ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರಮಣ

Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹೂವಿಗೆ ಹೋಲಿಕೆ ಮಾಡಿ ಬೀಗುತ್ತೀರಿ
ಬಹುಶಃ ಮುಷ್ಟಿ ಮೈಥುನದಲ್ಲೂ ಅಷ್ಟೊಂದು
ಆನಂದವ ಅನುಭವಿಸಿರಲಾರದಷ್ಟು.
ಹೂವಿಗೆ ನಗ್ನ ಉಂಟೆ?
ನಮ್ಮ ಉಡುಪಿನೊಳಗೆ ನಿಮಗೆ ಕೇವಲ ಅಂಗಗಳಷ್ಟೇ ಕಾಣುವುವು.
ನಮ್ಮ ಇಷ್ಟದ ವಸ್ತ್ರ
ನಿಮ್ಮ ಕಣ್ಣೊಳಗೆ ವೀರ್ಯವ ಉಕ್ಕಿಸುತ್ತದೆ.
ನಿಮ್ಮ ದೇವರುಗಳು ನಿಮ್ಮ ನೆತ್ತರಿಗಂಟಿದ ಧರ್ಮಗಳು
ನಮ್ಮ ದನಿಯ ಕೇಳಿಸಿಕೊಳ್ಳದೆ ಕಿವುಡಾಗಿಹವು
ಪವಿತ್ರಸ್ಥಳಗಳಿಗೆ ಬೆಂಕಿಹಚ್ಚಿ ವಿಲಕ್ಷಣ ಸುಖ ಅನುಭವಿಸುತ್ತ
ನಿತ್ಯ ಬದುಕ ಕದಡಿ.
ನಮ್ಮ ಹಕ್ಕುಗಳ ಸಂವಿಧಾನದ ಫ್ರೇಮಿನಲಿ ಭದ್ರವಾಗಿ ಇಟ್ಟು
ರಾಷ್ಟ್ರಗೀತೆ ಹಾಡುವ ಸಭ್ಯರು ನೀವು.
ನಮ್ಮ ದೇಹ ನಮ್ಮ ಹಕ್ಕಲ್ಲವೆ?
ನಿಮ್ಮ ಚಟಗಳ ತೀಟೆ ತೀರಿಸಿಕೊಳ್ಳಲು ತಾಣವಾಗಿಸಿಕೊಂಡು
ನಮ್ಮ ದೇಹದ ಮೇಲೆ ದಾಳಿಮಾಡುವಿರಿ.
ನೀವೂ ಸಹ ತಾಯ ಮೊಲೆಹಾಲ ಕುಡಿದಿರುವಿರಿ
ನೆನಪಿದೆಯಾ?
ನಮ್ಮ ದೇಹವ ದಾಳಿಮಾಡಿ ಚಿಂದಿಯಾಗಿಸಿರುವ
ನಿಮ್ಮನ್ನು ಕಂಡು ಪ್ರಾಣಿಗಳು ನಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT