ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.

ಸ್ವಾತಂತ್ಯ್ರ ಹೋರಾಟ, ಅಹಿಂಸಾವಾದ, ಸಹಬಾಳ್ವೆ, ಸಮಾನತೆಯ ಆಶಯಗಳ ಬಗ್ಗೆ ಬದುಕಿನುದ್ದಕ್ಕೂ ಮಾತನಾಡಿ, ಜಗತ್ತಿಗೆ ಮಾದರಿಯನ್ನು ಬಿಟ್ಟು ಹೋದ ಗಾಂಧೀಜಿಯ ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ಒಡೆಯುವ ಯತ್ನ ನಡೆಯುತ್ತಿರುವಾಗ, ಈ ನಾಟಕ ಗಾಂಧಿ ತತ್ವ ಮತ್ತು ಚಿಂತನೆಗಳನ್ನು ನಮ್ಮೊಳಗೆ ಪ್ರತಿನಿಧ್ವನಿಸುವಂತೆ ಮಾಡಿತು.

ಗಾಂಧೀಜಿಯ ಬದುಕು-ಹೋರಾಟದಿಂದ ಪ್ರಭಾವಿತರಾದ ಅಜ್ಜ ಮತ್ತು ಆತನ ಕುಟುಂಬ, ನೆರೆ, ಅವರ ಆಗಮನದ ನಿರೀಕ್ಷೆಯಲ್ಲಿರುತ್ತದೆ. ದಂಡಿ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ನೌಕಾಲಿಯ ಸಂದರ್ಭಗಳನ್ನು ಪ್ರಸ್ತಾಪಿಸುತ್ತಾ ದೂರದಲ್ಲೆಲ್ಲೋ ಹೋರಾಡುವ ಗಾಂಧಿ ಪ್ರಭಾವದಿಂದ ಸಣ್ಣ ಹಳ್ಳಿಯ ಅಜ್ಜನೊಬ್ಬ ಅವರ ಮಾರ್ಗದಲ್ಲಿ ನಡೆಯುತ್ತಾ, ಹೋರಾಟ ಮತ್ತು ಚಿಂತನೆಗಳನ್ನು ಪಸರಿಸುವುದನ್ನು ನಾಟಕ ಕಟ್ಟಿಕೊಡುತ್ತದೆ.

ಇಂದು ದೇಶದಲ್ಲಿ ಚರ್ಚೆಯಾಗುತ್ತಿರುವ ಹಲವು ಸೂಕ್ಷ್ಮ ವಿಷಯಗಳನ್ನು ನಾಟಕದ ಉದ್ದಕ್ಕೂ ನಾಟಕಕಾರರು ತಂದಿದ್ದು, ಗಾಂಧಿ ಸಮಕಾಲೀನ ಮಹತ್ವವನ್ನು ಮತ್ತೆ ಚಿಂತಿಸುವಂತೆ ಮಾಡುತ್ತದೆ. ನಾವು ಇಂದು ಮನೆಯ ಸಾಮಾನ್ಯ ಪದಾರ್ಥಗಳ ಮೇಲೂ ಜಿಎಸ್ಟಿ ಹೇರಿದ್ದನ್ನು ಚರ್ಚಿಸುತ್ತಿದ್ದೇವೆ. ಅಂದು ಗಾಂಧೀಜಿ ಬ್ರಿಟಿಷರು ಉಪ್ಪಿನ ಮೇಲೆ ಹೇರಿದ ಕರದ ವಿರುದ್ಧ ಹೋರಾಡಿದ್ದರು. ದೇಶ ಸ್ವತಂತ್ಯ್ರಗೊಂಡರೂ ಸಂಭ್ರಮದಲ್ಲಿ ಪಾಲ್ಗೊಳ್ಳದೆ ಬಾಪು ನೌಕಾಲಿಯ ಕೋಮು ಗಲಭೆಯನ್ನು ತಣ್ಣಗೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಇವತ್ತು ದೇಶದ ಮೂಲೆ ಮೂಲೆಗಳಲ್ಲಿ ಧರ್ಮ-ದ್ವೇಷ ಹೊತ್ತಿ ಉರಿಯುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಹೀಗಾಗಿ ಗಾಂಧೀಜಿಯ ಶಕ್ತಿಯೊಂದರ ಕೊರತೆಯನ್ನು ನಾಟಕ ಎತ್ತಿ ಹಿಡಿಯುತ್ತದೆ. ಕ್ವಿಟ್ ಇಂಡಿಯಾ ಚಳವಳಿಯು ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿದ್ದ ರಹೀಮನ ವಿರುದ್ಧ ಸುಳ್ಳು ಪ್ರಕರಣವೊಂದರಲ್ಲಿ ಜೈಲಿಗೆ ಹಾಕಿದ ನಾಟಕದ ದೃಶ್ಯವೊಂದು ಇಂದು ಉಮರ್ ಖಾಲಿದ್ ಸೇರಿದಂತೆ ಹತ್ತಾರು ಪ್ರಕರಣವೇ ಇಲ್ಲದೇ ಜೈಲಿನಲ್ಲಿ ಕೊಳೆತು ದಿನ ಕಳೆಯುತ್ತಿರುವ ಸಂದರ್ಭವನ್ನು ನೆನಪಿಸಿತು.

ಗಾಂಧಿ ಬರುತ್ತಾರೆ, ಅವರಿಗೆ ಉಡುಗೊರೆ ಕೊಡಬೇಕೆಂಬ ಸಂಭ್ರಮದಲ್ಲೇ ಹೋರಾಟದಲ್ಲಿ ತೊಡಗಿಕೊಳ್ಳುವ, ಸ್ಥಳೀಯವಾಗಿ ಸದಾ ನಿಗಾ ಇಡುವ ಶಾನುಭೋಗ, ಅವಕಾಶಗಳ ದುರುಪಯೋಗ ಮಾಡಿಕೊಳ್ಳುವ ಶೆಟ್ಟಿಯಂತಹ ಸ್ವಾರ್ಥಿಗಳ ವಿರುದ್ಧ ಪ್ರತಿರೋಧ ಒಡ್ಡುವ ಈ ಪಾತ್ರಗಳನ್ನು ತಮ್ಮೊಂದಿಗೆ ಇರುವ ಅಜ್ಜನಲ್ಲೇ ಗಾಂಧಿಯನ್ನು ಕಾಣುತ್ತಾ, ಜಾತೀಯತೆಯನ್ನು ಮೀರುವ, ಧರ್ಮ ಭೇದವನ್ನು ಮೀರುವ ಉದಾತ್ತತೆಯನ್ನು ತೋರುತ್ತಾರೆ. ಮೂಕಮ್ಮ, ರಮಾ, ಸುಶೀಲ ಪಾತ್ರಗಳು ಕಮಲಾದೇವಿ ಚಟ್ಟೋಪಾಧ್ಯಾಯರನ್ನು ನೆನೆಯುವ ಮೂಲಕ, ಸ್ವಾತಂತ್ಯ್ರ ಹೋರಾಟದಲ್ಲಿ ಸ್ತ್ರೀಯರ ಪಾತ್ರವನ್ನು ನೆನಪಿಸುತ್ತವೆ. ಮೂಕಮ್ಮ, ರಮಾ ನಾಟಕದ ಸಶಕ್ತ ಪಾತ್ರಗಳು. ಮಹಿಳೆಯನ್ನು ಚೌಕಟ್ಟುಗಳಲ್ಲಿ ಬಂಧಿಸುವ ಹೇಳಿಕೆಗಳು ಕೇಳಿ ಬರುತ್ತಿರುವ ಈ ಕಾಲದಲ್ಲಿ ಗಾಂಧಿ ಪ್ರಭಾವ, ಮಹಿಳೆಯರಿಗೆ ನೀಡಿದ ಧೈರ್ಯ ಮತ್ತು ಸ್ವಾತಂತ್ಯ್ರಗಳನ್ನು ನಾಟಕ ಕನ್ನಡಿ ಹಿಡಿದಂತೆ ತೋರಿಸುತ್ತದೆ.

ಗಾಂಧಿಯ ಹತ್ಯೆಯ ಸುದ್ದಿಯ ಆಘಾತದಿಂದ, ನಮ್ಮೊಳಗೆ ಗಾಂಧಿಯಂತಿದ್ದ ಅಜ್ಜನೂ ಸಾವನ್ನಪ್ಪುವ ದೃಶ್ಯ ಒಂದು ಕ್ಷಣ ಮನಕಲಕಿ ಬಿಡುತ್ತದೆ. ಗಾಂಧೀ ಚಿಂತನೆಯ ಮೇಲೆ ಈಗ ನಡೆಯುತ್ತಿರುವ ದಾಳಿ, ನಮ್ಮೊಳಗೂ ಅಂತಹ ಆಘಾತ ಮತ್ತು ಅಧೀರತೆ ಹುಟ್ಟಿಸಿದೆ ಎಂಬ ಆತಂಕವನ್ನು ಈ ದೃಶ್ಯ ನಮ್ಮೊಳಗೆ ದಾಟಿಸಿಬಿಡುತ್ತದೆ.

ಸರಳ ರಂಗ ಸಜ್ಜಿಕೆಯಲ್ಲಿ ಅನಾವರಣಗೊಂಡ ಈ ನಾಟಕದಲ್ಲಿ ಅಜ್ಜನ ಪಾತ್ರದ ಸೈಯದ್ ಅಲಿ, ಮೂಕಮ್ಮ ಪಾತ್ರದ ಪೂಜಾ, ಗುಂಡನ ಪಾತ್ರದ ಭೀಮೇಶ, ರಹೀಮ ಪಾತ್ರದ ಬಸವರಾಜ ಹುಲ್ಲಳ್ಳಿ ನ್ಯಾಯ ಒದಗಿಸುವಂತೆ ನಟಿಸಿದರು. ರಾಘವ ಕಮ್ಮಾರರ ಹಾಡುಗಳು ನೆನಪಲ್ಲಿ ಉಳಿಯುತ್ತವೆ. ನಾಟಕದುದ್ದಕ್ಕೂ ಬಳಕೆಯಾದ ಕಬೀರ್ದಾಸ್, ಜ್ಯೋತಿ ಝಾ, ಪುತಿನ, ಗುಲ್ಜಾರ್, ಸುರಭಿ ರೇಣುಕಾಂಬೆ, ಬಸವಣ್ಣನ ವಚನ ಮತ್ತು ಮಿಕೆಲ್ ನೋಯ್ಮಾ ಅವರ ಪದ್ಯದ ತುಣುಕುಗಳು ನಾಟಕದ ಅನುಭವವನ್ನು ಹಿಗ್ಗಿಸಿದವು. ಶಿವಮೊಗ್ಗ ರಂಗಾಯಣದ ಪ್ರಯೋಗವನ್ನು ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.