ದೊಡ್ಡವರೆಲ್ಲರ ಬಾಯಲ್ಲಿ ‘ವಿಜಿ’ ಆಗಿದ್ದ ಪುಟ್ಟ ಹುಡುಗಿಗೆ ಮಲೆನಾಡ ಹಸಿರಿನ ನಡುವೆ ‘ಕುಪ್ಳ’ ಕಂಡರೆ ಅದೇನೋ ಕುತೂಹಲ. ಆ ಪುಟ್ಟ ಹುಡುಗಿ ಈಗ ಮಕ್ಕಳಿಗಾಗಿ ಆಸಕ್ತಿಯಿಂದ ಬರೆಯುತ್ತಿರುವ ಕವಯಿತ್ರಿ, ಮಕ್ಕಳ ನಡುವೆಯೇ ಮೂಡಿಗೆರೆಯಲ್ಲಿರುವ ಶಿಕ್ಷಕಿ ವಿಜಯಶ್ರೀ ಹಾಲಾಡಿ.

ಕುಪ್ಳ ಎಂದರೆ ಕೆಂಬೂತ. ಕೆಂಪು–ಕಪ್ಪು ಮಿಶ್ರಿತ ರಂಗಿನ ಹಕ್ಕಿ. ಅದರ ಬಾಲದ ಗರಿಗಳು ಗಡಿಬಿಡಿಯಲ್ಲಿ ಸಿಕ್ಕಿಸಿಕೊಂಡಂತೆ ಬರೀ ತಮಾಷೆ. ನಾಚಿಕೆಯಿಂದ ನೃತ್ಯಮಾಡುವಂತೆ ನಡೆಯುತ್ತಾ ಒಮ್ಮೊಮ್ಮೆ ಪೊದೆಯಿಂದ ಪೊದೆಗೆ ಹಾರುತ್ತಾ ತೋಟಗಳಲ್ಲಿ ಓಡಾಡಿಕೊಂಡಿರುತ್ತದೆ. ವಿಜಿಗಂತೂ ಕುಪ್ಳ ಎಂದರೆ ಖುಷಿ. ಅವಳ ಮನೆಯ ಹತ್ತಿರ ತೆಂಗು, ಬಾಳೆಯ ತೋಟಗಳಿದ್ದವು. ಅಲ್ಲೆಲ್ಲ ಕುಪ್ಳ ಕಾಣಸಿಗುತ್ತಿತ್ತು. ಶಾಲೆ ದಾರಿಯಲ್ಲಿ ನಡೆದುಬರುವಾಗಲೂ ಒಮ್ಮೊಮ್ಮೆ ಪೊದೆಗಳ ಮಧ್ಯದಲ್ಲಿ ನಿಶ್ಶಬ್ದವಾಗಿ ಹಾರುತ್ತಿತ್ತು. ಅದು ಪೊದೆಯ ಮಧ್ಯದಲ್ಲಿ ಕುಳಿತು ಕೂಗುವಾಗ ದೋಸೆ ಹೊಯ್ದಂತೆ ಚೊಂಯ್ ಚೊಂಯ್ ಶಬ್ದ ಬರುತ್ತಿತ್ತು.

ಆಗ ಅವಳ ದೊಡ್ಡಮ್ಮ ‘ಕುಪ್ಳ ದೋಸೆ ಹೊಯ್ಯುತ್ತಿದೆ ನೋಡು’ ಎನ್ನುತ್ತಿದ್ದರು. ‘ಕುಪ್ಳಂಗೊಂದು ದೋಸೆ, ಅದರ ಗಂಡಂಗೊಂದು ದೋಸೆ, ಅದರ ಮಗುವಿಗೊಂದು ದೋಸೆ....’ ಹೀಗೆ ಅವರಿಬ್ಬರು ಎಣಿಸುತ್ತಿದ್ದರು. ‘ಕುಪ್ಳಾ ಕುಪ್ಳಾ ನಿನ್ನ ಗಂಡ ಬಂದ ನೋಡು ಎನ್ನಬೇಕು, ಆಗ ಅದು ನಾಚಿಕೆಯಿಂದ ಪೊದೆಯಲ್ಲಿ ಅಡಗಿ ಕೂರುತ್ತದೆ’ ಎಂದು ದೊಡ್ಡಮ್ಮ ಹೇಳಿಕೊಡುತ್ತಿದ್ದರು. ಅವಳು ಹಾಗೇ ಮಾಡುತ್ತಿದ್ದಳು. ಅದು ಪೊದೆಯಲ್ಲಿ ಅಡಗಿಕೂತಾಗ ಜೋರಾಗಿ ನಕ್ಕು ಕುಣಿದಾಡುತ್ತಿದ್ದಳು.

ಅವಳ ಗೆಳೆಯ ಗೆಳತಿಯರು ಕುಪ್ಳನ ಬಗ್ಗೆ ಬೇರೆಯೇ ಕಥೆ ಹೇಳುತ್ತಿದ್ದರು. ಕುಪ್ಳನನ್ನು ಕಂಡಾಗ ‘ಗೆಲುವು’ ಎನ್ನಬೇಕು, ಆ ದಿನ ಮನೆಯಲ್ಲಿ ಪಾಯಸ, ಹೋಳಿಗೆ ಹೀಗೆ ಏನಾದರೂ ಸಿಹಿತಿಂಡಿ ಸಿಗುತ್ತದೆ ಎನ್ನುತ್ತಿದ್ದರು. ವಿಜಿ, ಪ್ರತೀಸಲ ಕುಪ್ಳನನ್ನು ಕಂಡಾಗ ಗೆಲುವು ಎಂದು ಗಟ್ಟಿಯಾಗಿ ಉಚ್ಚರಿಸುತ್ತಿದ್ದಳು. ಆ ದಿನವೇನಾದರೂ ಸಿಹಿ ಸಿಕ್ಕಿದರೆ ‘ಹೋ ಕುಪ್ಳನೇ ಕೊಡಿಸಿದ್ದು’ ಎಂದು ಸಂಭ್ರಮಿಸುತ್ತಿದ್ದಳು.

ಒಮ್ಮೆ ವಿಜಿ ಹೊಟ್ಟೆಭರ್ತಿ ಹಲಸಿನ ಹಣ್ಣಿನ ಕಡುಬು ತಿಂದು ಅಜ್ಜಿಯ ಹಾಸಿಗೆಯಲ್ಲಿ ಮಲಗಿದ್ದಳು; ಅದು ಮಳೆಗಾಲದ ಇರುಳು; ಥಂಡಿ, ಕತ್ತಲು! ಅವಳು ಒಂದು ಸುಂದರ ಹೂತೋಟದಲ್ಲಿ ನಡೆದುಹೋಗುತ್ತಿದ್ದಳು. ಎತ್ತ ನೋಡಿದರೂ ಹೂವಿನ ರಾಶಿ ಅಲ್ಲೊಂದು ಕೇದಗೆಯ ಪೊದೆ. ಆ ಪೊದೆಯಲ್ಲಿ ಒಂದು ಕೆಂಬೂತ ಕುಳಿತಿತ್ತು. ವಿಜಿ ಗಟ್ಟಿಯಾಗಿ ‘ಗೆಲುವು’ ಎಂದು ಉಚ್ಚರಿಸಿದಳು. ಆಗ ಆ ಕುಪ್ಳ ತಕಪಕ ಹಾರಿತು. ನೋಡುತ್ತಾಳೆ, ಅದು ಕೂತ ಜಾಗದಲ್ಲಿ ಒಂದು ಕಡ್ಡಿಗಳ ಗೂಡು, ಆ ಗೂಡಿನಲ್ಲಿ ಹಳದಿ ಬಣ್ಣದ ಮೊಟ್ಟೆಗಳು. ಸಾಧಾರಣ ಮೊಟ್ಟೆಗಳಲ್ಲ, ಚಿನ್ನದ ಮೊಟ್ಟೆಗಳು! ಆಶ್ಚರ್ಯದಿಂದ ತಲೆ ಮೇಲೆತ್ತಿ ನೋಡಿದಳು.

ಕೆಂಬೂತ ಹತ್ತಿರ ಬಂದು, ‘ನೀನು ಜಾಣ ಹುಡುಗಿ, ನಿನ್ನ ಲಂಗವನ್ನು ಮುಂದೆ ಹಿಡಿ’ ಎಂದಿತು. ಇವಳು ಹಾಗೇ ಮಾಡಿದಳು. ಆಗ ಅದು ಒಂದೊಂದೇ ಮೊಟ್ಟೆಯನ್ನು ಎತ್ತಿತಂದು ಇವಳ ಮಡಿಲಿಗೆ ಹಾಕಿತು. ಆರು ಚಿನ್ನದ ಮೊಟ್ಟೆಗಳು! ವಿಜಿ ಖುಷಿಯಿಂದ ಕುಣಿದಾಡತೊಡಗಿದಳು... ಕೈ ಕಾಲು ನೋವುಬರುವಷ್ಟು ಕುಣಿದಳು... ಯಾಕೆಂದೇ ಗೊತ್ತಿಲ್ಲ, ಫಕ್ಕನೆ ಯಾರೋ ತಿವಿದಂತಾಯಿತು. ಗಾಬಯಿಂದ ಕಣ್ಣರಳಿಸಿ ನೋಡಿದಳು. ಕತ್ತಲೆ, ಸುತ್ತಲೂ ಮಸಿಕತ್ತಲೆ...

ಆ ಕತ್ತಲೆಯ ಆಳದಲ್ಲಿ ಅಜ್ಜಿಯ ಧ್ವನಿ! ಹೌದು ಅಜ್ಜಿ ವಟವಟ ಬಯ್ಯುತ್ತಿದ್ದರು! ಅಯ್ಯೋ, ಕ್ರಮೇಣ ಎಲ್ಲವೂ ಅರ್ಥವಾಯಿತು. ಇಷ್ಟೊತ್ತು ಅವಳು ಕನಸಿನಲ್ಲಿದ್ದಳು. ಕುಣಿದಾಡುತ್ತಾ ಅಜ್ಜಿಯ ಹೊಟ್ಟೆ ಮೇಲೇ ಕಾಲೆತ್ತಿ ಹಾಕಿದ್ದಳು. ಥೂ! ನಿರಾಸೆಯಾಯಿತು. ಅವಳಿಗೆ ಅಂಥಾ ಚಿನ್ನದ ಮೊಟ್ಟೆಗಳು ಕೈಗೆ ಸಿಗದೇ ಹೋದವಲ್ಲ.... ಅಜ್ಜಿಯ ಮೇಲೆ ಭಯಂಕರ ಸಿಟ್ಟುಬಂತು. ಕೆನ್ನೆಯೂದಿಸಿಕೊಂಡು ಗೊಣಗುತ್ತ ಬೆನ್ನು ತಿರುಗಿಸಿ ಮಲಗಿಕೊಂಡಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.