ಸ್ವಾಹಿಲಿ ಎಂದರೇನು?
ಆಫ್ರಿಕಾದ ಪೂರ್ವ ಕರಾವಳಿಯಲ್ಲಿನ ಬುಡಕಟ್ಟು ಜನರು ವ್ಯಾಪಾರ ಹಾಗೂ ಸಂವಹನಕ್ಕೆ ಬಳಸುವ ಭಾಷೆ ಸ್ವಾಹಿಲಿ.ಸೊಮಾಲಿಯಾದಿಂದ ಮೊಜಾಂಬಿಕ್ವರೆಗೆ ಈ ಭಾಷೆ ಬಳಕೆಯಲ್ಲಿದೆ. ಕೀನ್ಯಾ ಹಾಗೂ ತಾಂಜಾನಿಯಾದ ರಾಷ್ಟ್ರಭಾಷೆ ಇದು.

ಜೈರ್ ಹಾಗೂ ಉಗಾಂಡಾದ ಕೆಲವು ಭಾಗಗಳಲ್ಲೂ ಈ ಭಾಷೆಯನ್ನು ಮಾತನಾಡುವವರಿದ್ದಾರೆ. ಈ ಭಾಷೆಯಲ್ಲಿ ಹಲವು ಬಗೆಯ ಉಚ್ಚಾರಣೆ ಉಂಟು.

ಈ ಭಾಷೆ ಎಷ್ಟು ಹಳೆಯದ್ದು?
ಕೆಲವರ ಪ್ರಕಾರ ಇದು ಪ್ರಾಚೀನ ಆಫ್ರಿಕಾದ ಭಾಷೆ. ಇನ್ನು ಕೆಲವರು ಹೇಳುವಂತೆ, ಖಂಡದ ಒಳಭಾಗದಲ್ಲಿದ್ದ ಬಂಟು ಸಮುದಾಯದವರು ಇಲ್ಲಿಗೆ ವಲಸೆ ಬಂದು ವ್ಯವಹರಿಸಲು ಆರಂಭಿಸಿದಾಗಿನಿಂದ ಈ ಭಾಷೆಯನ್ನು ಹಬ್ಬಿಸಿದರು.

ಅರಬ್ ಹಾಗೂ ಪರ್ಷಿಯಾ ವ್ಯಾಪಾರಿಗಳ ಜೊತೆ ಆರನೇ ಶತಮಾನದ ನಂತರ ವ್ಯವಹರಿಸುವಾಗ ಈ ಭಾಷೆ ವ್ಯಾಪಕವಾಗಿ ಬಳಕೆಗೆ ಬಂದಿತಂತೆ. ಅರೇಬಿಕ್ ಮೂಲದ ಸುಳುಹುಗಳು ಭಾಷೆಯಲ್ಲಿದ್ದರೂ ಅದರ ಮೂಲ ಆಫ್ರಿಕದ್ದೇ ಆಗಿದೆ.

ಯಾವುದಾದರೂ ನಿರ್ದಿಷ್ಟ ಸಮುದಾಯದ ಜೊತೆಗೆ ಈ ಭಾಷೆ ಗುರುತಿಸಿಕೊಂಡಿದೆಯೇ?
ಬಂಟು ಹಾಗೂ ಅರಬ್ ವಂಶಸ್ಥರ ತಾಯಿಭಾಷೆ ಸ್ವಾಹಿಲಿ. 15ನೇ ಶತಮಾನದಲ್ಲಿ ಯುರೋಪಿಯನ್ನರು ಭಾರತಕ್ಕೆ ಬರುವವರೆಗೆ ಈ ಭಾಷೆಯು ಆಫ್ರಿಕಾದ ಪೂರ್ವ ಕರಾವಳಿ ಜನರಲ್ಲಿ ಹೆಚ್ಚಾಗಿ ಬಳಕೆಯಲ್ಲಿತ್ತು.

`ಸ್ವಾಹಿಲಿ' ಎಂದರೆ ಕರಾವಳಿ ಜನ ಎಂದರ್ಥ.ಆಫ್ರಿಕಾದಲ್ಲಿರುವ 5 ಕೋಟಿ ಸ್ವಾಹಿಲಿ ಭಾಷಿಕರಲ್ಲಿ ಸ್ವಾಹಿಲಿ ಸಮುದಾಯದವರ ಪ್ರಮಾಣ ತುಂಬಾ ಕಡಿಮೆ.

ಇದನ್ನು ಯಾವ ಲಿಪಿಯಲ್ಲಿ ಬರೆಯಲಾಗುತ್ತದೆ?
ಮೂಲತಃ ಅದನ್ನು ಅರೇಬಿಕ್ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಈಗ ಬಹುತೇಕ ರೋಮನ್ ಲಿಪಿಯಲ್ಲಿ ಬರೆಯುತ್ತಾರೆ.

ಹೆಚ್ಚು ಗುರುತಾಗಿರುವ ಸ್ವಾಹಿಲಿ ಭಾಷೆಯ ಕೆಲವು ಪದಗಳು ಯಾವುವು?
ಸಫಾರಿ (ದಂಡಯಾತ್ರೆ), ಹಟಾರಿ (ಅಪಾಯ), ಬ್ವಾನಾ (ಸ್ವಾಮಿ), ಹಕೂನ ಮಟಾಟ (ತೊಂದರೆ ಇಲ್ಲ)- ಇವೇ ಮೊದಲಾದ ಪದಗಳು `ಲಯನ್ ಕಿಂಗ್' ಅನಿಮೇಷನ್ ಚಿತ್ರ ಬಂದ ನಂತರ ಜನಪ್ರಿಯವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.