ಆಗ್ನೇಯ ಏಷ್ಯಾದ ಬೊರ್ನಿಯೊ ದ್ವೀಪಗಳು ಮತ್ತು ಸುಮಾತ್ರಾ ಕಾಡಿನಲ್ಲಿ ವಾಸಿಸುವ ಉದ್ದ ತೋಳಿನ ಕೆಂಚು ಕೂದಲಿನ ವಾನರನ ಹೆಸರು ಒರಂಗುಟಾನ್. ಬೊರ್ನಿಯೊ ದ್ವೀಪವಾಸಿಗಳು ಒರಂಗುಟಾನ್ ಅನ್ನು, ಕಾಡಿನಲ್ಲಿ ವಾಸಿಸಲು ಇಷ್ಟಪಡುವ ಒಂದು ರೀತಿಯ ಮನುಷ್ಯನೇ ಎಂದು ತಿಳಿದುಕೊಂಡಿದ್ದರು. ಆ ಕಾರಣದಿಂದಲೇ ಒರಂಗುಟಾನ್ ಎಂಬ ಹೆಸರು ಬಂತು.

ಅದರ ಅರ್ಥ ಕಾಡು ಮನುಷ್ಯ. ಉಳಿದ ವಾನರಗಳಿಗಿಂತ ಮನುಷ್ಯನನ್ನು ಹೆಚ್ಚು ಹೋಲುವ ಇದು ಗೋರಿಲ್ಲಾಗಳಷ್ಟು ದೊಡ್ಡ ಗಾತ್ರದ್ದಲ್ಲ. ಪೂರ್ಣ ಬೆಳೆದ ಒರಂಟುಗಾನ್ ಒಂದೂವರೆ ಮೀಟರ್ ಎತ್ತರ ಬೆಳೆಯುತ್ತದೆ. ಅವು ನೆಲದ ಮೇಲೆ ಹೆಚ್ಚು ಸಮಯ ಕಳೆಯುವುದಿಲ್ಲ. ಮರದಿಂದ ಮರಕ್ಕೆ ಹಾರುತ್ತಾ ಆಹಾರ ಹುಡುಕುತ್ತವೆ. ಎಲೆಗಳು, ಹಣ್ಣು, ಮೊಗ್ಗು, ಮೊಟ್ಟೆ, ಕೀಟಗಳು, ಪಕ್ಷಿಗಳ ಮೊಟ್ಟೆ, ಮರದ ತೊಗಟೆಗಳನ್ನು ತಿನ್ನುತ್ತವೆ.

ಮರದ ಕೊಂಬೆಯಲ್ಲೇ ಮಲಗುತ್ತವೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಮೇಲೆ ಸುರಕ್ಷಿತ ಜಾಗ ಮಾಡಿಕೊಂಡಿರುತ್ತವೆ. ಒರಂಗುಟಾನ್ಗೆ ದೊಡ್ಡ ಶತ್ರು ಮನುಷ್ಯ. ಕಾಡುಗಳನ್ನು ಮನುಷ್ಯರು ಕಡಿಯಲಾರಂಭಿಸಿದ್ದು ಅವುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಯಿತು. ಒರಂಗುಟಾನ್ ಬೇಗ ಪಳಗುವ ಪ್ರಾಣಿಯಾದ್ದರಿಂದ ಸಾಕುಪ್ರಾಣಿಗಳನ್ನಾಗಿ ಮಾಡಿಕೊಳ್ಳುವ ಹವ್ಯಾಸ ಹೆಚ್ಚಾಯಿತು. ಸದ್ಯಕ್ಕೆ ಒರಂಗುಟಾನ್ಗಳನ್ನು ಮೃಗಾಲಯಗಳಲ್ಲಷ್ಟೇ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.