡಿಕೊಂಡು ಶಿವರಾಜ್ಕುಮಾರ್ ಅವರಿಗೆ ಕಥೆ ಹೇಳಿದ್ದೆ. ಅವರೂ ಒಪ್ಪಿದ್ದರು. ಆದರೆ ನಿರ್ಮಾಪಕರು ಸಿಗದೆ ಪ್ರಾಜೆಕ್ಟ್ ಸೆಟ್ಟೇರಲಿಲ್ಲ. ಆ ಸಮಯದಲ್ಲೇ ಗಿರೀಶ ಕಾಸರವಳ್ಳಿಯವರು ಸಿನಿಮಾ ಘೋಷಿಸಿದರು. ಬಳಿಕ ಭೈರಪ್ಪ ಅವರ ‘ನಿರಾಕರಣ’ ಮಾಡಬೇಕು ಎಂಬ ಆಸೆಯಿತ್ತು. 2009ರಲ್ಲಿ ವಿಷ್ಣುವರ್ಧನ್ ಅವರು ಸಾಯುವುದಕ್ಕಿಂತ ಆರು ತಿಂಗಳ ಮೊದಲು ಅವರಿಗೆ ಕಥೆ ಹೇಳಿದ್ದೆ. ‘ವಂಶವೃಕ್ಷ’ದ ಮೂಲಕ ವಿಷ್ಣುವರ್ಧನ್ ಅವರ ಪ್ರವೇಶವಾಗಿತ್ತು. ‘ನಿರಾಕರಣ’ದ ಪಾತ್ರ ಮಾಡುವುದರ ಮೂಲಕ ಇನ್ನಷ್ಟು ಎತ್ತರಕ್ಕೆ ಹೋಗುತ್ತೀರಿ ಎಂದಿದ್ದೆ. ಚಿತ್ರಕಥೆ ಕೇಳಿ ಅವರೂ ಮೆಚ್ಚಿಕೊಂಡಿದ್ದರು.

‘ನಿರಾಕರಣ’ ಕಥೆಯನ್ನು 1970–80ರ ದಶಕದಲ್ಲಿ ರಾಜ್ಕುಮಾರ್ ಅವರು ಮಾಡಬೇಕಿತ್ತು. ಆದರೆ ಆಗ ಭೈರಪ್ಪನವರು ಕಥೆಗಳನ್ನು ಚಲನಚಿತ್ರಕ್ಕೆ ಕೊಡುವುದಿಲ್ಲ ಎಂದಿದ್ದರಂತೆ. ಹಾಗಾಗಿ ಅವರ ಆಸೆ ನೆರವೇರಿರಲಿಲ್ಲ. ಅವರೊಂದಿಗೆ ಆಪ್ತತೆ ಬೆಳೆದ ನಂತರ ನಾನು ‘ನಿರಾಕರಣ’ ಸಿನಿಮಾ ಮಾಡಬಹುದೇ ಎಂದು ಕೇಳಿದ್ದೆ. ಇದಕ್ಕೆ ಒಪ್ಪಿಗೆ ನೀಡಿದ್ದರು. ಈ ಸಂದರ್ಭದಲ್ಲೇ ‘ಅಂಚು’ವನ್ನು ಸಿನಿಮಾ ಮಾಡಿ ಎನ್ನುತ್ತಿದ್ದರು. ಇತ್ತೀಚೆಗೆ ಶಿವರಾಜ್ಕುಮಾರ್ ಅವರು ಕಥೆ ಏನಾದರೂ ಇದೆಯೇ ಎಂದು ಕೇಳಿದ ಸಂದರ್ಭದಲ್ಲಿ ‘ನಿರಾಕರಣ’ ಉಲ್ಲೇಖಿಸಿದ್ದೆ. ಬುಧವಾರವಷ್ಟೇ ‘ನಿರಾಕರಣ’ ಬಗ್ಗೆ ಯೋಚಿಸುತ್ತಿದ್ದೆ. ಇದು ಕಾಕತಾಳೀಯ. ಅವರ ಕಾದಂಬರಿಗಳನ್ನು ಸಿನಿಮಾ ಮಾಡದೇ ಇದ್ದರೂ ಸಾಕ್ಷ್ಯಚಿತ್ರಗಳ ಮೂಲಕ ಬಹಳ ಹತ್ತಿರದಿಂದ ಕಂಡೆ.

ಕೃತಿಗಳು ಸಿನಿಮಾವಾದ ಸಂದರ್ಭದಲ್ಲಿ ಬೇರೆ ಸಾಹಿತಿಗಳು ಸ್ವಲ್ಪ ಗೊಣಗಾಡಿದ್ದುಂಟು. ಆದರೆ ಎರಡೂ ಮಾಧ್ಯಮಗಳ ವ್ಯತ್ಯಾಸವನ್ನು ಭೈರಪ್ಪ ಅವರು ತಿಳಿದುಕೊಂಡಿದ್ದರು. ಸಾಧ್ಯತೆಗಳನ್ನು ದುಡಿಸಿಕೊಂಡಿದ್ದಾರೆ, ಅದು ಭಾಷಾಂತರ ಅಲ್ಲ ಎನ್ನುತ್ತಿದ್ದರು. ಅಕ್ಷರವನ್ನು ದುಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ನಾನು ಅವರಿಂದ ಕಲಿತಿದ್ದೇನೆ. ಅನುಭವ ವರದಿಯಾಗದೆ ಕಲ್ಪನೆಗಳ ಮೂಲಕ ಕಲಾಕೃತಿಯಾಗಬೇಕು ಎನ್ನುವ ಪಾಠ ಅವರಿಂದ ಕಲಿತೆ.

ಅವರ ಜ್ಞಾನಭಂಡಾರ ಅಳಿಸಿ ಹೋಗಬಾರದು ಎನ್ನುವ ಕಾರಣಕ್ಕೆ ಅವರ ಯೋಚನೆಗಳನ್ನು ಸುಮಾರು 25 ಗಂಟೆ ರೆಕಾರ್ಡ್ ಮಾಡಿ ಇರಿಸಿದ್ದೇವೆ. ತತ್ವಶಾಸ್ತ್ರ, ಸಂಗೀತ, ಸಾಹಿತ್ಯ, ಸೃಜನಶೀಲತೆ, ಬದುಕು, ಆಕಾಶಯಾನ ಮುಂತಾದ ವಿಷಯಗಳ ಬಗ್ಗೆ ನಾಡಿನ 17 ಜನ ಪ್ರಜ್ಞಾವಂತರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಇದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅವರ ಮಗ ನನ್ನ ಮೂಲಕ ಈ ಕೆಲಸ ಮಾಡಿಸಿದ್ದರು.

(ನಿರೂಪಣೆ: ಅಭಿಲಾಷ್ ಪಿ.ಎಸ್.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.