ಮಾನಿಟರ್ ಮುಂದೆ ಕೂತಿದ್ದ ನಿರ್ದೇಶಕರು ಮೈಕ್ನಲ್ಲಿ `ಕಟ್~ ಅಂದದ್ದೇ ಶಾರುಖ್ ಖಾನ್ ತಮ್ಮಿಷ್ಟದ ಸಿಗರೇಟನ್ನು ಹೊರತೆಗೆದರು. ಎರಡು ಬೆರಳುಗಳ ಮಧ್ಯೆ ಅದನ್ನು ಸಿಕ್ಕಿಸಿಕೊಂಡು ಸೆಟ್ನ ಆಪ್ತೇಷ್ಟರ ಜೊತೆ ಮಾತನಾಡುತ್ತಾ ಓಡಾಡಿದರು. ಮುಂದಿನ ಶಾಟ್ ಯಾವುದೆಂದು ಕೇಳಿಕೊಂಡರು. ಸಿಗರೇಟು ತುಟಿಗಳ ಮಧ್ಯೆ ಸೇರಿತು. ಸಹಾಯಕ ಅದಕ್ಕೆ ಲೈಟರ್ ಕಿಡಿ ತಾಕಿಸಿದ್ದೂ ಆಯಿತು.

ಆರಾಮ ಕುರ್ಚಿ ಮೇಲೆ ದಿವಿನಾಗಿ ಕೂತು ಥೇಟ್ `ಬಾಲಿವುಡ್ ಬಾದ್ಶಾ~ ಗತ್ತಿನಲ್ಲಿ ಶಾರುಖ್ ಸಿಗರೇಟು ಸೇದತೊಡಗಿದರು. ಸೆಟ್ನಲ್ಲಿದ್ದವರಿಗೆಲ್ಲ ಅದು ಮಾಮೂಲು ಸಂಗತಿ. ಹಾಗಾಗಿ ಯಾರೂ ಶಾರುಖ್ ಸಿಗರೇಟಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಶಾರುಖ್ ಖಾನ್ಗೂ ತಮ್ಮ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂಬ ಭಾವನೆ. ಹಾಗಾಗಿ ಅವರು ಕದ್ದುಮುಚ್ಚಿ ಸಿಗರೇಟು ಸೇದಿದವರೇನಲ್ಲ.

ಒಂದು ಸಿಗರೇಟು ಸೇದಿದ್ದಾಯಿತು. ಇನ್ನೊಂದು ಶಾಟ್ಗೆ ಸಿದ್ಧತೆಗಳಿನ್ನೂ ಮುಗಿದಿರಲಿಲ್ಲ. ಎದುರಿನ ಪಾಯಿಯ ಮೇಲಿದ್ದ ಸಿಗರೇಟು ಪ್ಯಾಕ್ ಮತ್ತೆ ಬಿಚ್ಚಿಕೊಂಡಿತು. ಇನ್ನೊಂದು ಸಿಗರೇಟು. ಮತ್ತೆ ಲೈಟರ್ ಸದ್ದು. ಮುಂದಿನ ಚಿತ್ರೀಕರಣದ ಭಾಗದ ಸ್ಕ್ರಿಪ್ಟ್ ತಿರುವಿಹಾಕುತ್ತಾ ಶಾರುಖ್ ದಂ ಎಳೆಯತೊಡಗಿದರು.

ಕೆಲವು ನಿಮಿಷಗಳಲ್ಲಿ ಇನ್ನಷ್ಟು ಹೊಗೆ ಉಗುಳಿದ್ದಾಯಿತು. ಅಷ್ಟರಲ್ಲಿ ಇನ್ನೊಬ್ಬ ಸಹಾಯಕ ತಣ್ಣಗಿನ ಟಿಶ್ಯೂ ತಂದಿತ್ತ. ಅದರಲ್ಲಿ ಮುಖ ತಿಕ್ಕಿಕೊಂಡು ಫ್ರೆಶ್ ಆದ ಶಾರುಖ್ ಮೇಕಪ್ಗೆ ತಮ್ಮನ್ನು ಒಡ್ಡಿಕೊಂಡರು. ಮುಖದ ಕಾಂತಿ ಹೆಚ್ಚಿಸುವ ಕ್ರೀಮುಗಳನ್ನು ಹಾಕಿ ತಿಕ್ಕಿದ ನಂತರ ಅದರ ಮೇಲೆ ಪೌಡರ್ನ ಸಣ್ಣ ಪದರ. ಇನ್ನೇನು ತುಟಿಗೆ ಬಣ್ಣ ಹಚ್ಚಬೇಕು, ಶಾರುಖ್ ಖಾನ್ ತಡೆದರು. `ಇನ್ನೊಂದು ಸಿಗರೇಟು ಸೇದಿಬಿಡುತ್ತೇನೆ~ ಎಂದವರೇ ಎದ್ದುನಿಂತರು. ಹೀಗೆ ಒಂದಿಷ್ಟು ನಿಮಿಷಗಳಲ್ಲೇ ಎದುರಲ್ಲಿದ್ದ ಬೂದಿಬಾನಿ (ಆ್ಯಷ್ ಟ್ರೇ) ತುಂಬುತ್ತಾ ಹೋಯಿತು.

ಇನ್ನೊಂದು ಶಾಟ್ನ ಚಿತ್ರೀಕರಣ ಕೂಡ ಮುಗಿಯಿತು. ಸಣ್ಣ ಬ್ರೇಕ್ ನಂತರ ಶಾರುಖ್ ಸಿಗರೇಟು ಪ್ರೀತಿ ಮತ್ತೆ ಅವಿರತವಾಗಿ ವ್ಯಕ್ತಗೊಳ್ಳತೊಡಗಿತು. ಈ ಸಲ ಅವರು ಸಿಗರೇಟು ಹಚ್ಚಿ ಸಣ್ಣ ವಾಕ್ ಮಾಡುತ್ತಾ ದೂರದ ಕಟ್ಟೆ ಮೇಲೆ ಕೂತರು.

ದಿವ್ಯಾನಂದದಿಂದ ಅವರು ಸಿಗರೇಟು ಹೊಗೆ ಬಿಡುವ ಭಾವದಲ್ಲಿದ್ದರು. ಯಾವುದೋ ಬೆಳಕಿನ ಪ್ರತಿಫಲನ ಕಂಡಂತಾಯಿತು. ಬೆಳಕು ಹೊಮ್ಮಿದ ಕಡೆ ಥಟ್ಟನೆ ತಿರುಗಿದರು... ಅರೆ, ಕತ್ರಿನಾ ಕೈಫ್. ಕತ್ರಿನಾ ತುಂಬಾ ಖುಷಿಯಿಂದ ನಾಯಕನಟನ ಬಳಿಗೆ ಬಂದರು.

ಇಬ್ಬರೂ ಅದೇ ಮೊದಲು ಒಟ್ಟಾಗಿ ನಟಿಸುತ್ತಿರುವುದರಿಂದ ಕತ್ರಿನಾ ತುಸು ಹೆಚ್ಚೇ ಭಾವುಕರಾಗಿದ್ದರು. ಶಾರುಖ್ ಎಂದಿನ ತಮ್ಮ ತಮಾಷೆಯ ಧಾಟಿಯಲ್ಲಿ, `ನೀನು ಬಂದದ್ದಕ್ಕೆ ಹಾಗೆ ಬೆಳಕು ಕಣ್ಣಿಗೆ ಹೊಡೆಯಿತಾ~ ಎಂದು ಕಿಚಾಯಿಸಿದರು. ಕತ್ರಿನಾ ತಮ್ಮ ಬೆನ್ನಹಿಂದೆ ಅಡಗಿಸಿಟ್ಟಿದ್ದ ಕ್ಯಾಮೆರಾ ತೆಗೆದು, `ನಿಮ್ಮ ಸಿಗರೇಟು ಪ್ರೀತಿಯ ಕ್ಷಣಗಳೆಲ್ಲಾ ಇಲ್ಲಿವೆ~ ಎನ್ನುತ್ತಾ ಒಂದೊಂದೇ ಚಿತ್ರಗಳನ್ನು ತೋರಿಸುತ್ತಾ ಹೋದರು.

ಕೆಲವೇ ಕ್ಷಣಗಳಲ್ಲಿ ಶಾರುಖ್ಗೆ ನಖಶಿಖಾಂತ ಸಿಟ್ಟುಬಂದಿತು. `ಯೂ ಕಾಂಟ್ ಡೂ ದಿಸ್~ ಎಂದು ಸಿನಿಮಾ ಸಂಭಾಷಣೆಯ ಶೈಲಿಯಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು. `ಸಿಗರೇಟು ಸೇದುವುದು ನನ್ನ ವೈಯಕ್ತಿಕ ಕೆಲಸ. ಅದನ್ನು ಕದ್ದು ಮುಚ್ಚಿ ಹೀಗೆಲ್ಲಾ ಶೂಟ್ ಮಾಡುವುದು ಸರಿಯಲ್ಲ. ಸೆಲೆಬ್ರಿಟಿಗಳೂ ಮನುಷ್ಯರೇ.

ಹಾಗಂತ ಅವರ ಚಟಗಳನ್ನೆಲ್ಲಾ ದಾಖಲು ಮಾಡುವುದು ಒಳ್ಳೆಯದಲ್ಲ. ಫೋಟೋ ತೆಗೆಯುವ ಮೊದಲು ನನ್ನನ್ನು ಒಂದು ಮಾತು ಕೇಳಬೇಕಿತ್ತು. ದಿಸ್ ಈಸ್ ನಾಟ್ ಗುಡ್ ಮ್ಯಾನರ್ಸ್...~ ಎಂದೆಲ್ಲಾ ಪಟಪಟನೆ ಬೈಗುಳಗಳ ಮಳೆ ಸುರಿಸತೊಡಗಿದರು.

ಕತ್ರಿನಾ ನೋಡುವತನಕ ನೋಡಿ, ಕ್ಯಾಮೆರಾ ತೆಗೆದು ಶಾರುಖ್ ಕೈಗಿತ್ತು, `ಹ್ಯಾವ್ ಎ ನೈಸ್ ಡೇ. ನೌ ರಿಲ್ಯಾಕ್ಸ್ ಅಂಡ್ ಹ್ಯಾವ್ ಎ ಸ್ಮೋಕ್~ (ಶುಭದಿನ. ಈಗ ಸ್ವಲ್ಪ ನಿರಾಳ ಮಾಡಿಕೊಳ್ಳಿ. ಒಂದು ಸಿಗರೇಟು ಸೇದಿ ಹಗುರಾಗಿ) ಎಂದು ನಾಜೂಕಾಗಿ ಪ್ರತಿಕ್ರಿಯಿಸಿ ಅಲ್ಲಿಂದ ನಿಧನಿಧಾನ ಹೆಜ್ಜೆಹಾಕಿದರು. ಸ್ವಲ್ಪ ದೂರಕ್ಕೆ ಹೋದ ನಂತರ ಹಿಂದಿರುಗಿ ನೋಡಿ ನಕ್ಕರು. ಶಾರುಖ್ ಖಾನ್ ನಗಲಿಲ್ಲ. ಸಹಾಯಕ ಬಂದು ಇನ್ನೊಂದು ಶಾಟ್ ರೆಡಿ ಎಂದಾಗ ಶಾರುಖ್ ಕತ್ರಿನಾ ವರ್ತನೆಯ ಗುಂಗಿನಿಂದ ಹೊರಬಂದದ್ದು.

ಸೆಟ್ನಲ್ಲಿ ಸಿದ್ಧತೆಗಳು ಮುಗಿದದ್ದೇ ಇನ್ನೊಂದು ಶಾಟ್ಗೆ ಮುನ್ನ ಒಂದು ಸಿಗರೇಟು ಸೇದಿಬಿಡುವ ಉಮೇದಿನಿಂದ ಶಾರುಖ್ ಅದನ್ನು ಬಾಯಿಗಿಟ್ಟರು. ತಕ್ಷಣ ಏನೋ ಜ್ಞಾನೋದಯವಾದವರಂತೆ ಅದನ್ನು ತೆಗೆದು, ಸುತ್ತಮುತ್ತಲೂ ನೋಡಿದರು. ಕತ್ರಿನಾ ಅವರನ್ನು ಈ ರೀತಿಯೂ ಕಾಡಲಾರಂಭಿಸಿದ್ದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.