ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

Published : 10 ಜನವರಿ 2026, 23:30 IST
Last Updated : 10 ಜನವರಿ 2026, 23:30 IST
ಫಾಲೋ ಮಾಡಿ
Comments
ಇದೀಗ ಅಂತಿಮ ಪಯಣದ ಪದ್ಧತಿಯಲ್ಲೂ ಕೆಲವು ಗಮನಾರ್ಹ ಬದಲಾವಣೆಗಳು ಆಗಿವೆ. ಇದಕ್ಕೆ ಕಾಲದ ಒತ್ತಡವೂ ಕಾರಣವಾಗಿದೆ. ಜೊತೆಗೆ ಸದಾ ಧಾವಂತದಲ್ಲಿರುವ ಜನರೂ ಹೊಸ ಪದ್ಧತಿಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ಕೇರಳ ರಾಜ್ಯದ ಪಕ್ಕದಲ್ಲೇ ಇರುವ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಅಲ್ಲಿಂದ ಪ್ರಭಾವಿತ ಕೂಡ ಆಗಿವೆ. ಹೀಗಾಗಿ ಶವ ಸಂಸ್ಕಾರದಲ್ಲಿ ಆಗಿರುವ ಪಲ್ಲಟಗಳನ್ನು ಈ ಲೇಖನ ಅನಾವರಣಗೊಳಿಸುತ್ತದೆ.
ವಿರಾಜಪೇಟೆ ತಾಲ್ಲೂಕಿನ ಹೊಸೂರು ಗ್ರಾಮ ಫಂಚಾಯಿತಿಯಲ್ಲಿರುವ ಮನೆ ಮುಂದೆ ಶವ ದಹಿಸುವಂತಹ ಸಂಚಾರಿ ಶವ ದಹಿಸುವ ಯಂತ್ರ

ವಿರಾಜಪೇಟೆ ತಾಲ್ಲೂಕಿನ ಹೊಸೂರು ಗ್ರಾಮ ಫಂಚಾಯಿತಿಯಲ್ಲಿರುವ ಮನೆ ಮುಂದೆ ಶವ ದಹಿಸುವಂತಹ ಸಂಚಾರಿ ಶವ ದಹಿಸುವ ಯಂತ್ರ

ಇದೇ ನೋಡಿ ಸಂಚಾರಿ ಶವ ದಹನ ಯಂತ್ರ

ಇದೇ ನೋಡಿ ಸಂಚಾರಿ ಶವ ದಹನ ಯಂತ್ರ

ಶವ ಸಂಸ್ಕಾರ ಮಾಡುವ ವಿಧಾನದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಭೂಮಿ ಅಷ್ಟೇ ಇದೆ. ಹಾಗಾಗಿ, ಇರುವ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕಿದೆ. ಅದಕ್ಕಾಗಿ ವಿಧಾನಗಳು ಬದಲಾವಣೆಯಾಗುತ್ತಿವೆ.
– ಪೌಲಸ್ ಎಂ.ಕೆ., ಶಿರಾಡಿ ಗ್ರಾಮ ಪಂಚಾಯಿತಿ ಸದಸ್ಯ
ಲಯನ್ಸ್ ಸಂಸ್ಥೆ ವತಿಯಿಂದ ಹೊಸೂರು ಗ್ರಾಮ ಪಂಚಾಯಿತಿಗೆ ನೀಡಿರುವ ಸಂಚಾರಿ ಶವ ದಹನ ಯಂತ್ರ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇದರಿಂದ ವಾಯುಮಾಲಿನ್ಯ ಆಗುವುದಿಲ್ಲ.
– ಧನು ಉತ್ತಯ್ಯ, ಗೋಣಿಕೊಪ್ಪಲು ಲಯನ್ಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ
ರ‍್ಯಾಕ್‌ ಪದ್ಧತಿ ಅಂದ್ರೆ ಇದೇನೇ...

ರ‍್ಯಾಕ್‌ ಪದ್ಧತಿ ಅಂದ್ರೆ ಇದೇನೇ...

ಸಾವು ಕೇವಲ ನೋವಿನ ವಿಚಾರವಲ್ಲ, ಬಡವರಿಗೆ, ಮಧ್ಯಮ ವರ್ಗದವರಿಗೆ ಹೊರೆಯೂ ಆಗಿದೆ. ಹಾಗಾಗಿ, ಸಂಚಾರಿ ಶವ ದಹನ ಯಂತ್ರ ಖರೀದಿಸಲು ಇಚ್ಛಿಸಿದ್ದೇವೆ. ಅಂತ್ಯ ಸಂಸ್ಕಾರದ ಹೊರೆಯನ್ನು ತಗ್ಗಿಸುವುದಕ್ಕೆ ಎಲ್ಲರೂ ಕೈಜೋಡಿಸಬೇಕು.
– ವಿನೂಪ್‌ ಕುಮಾರ್, ವಿರಾಜಪೇಟೆ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ
ಕೊಡಗಿನಲ್ಲಿ ಅಂದಾಜು ಸುಮಾರು 300ಕ್ಕೂ ಅಧಿಕ ಶವಗಳನ್ನು ಸಂಚಾರಿ ಶವ ದಹನ ಯಂತ್ರದಲ್ಲಿ ದಹಿಸಲಾಗಿದೆ. ಇದು ಪರಿಸರಸ್ನೇಹಿ ಹಾಗೂ ಹೆಚ್ಚು ಶ್ರಮವಿಲ್ಲದ ವಿಧಾನ. ಮೃತರ ಕುಟುಂಬಸ್ಥರು ನಿಗದಿಪಡಿಸಿದ ಜಾಗದಲ್ಲಿ ಸಂಸ್ಕಾರ ಮಾಡಲಾಗುತ್ತದೆ. ಶವ ದಹಿಸಲು ಒಂದೂವರೆಯಿಂದ ಎರಡು ಗಂಟೆಗಳ ಬೇಕಾಗುತ್ತದೆ. ಕೊಯಮತ್ತೂರಿನಲ್ಲಿ ಈ ಬಗೆಯ ಯಂತ್ರಗಳು ಸಿಗುತ್ತವೆ.
– ಶಾಂತಕುಮಾರ್, ‘ಐವರ್‌ ಮಡಂ’ (ಸಂಚಾರಿ ಶವದಹಿಸುವ ಸಂಸ್ಥೆ) ಪ್ರತಿನಿಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT