ಕ್ಯಾಂಡಲ್ ಎಂದ ಕೂಡಲೇ ನೆನಪಾಗುವುದು ರಾತ್ರಿ ವಿದ್ಯುತ್ ಸರಬರಾಜು ನಿಂತಾಗ ಕತ್ತಲೆ ಓಡಿಸಲು ಬಳಸುವ ಸಾಧನ ಎಂದು. ಆದರೆ ಇಂದು ಕ್ಯಾಂಡಲ್ ಕೇವಲ ಬೆಳಕು ನೀಡುವ ಸಾಧನವಾಗಿ ಉಳಿದಿಲ್ಲ. ಒಳಾಂಗಣ ವಿನ್ಯಾಸದ ಆಕರ್ಷಣೆಯ ಭಾಗವಾಗಿ ಬಳಕೆಯಾಗುತ್ತಿದೆ. ರಾತ್ರಿ ಝಗಮಗಿಸುವ ವಿದ್ಯುತ್ ದೀಪಗಳ ಬದಲಾಗಿ ಮನಸ್ಸಿಗೆ ಮುದ ನೀಡುವ, ಕಣ್ಣಿಗೆ ತಂಪು ನೀಡುವ ಆಕರ್ಷಕ ಬೆಳಕಿನ ರೂಪವಾಗಿ ಬಳಕೆಯಾಗುತ್ತಿದೆ. ಇತ್ತೀಚಿಗೆ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಸಣ್ಣ ನಗರಗಳಲ್ಲೂ ‘ಕ್ಯಾಂಡಲ್ ಡಿನ್ನರ್ ಪಾರ್ಟಿ’ಗಳು ನಡೆಯುತ್ತಿವೆ. ಅಲ್ಲದೇ ‘ಸ್ಪಾ’ಗಳಲ್ಲಿ, ಮಾಲ್ಗಳಲ್ಲಿ, ಹೋಟೆಲ್ಗಳಲ್ಲಿ, ಮನೆಯ ಒಳಾಂಗಣ ಅಲಂಕಾರದಲ್ಲಿ ವೈವಿಧ್ಯಮಯ ಬಣ್ಣ ಮತ್ತು ವಿನ್ಯಾಸದ ಕ್ಯಾಂಡಲ್ಗಳು ಬಳಕೆಯಾಗುತ್ತಿವೆ. ಹಾಗಾಗಿ ಟ್ರೆಂಡಿ ಕ್ಯಾಂಡಲ್ಗಳ ತಯಾರಿಕೆ ಉದ್ಯಮವಾಗಿ ಬೆಳೆದು ನಿಂತಿದೆ. ಇಂತಹ ವೈವಿಧ್ಯಮಯ ಕ್ಯಾಂಡಲ್ಗಳನ್ನು ತಯಾರಿಸಿ, ನಾಡಿನಾದ್ಯಂತ ಮಾತ್ರವಲ್ಲದೇ ಜಗತ್ತಿನ ಬೇರೆ ಬೇರೆ ದೇಶಗಳಿಗೂ ರಫ್ತು ಮಾಡುವ ಮೂಲಕ ತಮ್ಮ ಕನಸಿಗೆ ಆಧುನಿಕತೆಯ ರೂಪ ನೀಡಿದವರು ಮೈಸೂರಿನ ನವ್ಯೋದ್ಯಮಿ ಶ್ರೀವಿದ್ಯಾ ಕಾಮತ್.

ಟ್ರೆಂಡಿ ಕ್ಯಾಂಡಲ್ಗಳನ್ನು ಮನೆ-ಮನಗಳಿಗೆ ತಲುಪಿಸಿದ ಶ್ರೀವಿದ್ಯಾ ಈ ಉದ್ಯಮದಿಂದ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರು ತಯಾರಿಸುವ ಕ್ಯಾಂಡಲ್ಗಳು ಮನಮೋಹಕ ಆಕಾರ ಮತ್ತು ಬಣ್ಣ ಹೊಂದಿವೆ. ನೋಡುಗರನ್ನು ಆಕರ್ಷಿಸುತ್ತವೆ. ಜೊತೆಗೆ ಕ್ಯಾಂಡಲ್ ಉರಿದಾಗ ಪರಿಮಳ ಹೊರಸೂಸುತ್ತದೆ.

ಅನಿರೀಕ್ಷಿತ ಘಟನೆ ಉದ್ಯಮಕ್ಕೆ ನಾಂದಿ

ಶ್ರೀವಿದ್ಯಾ, ವಿವಿಧ ಕಂಪನಿಗಳಿಗೆ ಹಾಗೂ ಕಚೇರಿಗಳಿಗೆ ಉದ್ಯೋಗಿಗಳನ್ನು ಒದಗಿಸುವ ಹಾಗೂ ಅವರಿಗೆ ತರಬೇತಿ ನೀಡುವ ಅಂದರೆ ಮಾನವ ಸಂಪನ್ಮೂಲ ಒದಗಿಸುವ ಕೆಲಸ ಮಾಡುತ್ತಾರೆ. ತರಬೇತಿ ನೀಡುವಾಗ ಉದ್ಯೋಗಿಗಳಿಗೆ ಏನಾದರೊಂದು ವಿಶೇಷ ಉಡುಗೊರೆ ನೀಡುವುದು ಅವರ ಹವ್ಯಾಸ. ಹೀಗೆ ಕೆಲವು ವರ್ಷಗಳ ಹಿಂದೆ ತರಬೇತಿ ಆಯೋಜಿಸಿದಾಗ ಅವರಿಗೆ ದೀಪಗಳನ್ನು ಉಡುಗೊರೆ ನೀಡಲು ಬಯಸಿದರು. ಅದಕ್ಕಾಗಿ ಮಾರುಕಟ್ಟೆಗಳಲ್ಲಿ ದೊರೆಯುವ ದೀಪಗಳ ಬದಲಾಗಿ ತಾವೇ ಮೇಣದದೀಪಗಳನ್ನು ತಯಾರಿಸಿ ನೀಡಿದರು. ಮೇಣದದೀಪಗಳನ್ನು ಪಡೆದವರಿಗೆ ಅದು ಆಕರ್ಷಕವಾಗಿ ಕಂಡಿತು. ಅವುಗಳನ್ನು ನೋಡಿದ ಅಕ್ಕಪಕ್ಕದವರು ತಮಗೂ ಬೇಕು ಎಂದು ಬೇಡಿಕೆ ಇಟ್ಟರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉತ್ಪಾದನೆಯೂ ಜಾಸ್ತಿ ಆಯಿತು. ಕೇವಲ ಮೂರು ವಾರಗಳಲ್ಲಿ ಸುಮಾರು 2,500 ರಿಂದ 3,000 ಕ್ಯಾಂಡಲ್ಗಳನ್ನು ತಯಾರಿಸಿ ಮಾರಾಟ ಮಾಡಿದರು. ಹೀಗೆ ಅನಿರೀಕ್ಷಿತವಾಗಿ ತಯಾರಿಸಿದ ದೀಪಗಳೇ ಮುಂದಿನ ಉದ್ಯಮಕ್ಕೆ ನಾಂದಿಯಾದವು.

ಶ್ರೀವಿದ್ಯಾ ಚಿಕ್ಕವರಿದ್ದಾಗ ಭರತನಾಟ್ಯ ಹಾಗೂ ನೃತ್ಯ ಪ್ರದರ್ಶನ ನೀಡುವಾಗಿನ ವಿಶೇಷ ಆಕರ್ಷಣೆಗಾಗಿ ತಾಯಿ ಮೇಣದದೀಪಗಳನ್ನು ಮಾಡಿಕೊಡುತ್ತಿದ್ದರು. ಅದರಿಂದ ಪ್ರೇರಿತರಾದ ಇವರು, ಮೇಣದದೀಪಗಳನ್ನು ತಯಾರಿಸಲು ಮುಂದಾದರು. ಬಯೋಟೆಕ್ನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ, ಸುಗಂಧ ಮತ್ತು ಪರಿಮಳಗಳ ಬಗ್ಗೆ ತಿಳಿವಳಿಕೆ ಇದೆ. ಹೀಗಾಗಿ ಬೇರೆ ಬೇರೆ ಸುಗಂಧಭರಿತ ಕ್ಯಾಂಡಲ್ಗಳನ್ನು ತಯಾರಿಸಿದರು.

ವೈವಿಧ್ಯಮಯ ವಿನ್ಯಾಸ

ಶ್ರೀವಿದ್ಯಾ ಸುಮಾರು 5000ಕ್ಕೂ ಹೆಚ್ಚು ವಿನ್ಯಾಸದ ಕ್ಯಾಂಡಲ್ಗಳನ್ನು ತಯಾರಿಸಿದ್ದಾರೆ. ಚೌಕ, ಆಯತ, ವೃತ್ತ, ತ್ರಿಭುಜ, ಪಂಚಭುಜ, ಷಡ್ಭುಜ, ಅಷ್ಟಭುಜ–ಹೀಗೆ ವಿವಿಧ ರೇಖಾಕೋನೀಯ ವಿನ್ಯಾಸದ ಜೊತೆಗೆ ಗೊಂಬೆಯಾಕಾರ, ಮಾನವಾಕೃತಿ, ವಿವಿಧ ಪ್ರಾಣಿಗಳ ಆಕೃತಿಗಳ ಕ್ಯಾಂಡಲ್ಗಳನ್ನು ತಯಾರಿಸಿದ್ದಾರೆ. ಜೊತೆಗೆ ಕೆಲವು ಕ್ಯಾಂಡಲ್ ಗ್ಲಾಸ್ಗಳಲ್ಲಿ ಪುನೀತ್ ರಾಜ್ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಹೀಗೆ ಪ್ರಸಿದ್ಧ ವ್ಯಕ್ತಿಗಳ ಫೋಟೊ ಹಾಕಿದ್ದು, ಕ್ಯಾಂಡಲ್ ಉರಿಯುತ್ತಿದ್ದಂತೆ ಗ್ಲಾಸ್ನಲ್ಲಿ ಅವರ ಭಾವಚಿತ್ರ ಎದ್ದು ಕಾಣುತ್ತದೆ. ಇದಂತೂ ತುಂಬಾ ಜನರಿಗೆ ಇಷ್ಟವಾಗಿದೆ. ಇವರು ತಯಾರಿಸಿದ ಕ್ಯಾಂಡಲ್ಗಳನ್ನು ನೋಡುತ್ತಿದ್ದರೆ ಎಲ್ಲಾ ಆಕಾರದ, ಎಲ್ಲಾ ವಿನ್ಯಾಸದ ಕ್ಯಾಂಡಲ್ಗಳನ್ನೂ ಕೊಳ್ಳಬೇಕೆಂಬ ಬಯಕೆ ಮೂಡುತ್ತದೆ. ಜೊತೆಗೆ ಅತ್ಯಾಕರ್ಷಕ ನೈಸರ್ಗಿಕ ಬಣ್ಣಗಳ ಕ್ಯಾಂಡಲ್ಗಳು ನೋಡುಗರಿಗೆ ಹಿತ ನೀಡುತ್ತವೆ.

ಇವರು ತಯಾರಿಸಿದ ಕ್ಯಾಂಡಲ್ಗಳು ಸಾಮಾನ್ಯ ಕ್ಯಾಂಡಲ್ಗಳಿಗಿಂತ ಭಿನ್ನವಾಗಿವೆ. ಅವು ವಿಶೇಷವಾದ ಪರಿಮಳ ಹೊಂದಿದ್ದು ಮನಸ್ಸಿಗೆ ಆಹ್ಲಾದ ನೀಡುತ್ತವೆ. ತಲೆನೋವು, ನಿದ್ರಾಹೀನತೆ, ಒತ್ತಡ ನಿವಾರಣೆ, ವಾತಾಯನ ಶುದ್ಧೀಕರಣ, ಸೊಳ್ಳೆ ನಿವಾರಣೆ ಹೀಗೆ ವಿವಿಧ ಉದ್ದೇಶಗಳಿಗಾಗಿ ಬಗೆ ಬಗೆಯ ಸುಗಂಧ ಹಾಗೂ ಪರಿಮಳಯುಕ್ತ ಕ್ಯಾಂಡಲ್ಗಳನ್ನು ತಯಾರಿಸಿದ್ದಾರೆ. ಪರಿಮಳಕ್ಕೆ ನೈಸರ್ಗಿಕ ಸುಗಂಧಗಳನ್ನು ಬಳಸುತ್ತಾರೆ. ಇದರಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ.

ವಿದೇಶಗಳಿಗೂ ರವಾನೆ

ವಿದೇಶಗಳಲ್ಲಿ ಇವರ ಕ್ಯಾಂಡಲ್ಗಳು ಹೆಚ್ಚು ಟ್ರೆಂಡಿಯಾಗಿವೆ. ಥಾಯ್ಲೆಂಡ್, ಮಾರಿಷಸ್, ಬ್ಯಾಂಕಾಕ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೂ ಇವರು ತಯಾರಿಸಿದ ಕ್ಯಾಂಡಲ್ ರವಾನೆಯಾಗಿವೆ. ಶ್ರೀವಿದ್ಯಾ ಅವರು ತಾವು ತಯಾರಿಸಿದ ಕ್ಯಾಂಡಲ್ಗಳನ್ನು ಮಾರಲು ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಹೊಂದಿದ್ದಾರೆ. ನಿತ್ಯವೂ ಆನ್ಲೈನ್ನಲ್ಲಿ ಬರುವ ಬೇಡಿಕೆಯನ್ನು ಪೂರೈಸುತ್ತಾರೆ. ಅದಕ್ಕಾಗಿ ನಾಲ್ಕು ಜನ ಕೆಲಸಗಾರರಿದ್ದಾರೆ. ಅವರು ಬೇಡಿಕೆಗೆ ಅನುಗುಣವಾದ ಕ್ಯಾಂಡಲ್ ತಯಾರಿಸಿ ಕಳಿಸುತ್ತಾರೆ. ಇತ್ತೀಚಿಗೆ ನಗರ ಪ್ರದೇಶದ ಹೋಟೆಲ್ ಮತ್ತು ರೆಸ್ಟೊರೆಂಟ್ಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಶ್ರೀವಿದ್ಯಾ.

ತರಬೇತಿ ಕೇಂದ್ರ

ಆಸಕ್ತ ಮಹಿಳೆಯರಿಗೆ ಕ್ಯಾಂಡಲ್ ತಯಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದಿದ್ದಾರೆ. ಅದರಲ್ಲಿ ನಲವತ್ತಕ್ಕೂ ಹೆಚ್ಚು ಮಹಿಳೆಯರು ಕ್ಯಾಂಡಲ್ ಉದ್ಯಮದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತರಬೇತಿಯಲ್ಲಿ ಕ್ಯಾಂಡಲ್ ತಯಾರಿಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಉದ್ಯಮ ಆಧಾರಿತ ಸಾಲಗಳ ಬಗ್ಗೆ ತಿಳಿಸಿಕೊಡುತ್ತಾರೆ. ಹಾಗಾಗಿ ಮನೆಯಲ್ಲೇ ಕುಳಿತು ಏನಾದರೊಂದು ಉದ್ಯೋಗ ಮಾಡಬೇಕು ಎನ್ನುವ ಮಹಿಳೆಯರಿಗೆ ಇದೊಂದು ಉತ್ತಮ ತರಬೇತಿಯಾಗಿದೆ.

ತರಬೇತಿ ಕೇಂದ್ರ

ಆಸಕ್ತ ಮಹಿಳೆಯರಿಗೆ ಕ್ಯಾಂಡಲ್ ತಯಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದಿದ್ದಾರೆ. ಅದರಲ್ಲಿ ನಲವತ್ತಕ್ಕೂ ಹೆಚ್ಚು ಮಹಿಳೆಯರು ಕ್ಯಾಂಡಲ್ ಉದ್ಯಮದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತರಬೇತಿಯಲ್ಲಿ ಕ್ಯಾಂಡಲ್ ತಯಾರಿಕೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಉದ್ಯಮ ಆಧಾರಿತ ಸಾಲಗಳ ಬಗ್ಗೆ ತಿಳಿಸಿಕೊಡುತ್ತಾರೆ. ಹಾಗಾಗಿ ಮನೆಯಲ್ಲೇ ಕುಳಿತು ಏನಾದರೊಂದು ಉದ್ಯೋಗ ಮಾಡಬೇಕು ಎನ್ನುವ ಮಹಿಳೆಯರಿಗೆ ಇದೊಂದು ಉತ್ತಮ ತರಬೇತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.