* ಬಕಿಂಗ್ಹ್ಯಾಮ್ ಪ್ಯಾಲೆಸ್ಗೆ ಭೇಟಿ ನೀಡುವುದು ಪ್ರವಾಸ ಕಾರ್ಯಕ್ರಮದ ಮುಖ್ಯ ಆದ್ಯತೆ ಆಗಿರಲಿ. ಗಾರ್ಡ್ ಬದಲಾಗುವ ಸಮಾರಂಭವನ್ನು ನೋಡಲು ಸಮಯ ಹೊಂದಿಸಿಕೊಳ್ಳಿ.

* ಪೂರ್ವ ಲಂಡನ್ನಲ್ಲಿ ರಾತ್ರಿ ಹೊತ್ತು ಸುತ್ತಾಡಿ ನಿಜವಾದ ಲಂನ್ ಜೀವನವನ್ನು ಅನುಭವಿಸಿ. ಈ ಭಾಗದಲ್ಲಿ ಸಾಕಷ್ಟು ರೆಸ್ಟೋರೆಂಟ್ಗಳಿವೆ. ನಿಮಗೆ ಒಪ್ಪುವ ಆಹಾರವೂ ಲಭ್ಯ.

* ಕ್ರೀಡಾಂಗಣಗಳು ಇಲ್ಲಿನ ವಿಶೇಷ ಆಕರ್ಷಣೆಯ ಕೇಂದ್ರಗಳು. ಲಾರ್ಡ್ಸ್ನಲ್ಲಿ ಬಿಲ್ಲುಗಾರಿಕೆ ಸ್ಪರ್ಧೆ ನೋಡುವ ಜೊತೆಗೆ ಅದೇ ಕ್ರೀಡಾಂಗಣದ ಕ್ರಿಕೆಟ್ ವಸ್ತು ಸಂಗ್ರಹಾಲಯ ನೋಡುವುದನ್ನು ಮರೆಯಬೇಡಿ.

* ಓಲ್ಡ್ ಟ್ರಾಫೋರ್ಡ್ ಹಾಗೂ ನ್ಯೂ ವೆಂಬ್ಲೆಯ್ ಕ್ರೀಡಾಂಗಣಗಳ ಗ್ಯಾಲರಿಯಲ್ಲಿ ಕುಳಿತು ಒಂದಿಷ್ಟು ಹೊತ್ತು ಕಳೆಯಿರಿ. ಅದೊಂದು ನಿಮ್ಮ ಸ್ಮರಣೀಯ ನೆನಪಾಗಿ ಉಳಿಯುವುದು.

* ಸೇಂಟ್ ಆ್ಯಂಡ್ರ್ಯೂಸ್ ಗಾಲ್ಫ್ ಕೋರ್ಸ್ ನೋಡಲು ಮರೆಯದಿರಿ. ವಿಶ್ವದ ಅತ್ಯಂತ ಸುಂದರವಾದ ಗಾಲ್ಫ್ ಕೋರ್ಸ್ ಇದು.

* ಶಾಪಿಂಗ್ ಮಾಡುವುದಾದರೆ ಮ್ಯಾಂಚೆಸ್ಟರ್ನ ನಾರ್ದನ್ ಕ್ವಾರ್ಟರ್ ಇಲ್ಲವೆ ಕ್ಯಾಮ್ಡೆನ್, ಪೋರ್ಟೊಬೆಲ್ಲೊ ಅಥವಾ ಸ್ಪೀಟಲ್ಫೀಲ್ಡ್ಗೆ ಹೋಗಿ.

* ಮಕ್ಕಳು ಜೊತೆಗೆ ಇದ್ದರೆ ಥೊರ್ಪೆ ಪಾರ್ಕ್ ಹಾಗೂ ಹ್ಯಾರಿ ಪಾಟರ್ ಟೂರ್ ಆಯ್ಕೆ ಮಾಡಿ.

* ಹೇಯ್ಡ, ರಿಚ್ಮಾಂಡ್ ಹಾಗೂ ರೆಜೆಂಟ್ಸ್ನಂಥ ರಾಯಲ್ ಪಾರ್ಕ್ಗಳಲ್ಲಿ ಒಂದೆರಡು ಗಂಟೆ ಸುತ್ತಾಡಿ.

* ಶೇಕ್ಸ್ಪೀಯರ್ ನೆನಪಿನಲ್ಲಿ ಕಟ್ಟಿರುವ ಗ್ಲೋಬ್ ಥಿಯೆಟರ್ ನೋಡಿ ಇತಿಹಾಸದ ನೆನಪುಗಳನ್ನು ತಾಜಾಗೊಳಿಸಿಕೊಳ್ಳಿ. ಲಂಡನ್ನಲ್ಲಿ ಅನೇಕ ರಂಗಮಂದಿರಗಳಲ್ಲಿ ನಿರಂತರವಾಗಿ ನಾಟಕ ಪ್ರದರ್ಶನಗಳು ನಡೆಯುತ್ತವೆ. `ವಾರ್ ಹಾರ್ಸ್~ ಹಾಗೂ `ಜೆರ್ಸಿ ಬಾಯ್ಸ~ ನಾಟಕ ನೋಡಿ.

* ಜೇಬಲ್ಲಿ ಹೆಚ್ಚು ಹಣವಿದ್ದರೆ ಸೆಸೊನ್ನಿಸ್ ಇಲ್ಲವೆ ಎನ್ಒಪಿಐ ಹೋಟೆಲ್ನಲ್ಲಿ ಊಟ ಮಾಡಿ. ಒಲಿಂಪಿಕ್ ಸಂದರ್ಭದಲ್ಲಿ ಇಲ್ಲಿ ಖಂಡಿತವಾಗಿ ರಿಯಾಯಿತಿ ಇರುತ್ತದೆ.

* ರಾತ್ರಿ ಜೀವನದ ಸೊಗಸು ಇಷ್ಟಪಡುವಿರಿ ಎಂದಾದರೆ ಲಂಡನ್ `ನೈಟ್ ಲೈಫ್~ ಹೆಚ್ಚು ಸುಂದರ. ಪಬ್ಗಳು ಬೆಳಿಗ್ಗೆವರೆಗೆ ತೆರೆದಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.