ಒಂದಾಗಿ ಹಾಡೋಣ ನವವರ್ಷ ಗೀತ
ಸ್ವಾಗತವ ಮಾಡೋಣ ಶುಭದೊಸಗೆ ಸಹಿತ

ಕಾರ್ಮೋಡವೋಸರಿಸಿ ರವಿಯು ಬೆಳಗುತ ಬರಲಿ
ಮಧುಮಯ ಸುವಾರ್ತೆಯನು ಮಾರುತನು ತರಲಿ
ಮಾನವಾಂತಃಕರಣ ಸುಪ್ರಸನ್ನತೆಗೊಳಲಿ
ರಕ್ತರಂಜನೆ ನಿಲಲಿ, ನೀತಿ ಗೆಲಲಿ!

ಉತ್ಪಾತ, ಉನ್ಮಾದ ಉಡುಗಿ ಹೋಗಲಿ ವಿಮಲ
ಉಲ್ಲಾಸದೊಸರುಕ್ಕಿ ಬದುಕ ತೋಯಿಸಲಿ
ಎಲ್ಲವರ ಹೃದಯದಲಿ ಸಲ್ಲಲಿತ ಸುಪ್ರೇಮ
ಪಲ್ಲವಿಸಿ ಸೋದರತೆ ಹಸನುಗೊಳಲಿ

ಮಳೆಬೆಳೆಗಳೆಲ್ಲೆಡೆಯು ಸಮೃದ್ಧವಾಗಿರಲಿ
ತುಷ್ಟಿ ಪುಷ್ಟಿಯು ಶಾಂತಿ ಪಸರಿಸಿರಲಿ
ಅಜ್ಞಾನ, ದಾರಿದ್ರ್ಯವಡಗಿ ಅರಿವಿನ ಬೆಳಕು
ಸರ್ವಚೇತನಗಳನು ಮುನ್ನಡೆಸಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಒಂದಾಗಿ ಹಾಡೋಣ ನವವರ್ಷ ಗೀತ
ಸ್ವಾಗತವ ಮಾಡೋಣ ಶುಭದೊಸಗೆ ಸಹಿತ

ಕಾರ್ಮೋಡವೋಸರಿಸಿ ರವಿಯು ಬೆಳಗುತ ಬರಲಿ
ಮಧುಮಯ ಸುವಾರ್ತೆಯನು ಮಾರುತನು ತರಲಿ
ಮಾನವಾಂತಃಕರಣ ಸುಪ್ರಸನ್ನತೆಗೊಳಲಿ
ರಕ್ತರಂಜನೆ ನಿಲಲಿ, ನೀತಿ ಗೆಲಲಿ!

ಉತ್ಪಾತ, ಉನ್ಮಾದ ಉಡುಗಿ ಹೋಗಲಿ ವಿಮಲ
ಉಲ್ಲಾಸದೊಸರುಕ್ಕಿ ಬದುಕ ತೋಯಿಸಲಿ
ಎಲ್ಲವರ ಹೃದಯದಲಿ ಸಲ್ಲಲಿತ ಸುಪ್ರೇಮ
ಪಲ್ಲವಿಸಿ ಸೋದರತೆ ಹಸನುಗೊಳಲಿ

ಮಳೆಬೆಳೆಗಳೆಲ್ಲೆಡೆಯು ಸಮೃದ್ಧವಾಗಿರಲಿ
ತುಷ್ಟಿ ಪುಷ್ಟಿಯು ಶಾಂತಿ ಪಸರಿಸಿರಲಿ
ಅಜ್ಞಾನ, ದಾರಿದ್ರ್ಯವಡಗಿ ಅರಿವಿನ ಬೆಳಕು
ಸರ್ವಚೇತನಗಳನು ಮುನ್ನಡೆಸಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.