ರಾಜಮ್ಮನ ಜೊತೆಗೆ ಮಕ್ಕಳ ಸಂಭ್ರಮ ಚಿತ್ರಗಳು: ಮುರಳಿಕಾಂತ ರಾವ್
ಸಾಮಾಜಿಕ ಮಾಧ್ಯಮಗಳಲ್ಲಿ ಏನೇನೋ ವಿಚಾರಗಳು ಹರಿದಾಡುತ್ತವೆ. ಆದರೆ ಇಂಥವರ ಸಮಾಜ ಸೇವೆ ಮುನ್ನೆಲೆಗೆ ಬರುವುದೇ ಇಲ್ಲ. ಆದರೂ ರಾಜಮ್ಮ ಅವರ ಸೇವೆಯನ್ನು ಮುಖ್ಯಮಂತ್ರಿ ಗುರುತಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಬೇಕು. ಜನರಲ್ಲಿ ಪರಿವರ್ತನೆ ತರಬೇಕು. ಇವರನ್ನು ನೋಡಿಯಾದರೂ ಒಂದಷ್ಟು ಜನ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಆಗ ನಮ್ಮ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತದೆ.